Breaking News

ಲಕ್ಷ್ಮೀ ಹೆಬ್ಬಾಳಕರ ಎಷ್ಟು ಜನರಿಗೆ ರಾಖಿ ಕಟ್ಟಿದರು ಗೊತ್ತಾ…..?

 

  1. ಬೆಳಗಾವಿ:

ಬೆಳಗಾವಿಯಲ್ಲಿ ಅಪರೂಪದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಸಾವಿರಾರು ಸಹೋದರರು ಸಹೋದರಿಯೊಬ್ಬಳಿಂದ ರಾಕಿ ಕಟ್ಟಿಸಿಕೊಳ್ಳಲು ಸರದಿಯಲ್ಲಿ ನಿಂತಿರುವುದು ದಾಖಲೆ ಮತ್ತು ಹೊಸ ಇತಿಹಾಸ ನಿರ್ಮಾಣವಾಗಿತ್ತು.

ಕಾಂಗ್ರೆಸ್ ನಾಯಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ ಅವರು ಹೊಸ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಿ ಸಾವಿರಾರು ಸಹೋದರರಿಗೆ ರಕ್ಷಾ ಬಂಧನ ಮಾಡುವುದರ ಮೂಲಕ ಸಹೋದರ ಸಹೋದರಿಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ರಾಜಕಾರಣಿಗಳು ತಮ್ಮ ಓಟ್ ಬ್ಯಾಂಕ್‍ಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ ಲಕ್ಷ್ಮೀ ಹೆಬ್ಬಾಳಕರ ಅವರು ಭಾರತೀಯ ದೇಸಿ ಸಂಸ್ಕøತಿಯ ಉಳುವಿಗಾಗಿ ಹೋಲಿ ಮಿಲನ, ರಕ್ಷಾ ಬಂಧನ ದಂತಹ ಕಾರ್ಯಕ್ರಮಗಳನ್ನು ನಡೆಸಿ ಹಿಂದೂ ಸಂಸ್ಕøತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ಪ್ರಯತ್ನ ಪಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.

ಲಕ್ಷ್ಮೀ ಹೆಬ್ಬಾಳಕರ ಅವರು ಇಂದು ತಮ್ಮ ನಿವಾಸದ ಎದುರು ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಬೆಳಗಾವಿ ಗ್ರಾಮಿಣ ಕ್ಷೇತ್ರದ ಸಾವಿರಾರು ಜನ ಸಹೋದರರು ಸರದಿಯಲ್ಲಿ ನಿಂತುಕೊಮಡು ರಾಕಿ ಕಟ್ಟಿಸಿಕೊಂಡು ಅನ್ನ ತಂಗಿ ಸಂಬಂಧವನ್ನು ಗಟ್ಟಿಗೊಳಿಸಿದರು.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಉಚಗಾಂವ, ಸಾಂಬ್ರಾ, ಸುಳೆÉೀಭಾವಿ ಸೇರಿದಂತೆ ತಾಲೂಕಿನ ಮೂಲೆ ಮೂಲೆಯ ಸಹೋದರರು ಬೆಳಗಾವಿಯ ಕುವೆಂಪು ನಗರದಲ್ಲಿ ಮುಗಿಬಿದ್ದು ಸಹೋದರಿ ಲಕ್ಷ್ಮೀ ಹೆಬ್ಬಾಳಕರ ಅವರಿಂದ ರಕಿ ಕಟ್ಟಿಸಿಕೊಂಡು ರಕ್ಷಾ ಬಂಧನಕ್ಕೆ ಒಳಗಾದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳಕರ, ಭಾರತೀಯ ಸಂಸ್ಕøತಿ ಅನನ್ಯ ಮತ್ತು ವಿಭಿನ್ನವಾಗಿದೆ. ಸಂಸ್ಕøತಿ ಬಂಧುತ್ವವನ್ನು ವೃದ್ಧಿಸುವದರ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಹಿರಿಯರು ಆರಂಭಿಸಿದ ಸಂಪ್ರದಾಯ ಎಲ್ಲರಿಗೂ ಸ್ಪೂರ್ತಿ ನೀಡುವ ಉದ್ದೇಶದಿಂದ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇನೆ. ಸಾವಿರಾರು ಜನ ಸಹೋದರರು ತಮ್ಮ ಸಹೋದರಿಗೆ ಆಶಿರ್ವಾದ ಮಾಡಿದ್ದಾರೆ. ಈ ಅಪರೂಪದ ಕಾರ್ಯಕ್ರಮ ಮಾನಸಿಕ ಸಂತೃಪ್ತಿಯನ್ನು ನೀಡಿದೆ. ನನ್ನ ಜೀವಿತಾವದಿಯವರೆಗೂ ಈ ಕಾರ್ಯಕ್ರಮವನ್ನು ಮುಂದುವರೆಸುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.

ಬೆಳಗಾವಿ ತಾಲೂಕಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಮಚಾಯಿತಿ ಸದಸ್ಯರು ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲ ಸಹೋಧರ ಬಂಧುಗಳು ಹೆಬ್ಬಾಳಕರ ಅವರಿಂದ ರಾಕಿ ಕಟ್ಟಿಸಿಕೊಳ್ಳುವುದರ ಮೂಲಕ ಹೆಬ್ಬಾಳಕರ ಅವರಿಗೆ ಆಶಿರ್ವಾಧ ನೀಡಿದ ಈ ಕಾರ್ಯಕ್ರಮ ಹೊಸ ದಾಖಲೆ ನಿರ್ಮಿಸಿದೆ.

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *