Breaking News
Home / Breaking News / ಮಿಲಿಟರಿ ನೌಕರಿಯ ನಕಲಿ ಆದೇಶ ಪ್ರತಿ ನೀಡುವ ಜಾಲ ಪತ್ತೆ

ಮಿಲಿಟರಿ ನೌಕರಿಯ ನಕಲಿ ಆದೇಶ ಪ್ರತಿ ನೀಡುವ ಜಾಲ ಪತ್ತೆ

ಬೆಳಗಾವಿ-

ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಯುವಕರಿಗೆ ಆರ್ಮಿಯಲ್ಲಿ ಕೆಲಸ ಕೊಡಿಸುವದಾಗಿ ನಂಬಸಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಸುಲಿ ಮಾಡುತ್ತಿದ್ದ ಜಾಲವನ್ನ ಬೆಳಗಾವಿ ಮಾರ್ಕೆಟ್ ಪೋಲಿಸರು ಭೇದಿಸಿದ್ದಾರೆ

. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶಾನೂಲ ಹತ್ತಿವಾಲೆ (೨೩), ಅನ್ನೊ ಆರೋಪಿಯನ್ನ ಬಂದಿಸಲಾಗಿದೆ ಇನ್ನೂ ದೇಶ ಸೇವೆ ಮಾಡಬೇಕೆಂಬ ಬಯಕೆ ಹೊತ್ತಿದ್ದ ಸದಾಶಿವ ಮಾದರ(೨೭) ಅನ್ನೊ ಯುವಕ ನಕಲಿ ಆದೇಶ ಪ್ರತಿಯನ್ನು ತೆಗೆದುಕೊಂಡು ಆರ್ಮಿ ಸೇರಲು ಹೋಗಿದ್ದಾಗ ಆರ್ಮಿ ಅಧಿಕಾರಿಗಳಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನೂ ಆರೋಪಿಯಿಂದ ನಕಲಿ ಆದೇಶ ಪ್ರತಿಗಳನ್ನ ತಯಾರಿಸಲು ಬಳುಸುತಿದ್ದ ಶೀಲಗಳು, ಪೇಪರ್ ಪ್ರತಿಗಳು, ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ವಿವಿಧ ದಾಖಲೆಗಳನ್ನ ವಶಪಡಿಸಿಕೊಂಡ ಐಪಿಸಿ ಕಲಂ 463, 465,420,468 ಅಡಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Check Also

ಮೇ.10 ಫೈಟಿಂಗ್..ಮೇ13 ರಂದು ಕೌಂಟಿಂಗ್,ನಂತರ ಸರಕಾರ ರಚಿಸಲು ಡೇಟೀಂಗ್!!

  ಎಪ್ರೀಲ್ 13 ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಎಪ್ರೀಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ …

Leave a Reply

Your email address will not be published. Required fields are marked *