Home / ಕ್ರೈಮ್ ಸುದ್ದಿ / ಕ್ರೂರ ಇರಾಣಿ ಗ್ಯಾಂಗ್..ಶೂರ ಪೋಲಿಸರು

ಕ್ರೂರ ಇರಾಣಿ ಗ್ಯಾಂಗ್..ಶೂರ ಪೋಲಿಸರು

ಬೆಳಗಾವಿ: ನಗರದ 6 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2014-15 ನೇ ಸಾಲಿನಲ್ಲಿ ನಡೆದಿದ್ದ ಹಲವು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಇಂದು ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳನ್ನು ಜಾಲಾಡಿದ್ದ ಪೊಲೀಸರಿಗೆ ಪೊಲೀಸ್ ಪ್ರಧಾನ ಕಚೇರಿ ಹಾಗೂ ಬೆಳಗಾವಿ ಆಯುಕ್ತಾಲಯದಿಂದ ವಿಶೇಷ ಬಹುಮಾನ ಕೊಡಲಾಗುವುದು ಎಂದು ನಗರ ಪೋಲೀಸ್ ಆಯುಕ್ತ ಟಿ. ಜೆ. ಕೃಷ್ಣಭಟ್ ತಿಳಿಸಿದರು.
ಇರಾನಿ ಗ್ಯಾಂಗ್ ಎಂದರೆ ಸುಸಂಸ್ಕøತ ಶ್ರೀಮಂತ ಜನರ ಸೋಗಿನಲ್ಲಿ ಸುಮಾರು 7ರಿಂದ 8ಜನರ ತಂಡ ನಗರಗಳಿಗೆ ಆಗಮಿಸಿ ಬೈಕ್ ಕಳುವು, ಸರಗಳ್ಳತನ, ದರೋಡೆ, ಸುಲಿಗೆ ಇತ್ಯಾಧಿ ಪ್ರಕರಣಗಳಲ್ಲಿ ತೊಡಗಿ ಕೂಡಲೇ ಕಣ್ಮರೆಯಾಗುತ್ತಾರೆ. ನೆರೆಯ ಮಹಾರಾಷ್ಷ್ಟದ ಶ್ರೀರಾಮಪುರ ಪ್ರದೇಶದಲ್ಲಿ ಕದ್ದ ಕಳುವು ಮಾಲು ಮಾರುವುದು ಅವರ ಕಾಯಕ ಎಂದು ಅಪರಾಧ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದರು.
ಹಿಂದಿನ ಪೊಲೀಸ್ ಆಯುಕ್ತ ಎಸ್. ರವಿ ಅವರು ವಿಪರೀತವಾಗಿದ್ದ ಸರಗಳತನದಂಥ ಅಪರಾಧ ಪ್ರಕರಣಗಳನ್ನು ಬೆಧಿಸಲು ‘ಕೋಡರೆಡ್’ ಹೆಸರಿನಲ್ಲಿ ಮಾಜಿ ನಿವೃತ್ತ ಎಸಿಪಿ ಬಿ. ಪಿ. ಹುಲಸಗುಂದ ನೇತ್ರತ್ವದಲ್ಲಿ ತಂಡ ರಚಿಸಿದ್ದರು. ಅದರಂತೆ ಪೊಲೀಸರು ಆರೋಪಿತರನ್ನು ಜಾಲಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎನ್ನುವಂತೆ ಕಳುವು, ದರೋಡೆ ಪ್ರಕರಣಗಳಲ್ಲಿ ಇರಾಣಿ ಗ್ಯಾಂಗ್ನ 6 ಜನ ಻ಪರಾಧಿಘಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಒಟ್ಟಾರೆ ಬೆಳಗಾವಿ ಪೋಲಿಸರು ಕ್ರೂರ ಮೃಗಗಳಿಗೆ ಶಿಕ್ಷೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಇರಾನಿ ಗ್ಯಾಂಗ್ ಬಂಧಿಸುವಾಗ ಆಗಿನ ಪಿಎಸ್ಐ ಈಗಿನ ಸಿಪಿಐ ಗಡ್ಡೇಕರ್ ಮೇಲೇ ದಾಳಿ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *