ಬೆಳಗಾವಿ:ನಗರದ ಮಾರ್ಕೆಟ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಐದು ಸರಗಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರಾಣಿ ಗ್ಯಾಂಗಿನ ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೊದಲನೇ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಇರಾಣಿ ಗ್ಯಾಂಗಿನ ಶಾರುಖ್ ಪಿರೋಜ್ ಶೇಖ್, ಮೈಬೂಬ್ ಶೇಖ್, ಮೊಹಮಮ್ಮದ ಇರಾಣಿ, ಸಲೀಂ ಸೇರ ಅಲಿ ಶೇಖ್, ಅಬ್ಬಾಸ ಇರಾಣಿ, ಹೈದರ ಇರಾಣಿ ಸೇರಿದಂತೆ ಒಟ್ಟು ಆರು ಜನ ಆರೋಪಿಗಳಿಗೆ ಒಟ್ಟು ಐದು ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಲಂ 311ರ ಅಡಿಯಲ್ಲಿ ಜೀವಾವಧಿ ಶಿಕ್ಷೆ, ಕಲಂ 392 ಅಡಿಯಲ್ಲಿ ಐದು ವರ್ಷ ಶಿಕ್ಷೆ ಹಾಗೂ ಮೂರು ಸಾವಿರ ದಂಡ ವಿಧಿಸಿ ಮೊದಲನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ಟಿ.ವೆಂಕಟೇಶ ನಾಯಕ ಅವರು ತರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ನಗರದ ಮಾರ್ಕೆಟ್ ಹಾಗೂ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಈ ಆರು ಜನ ಆರೋಪಿಗಳು ಮಹಿಳೆಯರ ಹಾಗೂ ವೃದ್ಧ ಮಹಿಳೆಯರ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದರು.
ಬೆಳಗಾವಿ ಪೊಲೀಸರು ಸಿನಿಮಯ ಮಾಧರಿಯಲ್ಲಿ ಇರಾಣಿ ಗ್ಯಾಂಗನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಸೂಕ್ತ ಸಾಕ್ಷಾಧಾರಗಳನ್ನು ಸಲ್ಲಿಸಿತ್ತು. ವಿಚಾರಣೆ ನಡೆಸದ ಮಾನ್ಯ ನ್ಯಾಯಾಲಯ ಇರಾಣಿ ಗ್ಯಾಂಗಿನ ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ.
Check Also
ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!
ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …