ಹಿಂಡಲಗಾ ಜೈಲಿನ ಮೇಲೆ ಪೋಲೀಸರ ದಾಳಿ
ಬೆಳಗಾವಿ- ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ
ನಗರ ಪೊಲೀಸ ಆಯುಕ್ತ ಕೃಷ್ಣ ಭಟ್ ನೇತೃತ್ವದಲ್ಲಿ ದಾಳಿ ನಡೆದಿದೆ
ಡಿಸಿಪಿ, ಎಸಿಪಿ, ಸಿಪಿಐ ಹಾಗೂ ಪಿಎಸ್ಐ ಸೇರಿ ೧೦೦ ಜನ ಸಿಬ್ಬಂದಿ ದಾಳಿ ನಡೆಸಿದ್ದಾರೆ
ಹಿಂಡಲಗಾ ಜೈಲು ತೀವ್ರ ಶೋಧ ನಡೆಸಿರುವ ಸಿಬ್ಬಂದಿ.
ಬೆಳಗ್ಗೆ ೯ ಘಂಟೆಯಿಂದ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ
ಹಿಂಡಲಗಾ ಜೈಲಿನ ದಾಳಿ ನಡೆಸಿರುವ ಪೊಲೀಸರು.
ಜೈಲಿನ ಪ್ರತಿ ಕೋಣೆ, ಮೂಲೆ ಮೂಲೆಯನ್ನು ಸರ್ಚ್
ಜೈಲಿನಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ನಗರ ಪೋಲಿಸ್ ಆಯುಕ್ತ ಜಿ.ಕೃಷ್ಣ ಭಟ್
ಖಚಿತ ಮಾಹಿತಿ ಆಧಾರದ ಹಿನ್ನೆಲೆ ದಾಳಿ. ಡಿಸಿಪಿ, ಎಸಿಪಿಗಳನ್ನ ಸೇರಿ ೧೫೦ ಜನ ಪೋಲಿಸ್ ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿತ್ತು ಆದರೆ ಯಾವುದೇ ಅಕ್ರಮ ಚಟುವಟಿಕೆ ಜೈಲಲ್ಲಿ ಕಂಡು ಬಂದಿಲ್ಲ. ನಮಗೆ ಬಂದ ಮಾಹಿತಿ ಪ್ರಕಾರ ದೊಡ್ಡ ಪ್ರಮಾಣದ ಅಕ್ರಮಗಳು ಕಂಡು ಬಂದಿಲ್ಲ. ಸಣ್ಣ ಪುಟ್ಟ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಆದರೆ ಸರ್ಚ್ ಕೆಲಸ ಮುಂದುವರಿದೆ. ಪಂಚನಾಮ ನಂತರ ಸಂಪೂರ್ಣ ಮಾಹಿತಿ ಕೊಡಲಗಾವುದು. ಜೈಲು ಸಿಬ್ಬಂದಿಗಳು ಶೋಧ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಜೈಲಿನ ಪ್ರತಿ ಕೋಣೆ, ಪ್ರತಿ ಸ್ಥಳದ ಶೋಧ ಕಾರ್ಯ ಮಾಡಲಾಗಿದೆ. ಎಂದು ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ