Breaking News

ಬೆಳಗಾವಿಯಲ್ಲಿ ಟ್ರೆಂಗಲ್ ಲವ್..ಕೆನ್ನೆಗೆ ಹೊಡೆಗಾಗ ಹೊರಬಿತ್ತು ಡವ್..!

 

ಬೆಳಗಾವಿ- ನಗರದಲ್ಲಿ ವಿಚಿತ್ರಲವ್ ಸ್ಟೋರಿ ಯೊಂದು ಬೆಳಕಿಗೆ ಬಂದಿದೆ ಬೆರೊಬ್ಬಳ ಜೊತೆ ಮದುವೆ ಮಾಡಿಕೊಂಡ ಪ್ರಿಯಕರನೊಬ್ಬ ತನ್ನ ಹಳೆಯ ಪ್ರಿಯತಮೆಯ ಕಪಾಳಕ್ಕೆ ಹೊಡೆದು ಜೈಲು ಸೇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ
ಬೆಳಗಾವಿಯ ಅಮನ್ ನಗರದ ಅಜೀಮ ಎಂಬ ಯುವಕ ಬೆಳಗಾವಿಯ ಹುಡಗಿಯೊಬ್ಬಳ ಜೊತೆ ಲವ್ ಮಾಡಿ ಆಕೆಯ ಜೊತೆ ಸುತ್ತಾಡಿ ಎರಡು ತಿಂಗಳ ಹಿಂದೆ ಈಕೆಗೆ ಗೊತ್ತಾಗದ ಹಾಗೆ ಬೇರೊಬ್ಬ ಹುಡುಗಿಯ ಜೊತೆ ಮದುವೆಯಾಗಿದ್ದ ಈ ವಿಷಯ ಹೇಗೋ ಲವರ್ ಗೆ ಗೊತ್ತಾಗಿ ಇದು ಸರಿಯಲ್ಲ ನನ್ನನ್ನು ಲವ್ ಮಾಡಿ ನನ್ನ ಜೊತೆ ಸುತ್ತಾಡಿ ಬೇರೊಬ್ಬಳ ಜೊತೆ ಮದುವೆ ಆಗೋದು ಎಷ್ಟರ ಮಟ್ಟಿಗೆ ಸರಿ ಎಂದು ಹಳೆಯ ಲವರ್ ಅಜೀಮ್ ಗೆ ಅವಾಜ್ ಹಾಕಿದ್ದಾಳೆ
ಬೇರೊಬ್ಬಳ ಜೊತೆ ಮದುವೆ ಮಾಡಿಕೊಂಡಿದ್ದ ಅಜೀಮ್ ತನ್ನ ಹಳೆಯ ಲವರ್ ಗೆ ಕನ್ವಿನ್ಸ ಮಾಡುವ ಪ್ರಯತ್ನ ಮಾಡಿದ್ದಾನೆ ಹಳೆಯ ಲವರ್ ಕರೆದಾಗಲೆಲ್ಲ ಹೋಗಿದ್ದಾನೆ
ಹಳೆಯ ಲವರ್ ಫೋನ್ ಮಾಡಿದಾಗ ಆಕೆಯನ್ನು ಭೇಟಿಯಾಗೋದು ಆಕೆಯ ಜೊತೆ ಸುತ್ತಾಡಿ ಆಕೆಯನ್ನು ಟ್ಯುಶನ್ ಕ್ಲಾಸಿಗೆ ಬಿಡೋದು ಕರೆದುಕೊಂಡು ಬರುವದನ್ನು ಮಾಡಿಕೊಂಡಿದ್ದ
ಆದ್ರೆ ಅಜೀಮ್ ತನ್ನ ಹಳೆಯ ಲವರ್ ಜೊತೆ ಇಂದು ಕಿಲ್ಲಾ ಕೆರೆಗೆ ಹೋಗಿದ್ದ ಕೆರೆಯ ದಂಡೆಯ ಮೇಲೆ ಕುಳಿತು ಹರಟೆ ಹೊಡೆಯುವಾಗ ಆಕೆಯ ಸೆಲ್ ಫೋನ್ ತಗೊಂಡು ವ್ಯಾಟ್ಸಪ್ ಮೆಸೇಜ್ ಚೆಕ್ ಮಾಡಿದ್ದಾನೆ ಆಕೆ ದುಬೈಯಲ್ಲಿರುವ ಯುವಕನ ಜೊತೆ ಚಾರ್ಟಿಂಗ್ ಮಾಡುವ ವಿಷಯ ಅಜೀಮ ಗೆ ಗೊತ್ತಾಗಿ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ ನಾನು ಬೇರೊಬ್ಬಳ ಜೊತೆ ಮದುವೆ ಆಗಿದ್ದಕ್ಕೆ ನನ್ನನ್ನು ಬ್ಲ್ಯಾಕ್ ಮೇಲ್ ಮಾಡ್ತಿಯಾ ಬೇರೊಬ್ಬನ ಜೊತೆ ಸಂಪರ್ಕ ಇಟ್ಕೊಂಡಿದ್ದೀಯಾ ಎಂದು ಸಿಟ್ಟಿನಿಂದ ಅಜೀಮ್ ತನ್ನ ಹಳೆಯ ಲವರ್ ಗೆ ಹೊಡೆದಾಗ ರಕ್ತ ಬಂದಿದೆ
ಅಜೀಮ್ ನಿಂದ ಹೊಡೆಸಿಕೊಂಡ ಈ ಹುಡಗಿ ಮನೆಗೆ ಹೋಗಿದ್ದಾಳೆ ಪಾಲಕರು ವಿಚಾರಿಸಿದ್ದಾರೆ ಆಗ ಹುಡಗಿ ಎಲ್ಲ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾಳೆ
ಪಾಲಕರು ತಮ್ಮ ಮಗಳೊಂದಿಗೆ ಖಡೇಬಝಾರ್ ಪೋಲೀಸ್ ಠಾಣೆಗೆ ಬಂದು ಅಜೀಮ್ ವಿರುದ್ಧ ದೂರು ಕೊಟ್ಟಿದ್ದಾರೆ ದೂರು ಕೊಡುವಾಗ ಅಜೀಮ್ ನನ್ನನ್ನು ಕಿಲ್ಲಾ ಕೆರೆಯ ಬಳಿ ಕಿಡ್ನ್ಯಾಪ್ ಮಾಡಿದ್ದ ಎಂದು ಸುಳ್ಳು ಹೇಳಿದ್ದಾಳೆ ನಾವು ಎಲ್ಲ ಕಡೆ ಸಿಸಿ ಟಿವ್ಹಿ ಕ್ಯಾಮರಾ ಹಾಕಿದ್ದೇವೆ ಅದರಲ್ಲಿ ಎಲ್ಲ ಕಾಣುತ್ತೇ ನಿಜ ಹೇಳಮ್ಮ ಎಂದು ಪೋಲೀಸರು ಕೇಳಿದಾಗ ಸತ್ಯಾಂಶವನ್ನು ಪೋಲೀಸರೆದುರು ಹೇಳಿದ್ದಾಳೆ
ದೂರು ದಾಖಲಿಸಿಕೊಂಡ ಪೋಲೀಸರು ಅಜೀಮ್ ನನ್ನು ಹಿಡಿದು ಜೈಲಿಗೆ ಕಳುಹಿಸಿದ್ದಾರೆ
ಒಬ್ಬಳ ಜೊತೆ ಲವ್ ಮಾಡಿ ಇನ್ನೊಬ್ಬಳ ಜೊತೆ ಮದುವೆಯಾಗಿ ಮದುವೆಯಾದ ಬಳಿಕವೂ ಹಳೆಯ ಲವರ್ ಜೊತೆ ಸಂಪರ್ಕ ಇಟ್ಟುಕೊಂಡ ಅಜೀಮ್ ಈಗ ಜೈಲು ಸೇರಿದ್ದಾನೆ

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.