ಬೆಳಗಾವಿ ಮಹಾನಗರದಲ್ಲಿ ಮಹಿಖೆಯರಿಂದ ಚಿನ್ನಾಭರಣ ದೋಚಿ ಪೋಲೀಸರ ಗುಂಡೇಟಿಗೆ ಬೆದರಿ ಬೆಳಗಾವಿ ಜಿಲ್ಲೆ ಯಿದಲೇ ಜಾಗ ಖಾಲಿ ಮಾಡಿದ್ದ ಖತರ್ನಾಕ್ ಇರಾಣಿ ಗ್ಯಾಂಗ್ ಈಗ ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವೇಶ ಮಾಡಿದೆ.ಇಂದು ಸಂಕೇಶ್ವರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೈನ್ ಸ್ಕ್ರಾಚ್ ಪ್ರಕರಣ ನಡೆದಿದ್ದು ಇರಾಣಿ ಗ್ಯಾಂಗ್ ನ ಖದೀಮ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ಬೆಳಗಾವಿ, ಆ, 31 : ತಾನು ಪೊಲೀಸ ಎಂದು ನಂಬಿಸಿ ಮಹಿಳೆಯೋರ್ವಳಿಗೆ ಮೋಸ ಮಾಡಿ 1.5 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಬಳೆಗಳನ್ನು ಎಗ್ಗರಿಸಿ ಫರಾರಿಯಾಗಿದ್ದ ಖದೀಮನನ್ನು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮಹಾರಾಷ್ಟ್ರದ ಸಾಂಗ್ಲಿ ಯ ಮಹ್ಮದ್ ಯುಸಿಫ್ ಇರಾಣಿ ಎಂದು ಗುರುತಿಲಾಗಿದೆ. ಈತ ಕಳೆದ ಮೇ. ದಿ. 30ರಂದು ಶ್ರೀಮತಿ ವಿಜಯಲಕ್ಷ್ಮೀ ರಾಜು ಚೌಗಲೆ ಸಾ. ಸಂಕೇಶ್ವರ ಇವರನ್ನು ಸಂಕೇಶ್ವರದ ಅಂಕಲಿ ರಸ್ತೆಯ ಬಳಿ ನಾವು ಪೊಲೀಸರು ಅಂತಾ ಹೇಳಿ ನಂಬಿಸಿ ಮಹಿಳೆಯ ಕೊರಳಲ್ಲಿದ್ದ 50 ಗ್ರಾಂ ದ ಬಂಗಾರದ ಚೈನ ಮತ್ತು ಕೈಯಲ್ಲಿಯ ಬಳೆಗಳನ್ನು ಮಹಿಳೆಯ ಗಮನ ಬೇರೆ ಕಡೆಗೆ ಸೆಳೆದು ಬಂಗಾರದ ಬಳೆ ಮತ್ತು ಚೈನನ್ನು ಮೋಸತನದಿಂದ ಕಳ್ಳತನ ಮಾಡಿ ಫರಾರಿಯಾಗಿದ್ದನು.
ಮೋಸಕ್ಕೆ ಒಳಗಾಗಿದ್ದ ಮಹಿಳೆಯು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 122/2022, ಕಲಂ-420 ಐಪಿಸಿ ಅಡಿಯಲ್ಲಿ ದೂರು ದಾಖಲಿಸಿದ್ದರು.
ಬಳಿಕ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್.ಪಿ ಮಾಹನಿಂದ ನಂದಗಾವಿ, ಗೋಕಾಕ ಡಿ.ಎಸ್.ಪಿ ಮನೋಜಕುಮಾರ ನಾಯಿಕ ಹಾಗೂ ಯಮಕನಮರಡಿ ಸಿಪಿಐ ಛಾಯಾಗೋಳ ಅವರ ಮಾರ್ಗದರ್ಶನದಲ್ಲಿ ಸಂಕೇಶ್ವರ ಪಿಎಸ್ ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿಗಳಾದ ಬಿ.ವಿ.ಹುಲಕುಂದ, ಬಿ.ಕೆ ನಾಗನೂರಿ, ಎಮ್.ಎಮ್. ಕರಗುಪ್ಪಿ, ಎಮ್.ಎಮ್.ಜಂಬಗಿ, ಬಿ.ಎಸ್. ಕಪರಟ್ಟಿ, ಎಮ್.ಜಿ.ದಾದಾಮಕ, ವಾಯ್.ಎಚ್.ನದಾಫ, ಬಿ.ಟಿ.ಪಾಟೀಲ, ಎಮ್.ಐ ಚಿಪ್ಪಲಕಟ್ಟಿ ಒಳಗೊಂಡ ತಂಡವನ್ನು ರಚಿಸಿದ್ದರು.
ಸಂಶಯಿತ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದಾಗ ತಾನು ಇನ್ನೂ ಮೂರು ಜನರೊಂದಿಗೆ ಸೇರಿ ನಿಪ್ಪಾಣಿ, ಗೋಕಾಕ, ಮತ್ತು ಮಹಾರಾಷ್ಟ್ರದ ಗಡಹಿಂಗ್ಲಜ ನಗರಗಳಲ್ಲಿ ಚಿನ್ನಾಭರಣ ಕದ್ದು ಫರಾರಿಯಾಗಿರುವದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ.
ಅಲ್ಲದೆ ಬಂಧಿತನ ಬಳಿಯಿಂದ 10 ಗ್ರಾಂದ ಬಂಗಾರದ ಚೈನ ಒಂದು, ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್‌ನ್ನು ಪೊಲೀಸರು
ವಶಕ್ಕೆ ಪಡೆದುಕೊಂಡಿದ್ದಾರೆ.