ಬೆಳಗಾವಿ- ಬೆಳಗಾವಿಯ ಮರಾಠಾ ರೆಜ್ಮೆಂಟ್ ಈಗಾಗಲೇ ಹಲವಾರು ದೇಶಗಳ ಜೊತೆಗೆ ಜಂಟಿ ಸಮರಭ್ಯಾಸ ನಡೆಸಿದ್ದು.ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯ ಎಂ ಎಲ್ ಐ ಆರ್ ಸಿ ಕ್ಯಾಂಪ್ ನಲ್ಲಿ ಜಪಾನ್ ಆರ್ಮಿ ಭಾರತೀತೀಯ ಸೈನ್ಯ ಜಂಟಿ ಸಮರಭ್ಯಾಸ ನಡೆಸಲಿದೆ.
ಬೆಳಗಾವಿಯ ಮರಾಠಾ ರೆಜ್ಮೆಂಟ್ ಕ್ಯಾಂಪ್ ನಲ್ಲಿ ಜಪಾನ್ ಸೈನಿಕರು,ಮತ್ತು ಭಾರತೀಯ ಸೈನಿಕರು ಸಮರಭ್ಯಾಸವನ್ನು ಆರಂಭಿಸಿದ್ದಾರೆ. ಸಮರದ ಸಮಯದಲ್ಲಿ ಅನುಸರಿಸುವ ವಿವಿಧ ಕಸರತ್ತುಗಳ ಕುರಿತು ಹಲವಾರು ವಿಚಾರಗಳನ್ನು ಎರಡೂ ದೇಶದ ಸೈನಿಕರು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಭೂತರಾಮನಹಟ್ಟಿ ಪರಿಸರದಲ್ಲಿರುವ ಫೈರೀಂಗ್ ರೇಂಜ್ ನಲ್ಲೂ ಭಾರತ ಮತ್ತು ಜಪಾನ್ ಸೈನಿಕರು ಸಮರಭ್ಯಾಸ ನಡೆಸಲಿದ್ದು ಇಂಡೋ ಜಪಾನ್ ಜಂಟಿ ಅಭ್ಯಾಸ ಮೂರು ದಿನಗಳ ಕಾಲ ನಡೆಯಲಿದ್ದು,ಕ್ಲಿಷ್ಟ ಪರಿಸ್ಥಿತಿಯಲ್ಲಿ ಅನುಸರಿಸುವ ಅನೇಕ ವಿಧಾನಗಳು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ ಎರಡೂ ದೇಶಗಳ ಸೈನಿಕರು.