ಬೆಳಗಾವಿ-ಹಲವಾರು ಅತ್ಯಾಚಾರ ಪ್ರಕರಣಗಳಿಗೆ ಸಂಬಂದಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದ್ದು, ಕಳೆದ ಹತ್ತು ವರ್ಳಷಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಇತನಿಗೆ ಗಲ್ಲು ಶಿಕ್ಷೆ ನೀಡಲು ಸದ್ದಿಲ್ಲದೇ ಸಿದ್ಧತೆ ಮಾಡಿಕೊಲ್ಳಲಾಗುತ್ತಿದೆ. ಉಮೇಶ ರೆಡ್ಡಿ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ವಜಾಗೊಂಡ ಹಿನ್ನಲೆಯಲ್ಲಿ ಇತನಿಗೆ ಗಲ್ಲು ಗ್ಯಾರಂಟಿಯಾಗಿದ್ದು ಹಿಂಡಲಗಾ ಕಾರಾಗೃಹದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ
ಬೆಳಗಾವಿಯ ಪ್ರಸಿದ್ದ ಹಿಂಡಲಗಾ ಕಾರಾಗ್ರಹದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರು ಒಟ್ಟು 27 ಜನ ಖೈದಿಗಳಿದ್ದಾರೆ ಅದರಲ್ಲಿ ಇಬ್ಬರು ಮಹಿಳೆಯರಿದ್ದಾರೆ ಈ 27 ಜನರಲ್ಲಿ ವಿಕೃತ ಕಾಮಿ ಉಮೇಶ ರೆಡ್ಡಿಯ ಕಾನೂನಾತ್ಮ ಹೋರಾಟದ ಎಲ್ಲ ಬಾಗಿಲುಗಳು ಬಂದ್ ಆಗಿವೆ ಎಂದು ಹೇಳಲಾಗಿದ್ದು ಈತನಿಗೆ ಗಲ್ಲು ಶಿಕ್ಷೆ ನೀಡಲು ಹಿಂಡಲಗಾ ಜೈಲಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಉಮೇಶ ರೆಡ್ಡಿ 2006 ರಿಂದ ಹಿಂಡಲಗಾ ಜೈಲಿನಲ್ಲಿಯೇ ಇದ್ದಾನೆ. ಗಲ್ಲು ಶಿಕ್ಷೆ ನೀಡುವ ವ್ಯೆವಸ್ಥೆ ರಾಜ್ಯದ ಮೂರು ಜೈಲುಗಳಲ್ಲಿ ಇದೆ ಬಳ್ಳಾರಿ,ಬೆಂಗಳೂರಿನ ಪರಪ್ಪನ ಅಗ್ರಹಾರ,ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದೆ ಆದರೆ ಈಗ ಸದ್ಯಕ್ಕೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮಾತ್ರ ಗಲ್ಲು ಶಿಕ್ಷೆ ನೀಡುವ ವ್ಯೆವಸ್ಥೆ ಮಾತ್ರ ಜೀಂವತವಾಗಿದ್ದು ಈ ಜೈಲಿನಲ್ಲಿಯೇ ಉಮೇಶ ರೆಡ್ಡಿಗೆ ಗಲ್ಲಿಗೇರಿಸುವದು ಖಚಿತವಾದಂತಾಗಿದೆ.
1983ರಲ್ಲಿ ನವ್ಹೆಂಬರ್ ತಿಂಗಳಲ್ಲಿ ಹಣಮಂತ ಎಂಬ ಕೈದಿಗೆ ಹಿಂಡಲಗಾ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು ಅದಾದ ಬಳಿಕ ಇಲ್ಲಿ ಯಾರನ್ನು ಗಲ್ಲಿಗೇರಿಸಿಲ್ಲ 33 ವರ್ಷಗಳ ನಂತರ ವಿಕೃತ ಕಾಮಿ ಉಮೇಶ ರೆಡ್ಡಿ ಈಗ ನೇಣುಗಂಬಕ್ಕೇರುವ ಪರಿಸ್ಥಿತಿ ಎದುರಾಗಿದೆ.
ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಬ್ಲ್ಯಾಕ್ ವಾರೆಂಟ್ ಜಾರಿಯಾದ ಬಳಿಕ ಗಲ್ಲಿಗೇರಿಸುವ ಕ್ಷಣಗನಣೆ ಆರಂಭವಾಗಲಿದೆ ಹಿಂಡಲಗಾ ಜೈಲಿನಲ್ಲಿ ಗಲ್ಲಿಗೇರಿಸುವ ನೇಣುಕಾರಕ {ಚಂಡಾಳನಿ}ಗೆ ತರಬೇತಿ ನೀಡಲಾಗಿದೆ ಎಂದು ನಂಬಲರ್ಹ ಮೂಲಗಳು ದೃಡಪಡಿಸಿವೆ.