ಲವ್ ಮಾಡಿ ಮದುವೆಯಾದ್ರೂ.ಕೊಡಬಾರದ ಕಿರುಕಳ ಕೊಟ್ಟ..

ಬೆಳಗಾವಿ- ಅಂತರ್ ಧರ್ಮೀಯ ಯುವಕನನ್ನ ಪ್ರೀತಿಸಿದ ತಪ್ಪಿಗೆ, ಪೆಟ್ರೋಲ್ ಹಾಕಿ ಸುಟ್ಟರು ಕೂಡ ಅವನೊಂದಿಗೆ ಬಾಳ್ವೆ ನಡೆಸಿದ ಯುವತಿಗೆ ರಾಕ್ಷಸ ಯುವಕ ನೀಡಬಾರದ ಹಿಂಸೆ ನೀಡಿ ಬಿಟ್ಟು ಹೋಗುವಂತೆ ಜೀವ ಬೆದರಿಕೆ ಹಾಕಿದ್ದಾನೆ.

ಈತನ ಘನಂಧಾರಿ ಕೆಲಸಕ್ಕೆ ಪ್ರಭಾವಿ ರಾಜಕಾರಣಿ ಬೆಂಬಲವಾಗಿ ನಿಂತಿದ್ದು ಅಮಾಯಕ ಯುವತಿಯ ಬಾಳು ಅತಂತ್ರವಾಗಿದೆ. ನಿಪ್ಪಾಣಿ ಗಡಿಭಾಗದ ಕಾಗಲ್ ತಾಲೂಕಿನ ಕರನೂರ ಗ್ರಾಮದ ಜೈನಬಿ ಶೇಖ ಎಂಬ ಯುವತಿ ಹಾಗೂ ನಿಪ್ಪಾಣಿ ತಾಲೂಕು ಕೊಗನೊಳ್ಳಿ ಗ್ರಾಮದ ಸಚಿನ್ ಇಂಗವಲೆ ಎಂಬ ಯುವಕ ಪರಸ್ಪರ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದಾರೆ.

ಕೆಲ ದಿನಗಳ ಕಾಲ ಚೆನ್ನಾಗಿದ್ದ ಇವರಿಗೆ ಒಂದು ಮಗು ಕೂಡ ಜನಿಸಿದೆ. ಇದರ ಮಧ್ಯೆ ಮನೆಯವರ ಒತ್ತಾಯದ ಮೇರೆಗೆ ಮತ್ತೊಂದು ಮದುವೆಯಾದ ಸಚೀನ್ ಇಂಗವಲೆ ಮೊದಲ ಪತ್ನಿ ಜೈನಬಿಯನ್ನ ರಾತ್ರಿ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಇಷ್ಟೆಲ್ಲಾ ಆದ್ರೂ ಗಂಡನನ್ನು ಬಿಟ್ಟು ಕೊಡದ ಜೈನಬಿ ತಾನೇ ಮನೆಯಲ್ಲಿ ಕೆಲಸ ಮಾಡುವಾಗ ಮೈಮೇಲೆ ಪೆಟ್ರೋಲ್ ಬಿದ್ದಿದೆ ಎಂದು ಹೇಳಿಕೆ ನೀಡಿದ್ದಾಳೆ. ಇದಾದ ಬಳಿಕ ಮತ್ತೇ ಕ್ಯಾತೆ ತೆಗೆದ ಸಚೀನ್ ಈ ಮಗು ತನ್ನದಲ್ಲ ಎಂದು ಪದೇ ಪದೇ ಜಗಳವಾಡಿ ಕೊಲ್ಲುವ ಬೆದರಿಕೆಯೊಡ್ಡಿದ್ದಾನೆ. ಸಚೀನನ್ ಈ ಪುಂಡಾಟಕ್ಕೆ ಮಾಜಿ ಸಚಿವ ವೀರಕುಮಾರ ಪಾಟೀಲ ಬೆಂಬಲವಾಗಿ ನಿಂತಿದ್ದು ಈ ವೀರಕುಮಾರ ಪಾಟೀಲ್ ಮಗ ಮತ್ತು ಈ ದುಷ್ಟ ಸಚೀನ್ ಇಂಗವಲೇ ಸ್ನೇಹಿತರಾಗಿದ್ದಾರೆ. ಇವರ ಪುಂಡಾಟಕ್ಕೆ ಬೇಸತ್ತ ಯುವತಿ ನಿಪ್ಪಾಣಿ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪೋಲಿಸರು ಆರೋಪಿ ಪತಿಯನ್ನ ಬಂಧಿಸಿದ್ದಾರೆ.

ಆರೋಪಿ ಬೆನ್ನಿಗೆ ನಿಂತಿರುವ ಮಾಜಿ ಸಚಿವ ವೀರಕುಮಾರ ಪಾಟೀಲ್ ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದು ನೊಂದ ಯುವತಿ ರಕ್ಷಣೆಗಾಗಿ ಮಾಧ್ಯಮಗಳ ಮೋರೆ ಹೋಗಿದ್ದಾಳೆ.

 

Check Also

ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು …

Leave a Reply

Your email address will not be published. Required fields are marked *