Breaking News

ಡಿಸಿ ಎದುರು ‘ಮಾಮಾ” ಮಾಡಿದ ಡ್ರಾಮಾ…ಪ್ಲಾಫ್ ಆಯ್ತು…!

ಬೆಳಗಾವಿ- ಮರಾಠಿ ಮುಖಪತ್ರದ ಮುಖವಾಡ ಎಈಎಸ್ ನಾಯಕ ಮರಾಠಿ ಭಾಷಿಕರಿಂದ ಮಾಮಾ ಎಂದೇ ಕರೆಯಲ್ಪಡುವ ಕಿರಣ ಠಾಖೂರ ಬಹಳ ವರ್ಷಗಳ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಸರ್ಕಾರ ಮರಾಠಿ ಭಾಷೆಯಲ್ಲಿಯೇ ಕಾಗದ ಪತ್ರ ಗಳನ್ನು ನೀಡಬೇಕು ಬಸ್ ಗಳಲ್ಲಿ ಆಸ್ಪತ್ರೆಗಳಲ್ಲಿ ಮರಾಠಿ ಫಲಕ ಹಾಕಬೇಕು ಎಂದು ನಾನೇ ಹಿರೋ ಎನ್ನುವ ರೀತಿಯಲ್ಲಿ ಸ್ಟಂಟ್ ಮಾಡಿದ್ರು ಆದ್ರೆ ಖಡಕ್ ಜಿಕ್ಲಾಧಿಕಾರಿ ಎನ್ ಜಯರಾಮ ಅವರ ಮುಂದೆ ಮಾಮಾ ಮಾಡಿದ ಡ್ರಾಮಾ ಸಂಪೂರ್ಣವಾಗಿ ಪ್ಲಾಪ್ ಆಯ್ತು

ಭಾಷಾ ಅಲ್ಪ ಸಂಖ್ಯಾತರ ಆಯೋಗದ ಆದೇಶದಂತೆ ಗಡಿ ಭಾಗದ ಮರಾಠಿ ಭಾಷಿಕ ರಿಗೆ ಮರಾಠಿ ಭಾಷೆಯಲ್ಲಿಯೇ ಕಾಗದ ಪತ್ರಗಳನ್ನು ನೀಡುವಂತೆ ಎಂಈಎಸ್ ನಾಯಕರು ಪದೇ ಪದೇ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಜಯರಾಮ ಈ ಕುರಿತು ವಿಶೇಷ ಸಭೆ ಕರೆದು ಈ ಕುರಿತು ಎಂಈಎಸ್ ನಾಯಕರ ಜೊತೆಗೆ ಚರ್ಚೆ ಮಾಡಿದರು
ಆರಂಭದಲ್ಲಿ ಮಾತನಾಡಿದ ಕಿರಣ ಠಾಖೂರ ಭಾಷಾ ಅಲ್ಪ ಸಂಖ್ಯಾತರ ಆಯೋಗದ ಆದೇಶ ಅನುಷ್ಠಾನ ಗೊಳ್ಳುತ್ತಿಲ್ಲ ಇಲ್ಲಿಯ ಸರ್ಕಾರ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡಿದೆ ಆದರೆ ನಾವು ಕರ್ನಾಟಕಕ್ಕೆ ನೀರು ಕೊಟ್ಟಿದ್ದೇವೆ ಎಂದು ಹೇಳಿದಾಗ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಏನ್ರೀ ನೀವು ನೀರು ಕೊಟ್ಟಿಲ್ಲ ಮಹಾರಾಷ್ಟ್ರ ಸರ್ಕಾರ ನೀರು ಕೊಟ್ಟಿದೆ ನೀವೂ ಕೂಡ ಕರ್ನಾಟಕದ ನಾಗರೀಕರು ಅದನ್ನು ನೀವು ಒಪ್ಪಲೇ ಬೇಕು ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ನೀರು ಕೊಟ್ಡಿದೆ ನಮ್ಮ ಸರ್ಕಾರ ಮಹಾರಾಷ್ಟ್ರ ಕ್ಕೆ ನೀರು ಬಿಟ್ಟಿದೆ ಈ ವಿಷಯ ಇಲ್ಲಿ ಚರ್ಚೆ ಮಾಡಬೇಡಿ ಎಂದು ಮಾಮಾ ಕಿರಣ ಠಾಖೂರ ಅವರನ್ನು ತರಾಟೆಗೆ ತೆಗೆದುಕೊಂಡರು
ಇದಾದ ಬಳಿಕ ಮತ್ತೊಬ್ಬ ಎಂಈ ಎಸ್ ನಾಯಕ ಮಾತನಾಡಿ ಜಯರಾಮ ಅವರು ಬೆಳಗಾವಿಗೆ ಬಂದು ನಾಲ್ಕು ವರ್ಷ ಆಯ್ತು ಮರಾಠಿ ಭಾಷಿಕರ ಬೇಡಿಕೆ ಈಡೇರಿಲ್ಲ ಎಂದಾಗ ಅದಕ್ಕೆ ಪ್ರತ್ತ್ಯುತ್ತರ ನೀಡಿದ ಡಿಸಿ ಜಯರಾಂ ಇಲ್ಲಿ ಎಲ್ಲ ಮಿಡಿಯಾ ಇದೆ ಅಂತ ಬಾಯಿಗೆ ಬಂದ್ಹಂಗೆ ಮಾತಾಡಿ ಹಿರೋ ಆಗಬೇಡಿ ನಾನು ಬೆಳಗಾವಿಗೆ ಬಂದು ನಾಲ್ಕು ವರ್ಷಕ್ಕಿಂತ ಹೆಚ್ಚಾಗಿದೆ ನಾನು ಬೆಳಗಾವಿಗೆ ಬರುವ ಮೊದಲಿನಿಂದಲೂ ನಿಮ್ಮದು ಸಮಸ್ಯೆ ಇದೆ ಮಾನವೀಯತೆಯ ದೃಷ್ಠಿಯಿಂದ ನಿಮ್ಮ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಡಿ ವಿವಾದದ ಕುರಿತು ಇಲ್ಲಿ ಚರ್ಚೆ ಮಾಡಿ ಹಿರೋ ಆಗಬೇಡಿ ಎಂದು ಎಂಈಎಸ್ ನಾಯಕರನ್ನು ಡಿಸಿ ಜಯರಾಂ ತರಾಟೆಗೆ ತೆಗೆದುಕೊಂಡರು
ಇದಾದ ಬಳಿಕ ಕಿರಣ ಠಾಖೂರ ಅವರು ನೀವು ಭಾರತದ ಪ್ರಜೆ ಕರ್ನಾಟಕದ ಪರವಾಗಿ ಮಾತನಾಡಬೇಡಿ ಎಂದು ಕಿರಣ ಠಾಖೂರ ಜಿಲ್ಲಾಧಿಕಾರಿ ಎನ್ ಜಯರಾಮ ಅವರನ್ನು ಕೆಣಕಿದಾಗ ಅದಕ್ಕೆ ಉತ್ತರ ನೀಡಿದಾಗ ನಾನು ಮೊದಲು ನನ್ನ ಊರು,ನನ್ನ ಜಿಲ್ಲೆ ನನ್ನ ರಾಜ್ಯ ಎಂದುಕೊಂಡಿದ್ದೇನೆ ನಾನು ಕರ್ನಾಟಕದ ನಾಗರೀಕ ನೀವೂ ಕೂಡಾ ಕರ್ನಾಟಕದ ಪ್ರಜೆಗಳು ಅನ್ನೋದನ್ನು ಮೊದಲು ಒಪ್ಪಿ ಎಂದು ಎದೆ ತಟ್ಟಿ ಹೇಳುವದರ ಮೂಲಕ ಎಂಈಎಸ್ ಮುಖಂಡರ ಮುಖಕ್ಕೆ ಮಂಗಳಾರತಿ ಮಾಡಿದ್ರು
ಎಲ್ಲರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಡಿಸಿ ಜಯರಾಮ ಗಡಿ ಭಾಗದಲ್ಲಿರುವ ಭಾಷಾ ಅಲ್ಪ ಸಂಖ್ಯಾತರಿಗೆ ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನು ಕೊಡಬೇಕು ಎನ್ನುವ ಸರ್ಕಾರದ ಆದೇಶ ಇತ್ತು ಆದರೆ ಈ ಆದೇಶವನ್ನು ಸರ್ಕಾರ 2014 ರಲ್ಲಿ ಹಿಂದಕ್ಕೆ ಪಡೆದಿದೆ ಈ ವಿಷಯ ಎಂಈಎಸ್ ಮುಖಂಡರಿಗೆ ಗೊತ್ತಿಲ್ಲ ಈ ಕುರಿತು ಸರ್ಕಾರದ ಜೊತೆ ಚರ್ಚೆ ಮಾಡುತ್ತೇನೆ ಆಸ್ಪತ್ರೆಯಲ್ಲಿ ಬಸ್ ಗಳಲ್ಲಿ ಮರಾಠಿ ಫಲಕ ಹಾಕುವಂತೆ ಕೆಲವರು ಮನವಿ ಮಾಡಿಕೊಂಡಿದ್ದು ಈ ಕುರಿತು ಪರಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿ ಜಯರಾಂ ಸಭೆಗೆ ಇತಿ ಶ್ರೀ ಹಾಡಿದ್ರು
ಸಭೆಯಲ್ಲಿ ಮಾಜಿ ಮಹಾಪೌರರಾದ ಕಿರಣ ಸೈನಾಯಕ ಸರೀತಾ ಪಾಟೀಲ ಟಿಕೆ ಪಾಟೀಲ ಸೇರಿದಂತೆ ಹಲವಾರು ಜನ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *