ಬೆಳಗಾವಿ-ಬೆಳಗಾವಿಯಲ್ಲಿ, ಇಂಡೋ ಟಿಬೆಟಿಯನ್ ಗೆ ಸೇರಿದ 2 ಎಕೆ-47 ಕಳುವಾದ ಘಟನೆ ನಿನ್ನೆ ಗುರುವಾರ, ನಡೆದಿದೆ.
ಬೆಳಗಾವಿ ತಾಲೂಕಿನ ಹಾಲಭಾವಿಯ ಐಟಿಬಿಪಿ ಕ್ಯಾಂಪಿನಿಂದ ಎಕೆ-47 ರೈಫಲ್ ಕಳವು ಆಗಿದ್ದುರಾಜೇಶಕುಮಾರ, ಸಂದೀಪ ಮೀನಾ ಎಂಬುವವರಿಗೆ ಸೇರಿದ ಎಕೆ-47 ರೈಫಲ್ ಕಳವು ಆಗಿವೆ.ನಕ್ಸಲ್ ನಿಗ್ರಹ ತರಬೇತಿಗೆ ಹಾಲಭಾವಿಗೆ ಆಗಮಿಸಿರುವ
ಮಧುರೈನ 45ನೇ ಬಟಾಲಿಯನ್,ಬೆಳಗಾವಿ ಪಕ್ಕದ ಹಾಲಭಾವಿಯಲ್ಲಿ ತರಬೇತಿ ಪಡೆಯುತ್ತಿದೆ.
ಆ.17 ರಂದು ರಾತ್ರಿ ರೈಫಲ್ ಇಟ್ಟು ಮಲಗಿದ್ದಾಗ ರೈಫಲ್‌ಗಳು ಕಳ್ಳತನವಾಗಿವೆ.ವಿಷಯ ತಿಳಿದು ಬೆಚ್ಚಿಬಿದ್ದ ಹಿರಿಯ ಅಧಿಕಾರಿಗಳು, ಸ್ಥಳಕ್ಕೆ ದೌಡಾಯಿಸಿ,ಬಿಗಿ ಭದ್ರತೆ ನಡುವೆಯೂ ಒಳನುಗ್ಗಿ ಅತ್ಯಾಧುನಿಕ ಶಸ್ತ್ರಾಸ್ತ್ರ ಎಗರಿಸಿ ಪರಾರಿ ಆಗಿರುವ ವಿಚಾರ ಬೆಳಗಾವಿಯಲ್ಲಿ ತಲ್ಲಣ ಮೂಡಿಸಿದೆ.
ಅಪರಾಧ ವಿಭಾಗದ ಡಿಸಿಪಿ ಪಿ.ವಿ ಸ್ನೇಹಾ ನೇತೃತ್ವದ ವಿಶೇಷ ತಂಡದಿಂದ ಶೋಧಕಾರ್ಯ ನಡೆದಿದೆ.ಕಳೆದ 24 ಗಂಟೆಯಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು,ಐಟಿಬಿಪಿಯಿಂದ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.