ಬೆಳಗಾವಿ-ಭೂ ಸುಧಾರಣೆ ಕಾಯ್ದೆ ರೈತರ ಪರವಾಗಿದ್ದು ಕಾಂಗ್ರೆಸ್ ರೈತರಿಗೆ ತಪ್ಪು ಮಾಹಿತಿ ನೀಡಿ ರೈತರ ದಿಕ್ಕು ತಪ್ಪಿಸುತ್ತಿದೆ ಕೇಂದ್ರ ಸರ್ಕಾರದ ಈ ಕಾಯ್ದೆಯಿಂದ,ರೈತರ ಜಮೀನಿನ ಮೌಲ್ಯ ಹೆಚ್ಚಾಗಲಿದೆ.ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ, ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,
ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಿಚಾರವಾಗಿ ನಾಳೆ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಈರಣ್ಣಾ ಕಡಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಲೋಕಸಭಾ, ರಾಜ್ಯಸಭಾ ದಲ್ಲಿ 25 ಮಸೂದೆ ಅಂಗೀಕಾರ ಆಗಿದೆ. ಕೃಷಿ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ. ಎರಡು ಕಾನೂನು ವಿಧಯೇಕಕ್ಕೆ ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಮುಗ್ಧ ರೈತನ್ನು ಬಳಸಿಕೊಂಡು ಧರಣಿ ಮಾಡುತ್ತಿದೆ.
ಕಾನೂನು ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಹೋರಾಟ ಮಾಡುತ್ತಿದೆ ಎಂದು ಕಡಾಡಿ ಆರೋಪಿಸಿದರು.
ಭೂ ಸುಧಾರಣೆ ಕಾನೂನು ಮೂಲಕ ಜನರಿಗೆ ಅನುಕೂಲ ಆಗಲಿದೆ. ಕೃಷಿ ಎತರರು ಕೃಷಿ ಭೂಮಿಯನ್ನು ಖರೀದಿ ಮಾಡಬಹುದು.
ಹೈನುಗಾರಿಕೆ, ಕುರಿ ಸಾಗಾಣಿಕೆಗೆ ಅನಕೂಲ ಆಗಲಿದೆ.
ಕೃಷಿಯನ್ನು ಬೇರೆ ಯಾರೋ ಬಂದು ಕಸಿದುಕೊಳ್ಳುತ್ತಾರೆ ಅನ್ನೋದು ಸುಳ್ಳು.. ಅನೇಕರು ಕೃಷಿಯತ್ತ ಮತ್ತೆ ಮುಖ ಮಾಡಿದ್ದಾರೆ. ವಿದ್ಯಾವಂತ ಯುವಕರು ಕೃಷಿ ಕಡೆ ಮುಖ ಮಾಡುತ್ತಿದ್ದಾರೆ.ಇಂತಹ ಯುವಕರಿಗೆ ಮತ್ತಷ್ಟು ಜಮೀನು ಖರೀದಿಗೆ ಅನಕೂಲ ಆಗಲಿದೆ ಎಂದರು.
ಕರ್ನಾಟಕ ಇದಕ್ಕೆ ಅನಕೂಲ ಕಲ್ಪಿಸದೇ ಇದ್ರೆ ಯುವಕರು ಬೇರೆ ರಾಜ್ಯಕ್ಕೆ ಹೋಗುತ್ತಾರೆ.
ಜಮೀನಿನ ಮೌಲ್ಯ ಹೆಚ್ಚಾಗಲಿದೆ. 11.90 ಲಕ್ಷ ಹೆಕ್ಟೇರ್ ಬೀಳು ಭೂಮಿ ರಾಜ್ಯದಲ್ಲಿ ಇದೆ. ಹೊಸ ಜನ ಕೃಷಿಯತ್ತ ಮುಖ ಮಾಡಿದ್ರೆ ಹೆಚ್ಚಿನ ಅನಕೂಲ ಆಗುತ್ತೆ, ಕೃಷಿಯೇತರರು ಭೂಮಿ ಖರೀದಿಯಿಂದ ಕೈಗಾರಿಕಾಗೆ ಅನಕೂಲ ಆಗಲಿದೆ. ರೈತರಿಗೆ ಪರವಾಗಿ ಕಾನೂನು ರೂಪಿಸಲಾಗಿದೆ. ರೈತರ ಹೆಸರಿನಲ್ಲಿ ಕಾಂಗ್ರೆಸ್ ಹೋರಾಟವನ್ನು ಮಾಡುತ್ತಿದೆ.
ಎಪಿಎಂಸಿಯಲ್ಲಿ ರೈತರ ಶೋಷಣೆ ತಪ್ಪಿಸಲು ಕಾಯ್ದೆ ತಿದ್ದುಪಡಿ.ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ.
ಕೃಷಿ ಕ್ಷೇತ್ರದಲ್ಲಿ ಕಾಂತ್ರಿಕಾರಿ ಬೆಳವಣಿ ಇದರಿಂದ ಸಾಧ್ಯ.
ಕರ್ನಾಟಕ ಬಂದ್ ವಾಪಸ್ ಪಡೆಯಬೇಕು ಎಂದು ಕಡಾಡಿ ಮನವಿ ಮಾಡಿಕೊಂಡರು.
ಮಾಜಿ ಶಾಸಕ ಸಂಜಯ ಪಾಟೀಲ ರಾಜು ಜಿಕ್ಕನಗೌಡರ ಮೊದಲಾದವರು ಉಪಸ್ಥಿತರಿದ್ದರು.