ಬೆಳಗಾವಿ
ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನದ ಉಗ್ರರ ಹಲ್ಲೆಯನ್ನು ಖಂಡಿಸಿ ಶುಕ್ರವಾರ ವಿಶ್ವ ಹಿಂದು ಪರಿಷದ್, ಬಜರಂಗ ದಳದ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಮ್ಮು ಕಾಶ್ಮೀರದ ಪುಲ್ಮಾದಲ್ಲಿ ಗುರುವಾರ ಮಧ್ಯಾಹ್ನ ಕರ್ತವ್ಯಕ್ಕೆ ಹೊದ ಭಾರತೀಯ ಸೇವೆಯ ವಾಹನದ ಮೇಲೆ ಪಾಕ್ ಬೆಂಬಲಿತ ಉಗ್ರರ ವಾಹನಕ್ಕೆ ಡಿಕ್ಕಿ ಹೊಡೆಸಿ ಭಾರತದ ಶೂರ, ವೀರರ ಸೇನಾನಿಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಇದು ಪಾಕಿಸ್ತಾನ ಭಾರತದ ಮೇಲೆ ಹಲ್ಲೆ ಮಾಡುತ್ತಿರುವ ಭೂಪಾಯುದ್ದವೇ ಆಗಿದೆ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವರು ಪಾಕಿಸ್ತಾನ ನಡೆಸಿದ ಅಕ್ರಮಕ್ಕೆ ಭಾರತದಿಂದ ಪ್ರತಿ ದಾಳಿ ಮಾಡುವುದು ಅಗತ್ಯವಾಗಿದೆ. ನಮ್ಮ ಸೈನಿಕರ ಒಂದೊಂದು ಹನಿ ರಕ್ತದ ಲೆಕ್ಕ ತೆಗೆದುಕೊಳ್ಳಬೇಕಿದೆ. ಜಗತ್ತಿನ ನಕಾಶೆಯಿಂದ ಪಾಕಿಸ್ತಾನ ಅಳಿಸಿಯೇ ಹಾಕಿ ಪಾಕ್ ಬೆಂಬಲಿತ ಉಗ್ರಗಾಮಿಗಳ ಜೈಷ.ಎ.ಮಹಮ್ಮದ ಹಾಗೂ ಇತರೆ ದೇಶ ದ್ರೋಹಿ ಸಂಘಟನೆಯನ್ನು ಮಣ್ಣು ಮುಕ್ಕಿಸುವ ದಿಟ್ಟ ನಿರ್ಣಯ ತೆಗೆದುಕೊಳ್ಳಬೇಕು. ಭಾರತದ 44 ಸೈನಿಕ ಬಂಧುಗಳಿಗೆ ಅವರ ಪರಸ್ಪರ ದುಃಖದಲ್ಲಿ ಇಡೀ ದೇಶವೇ ಭಾಗಿಯಾಗುತ್ತದೆ. ಅವರ ಬಲಿದಾನ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಭಜರಂಗ ದಳದ ಜಿಲ್ಲಾಧ್ಯಕ್ಷ ಭಾವಕಣ್ಣ ಲೋಹಾರ, ಆಧಿನಾಥ ಗಾವಡೆ, ವಿನಾಯಕ ಪಾಟೀಲ, ಸುನೀಲ ಕನೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …