ಬೆಳಗಾವಿ : ಜಮ್ಮು ಕಾಶ್ಮೀರದ ಪುಲಾಮದಲ್ಲಿ ಸಿ.ಆರ್.ಪಿ.ಎಫ್ ಯೋದರ ಮೇಲಿನ ಹಲ್ಲೆ ಖಂಡಿಸಿ ಶನಿವಾರ ಹುಕ್ಕೇರಿ ಪಟ್ಟಣದಲ್ಲಿ ಪ್ರತಿಭಟನೆ.
ಬಂದಗೆ ಬೆಂಬಲಿಸಿ ಶನಿವಾರ ಮುಂಜಾನೆಯಿಂದಲೆ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿದ ವ್ಯಾಪಾರಸ್ಥರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಶಿಕ್ಷಣ ಸಂಸ್ಥೆಗಳು.
ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ವಾಹನಗಳು. ಹುಕ್ಕೇರಿಯ ಅಡವಿಸಿದ್ದೇಶ್ವರ ಮಠದಿಂದ ಬಸವ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲ್ಲಿದೆ. ಅಲ್ಲದೆ ಉಗ್ರರ ದಾಳಿ ಖಂಡಿಸಿ ಇಂದು ಬೆಳಗಾವಿಯಲ್ಲಿ ನ್ಯಾಯವಾದಿಗಳ ಸಂಘದವರು ಕೋರ್ಟ್ ಕಲಾಪ ಬಹಿಷ್ಕಾರಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲ್ಲಿದ್ದಾರೆ. ಗೋಕಾಕ ಪಟ್ಟಣದಲ್ಲಿ ಶೃದ್ಧಾಂಜಲಿ ಸಭೆ ನಡೆಯಲ್ಲಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಹಲವಾರು ಸಂಘ, ಸಂಸ್ಥೆಗಳು ಶನಿವಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧ ಪ್ರತಿಭಟನೆ ನಡೆಸಿ ಯೋದರಿಗೆ ಶೃದ್ಧಾಂಜಲಿ ಸಲ್ಲಿಸಲ್ಲಿದ್ದಾರೆ.
