ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲೆ ಮಾಡಿದವರಿಗೆ ಬೆತ್ತದ ರುಚಿ…..!!!!
ಬೆಳಗಾವಿ- ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ಗೆ ಯತ್ನಿಸಿದ ಖತರ್ನಾಕ್ ಗ್ಯಾಂಗ್ ಅರೆಸ್ಟ್ ಆಗಿದೆ ದುಡ್ಡಿಗಾಗಿ ಸಾಲ ಕೊಟ್ಟವನನ್ನೇ ಬೆತ್ತಲು ಮಾಡಿದ ಆರು ಕಿರಾತಕರು ಪೋಲೀಸರ ಬಲೆಗೆ ಬಿದ್ದಿದ್ದು ಬೆಳಗಾವಿ ನಗರದಲ್ಲಿ ಹನಿಟ್ರ್ಯಾಪ್ ಮಾಡುವ ಜಾಲ ಸರಣಿಯಂತೆ ಬಯಲಾಗುತ್ತಿವೆ
ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ
ಓರ್ವ ಬಾಲಕ, ಇಬ್ಬರು ಮಹಿಳೆಯರು ಸೇರಿ ಆರು ಜನರ ಬಂಧಿಸಿದ್ದಾರೆ. ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಪೋಲೀಸರ ವಶದಲ್ಲಿದೆ.
ಮಹಾಂತೇಶ ನಗರದ ಬಿಬಿ ಆಯೇಷಾ ಶೇಖ್ ಆಶ್ರಯ ಕಾಲೊನಿ ರುಕ್ಮಿಣಿ ನಗರ ನಿವಾಸಿ ಹೀನಾ ಅಕ್ಬರ್ ಸವಣೂರ,ಅಲೀಶಾನ್ ಶಾಬುದ್ದೀನ್, ಅಖೀಬ್ ಅಲ್ಲಾಭಕ್ಷ್ ಬೇಪಾರಿ,ಸಲ್ಮಾನ್ ಗುಲಾಜ್‌ಬೇಗ್, ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿರುವ ಮಾಳ ಮಾರುತಿ ಪೋಲೀಸರು ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಟ್ಟೆ ವ್ಯಾಪಾರಿ ಎಂ.ಎಂ.ಮುಜಾವರ್‌ಗೆ 6 ಲಕ್ಷ ನೀಡಬೇಕಿದ್ದ ಆರೋಪಿ ಬಿಬಿಆಯೇಷಾ
ಹಣ ಕೊಡ್ತೇವೆ ಎಂದು ಕರೆದೊಯ್ದು ಮನೆಯಲ್ಲಿ ಸಾಲ ಕೊಟ್ಟವನನ್ನೇ ಕೂಡಿಹಾಕಿಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು
ಹಣ ನೀಡದಿದ್ರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಮನೆಗೆ ಹೋಗಿ ಹಣ ತರುವುದಾಗಿ ಹೇಳಿ ಹೊರಬಂದಿದ್ದ ಬಟ್ಟೆ ವ್ಯಾಪಾರಿ ಮುಜಾವರ್
ಬಳಿಕ ನೇರವಾಗಿ ಮಾಳಮಾರುತಿ ಠಾಣೆಗೆ ದೂರು ನೀಡಿದ್ದ ಎಂ.ಎಂ.ಮುಜಾವರ್
ದೂರು ಆಧರಿಸಿ ಆರು ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು ಹನಿ ಟ್ರ್ಯಾಪ್ ಗ್ಯಾಂಗಿಗೆ ಹಿಡಿಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ
ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಒಂದೊಂದಾಗಿ ಹನಿ ಟ್ರ್ಯಾಪ್ ಗಾಂಗ್ ಗಳನ್ನು ಬಂಧಿಸುತ್ತಿರುವ ಬೆಳಗಾವಿ ಪೋಲೀಸರು ಜಿಂದಾಬಾದ್…..ಹನಿ ಟ್ರ್ಯಾಪ್ ಮುರ್ದಾಬಾದ್…..!!!
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ