Breaking News

ಬಂದ್ ಕೈಬಿಡಲು,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮನವಿ

ಬೆಳಗಾವಿ- ಮಸೂದೆಗಳಲ್ಲಿ ಲೋಪದೋಷಗಳಿದ್ದರೆ ತಿದ್ದಿಕೊಳ್ಳಲು ಸಿದ್ಧ ಎಂದು ಕೇಂದ್ರ ಗೃಹ ಸಚಿವರು, ವಿತ್ತ ಸಚಿವರು ಹೇಳಿದ್ದಾರೆ. ಅದಕ್ಕಾಗಿ ರೈತರು ಡಿಸೆಂಬರ್ 8 ರಂದು ನಡೆಸಲು ಉದ್ದೇಶಿಸಿರುವ ಬಂದ್ ಕೈಬಿಡಬೇಕು, 9ರಂದು ನಡೆಸಲಿರುವ ಚಳವಳಿಯಿಂದ ಹಿಂದಕ್ಕೆ ಸರಿಯಬೇಕು ಎಂದು ರಾಜ್ಯಸಭೆ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಹೇಳಿದರು.

ಇಂದು ಬೆಳಗಾವಿಯ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ರೈತರ ಪರವಾಗಿವೆ. ರೈತರ ಆದಾಯ ದ್ವಿಗುಣಗೊಳಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಪ್ರತಿಪಕ್ಷಗಳ ಚಿತಾವಣೆಯಿಂದ ಪ್ರತಿಭಟನೆಗಿಳಿಯದೇ ರೈತರು ಮಸೂದೆಯ ಒಳ್ಳೆಯ ಅಂಶಗಳತ್ತ ಗಮನ ಹರಿಸಬೇಕು. ಪ್ರತಿಭಟನೆ ಕೈ ಬಿಡಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳ ಕುರಿತಂತೆ ಪ್ರಗತಿಪರ ರೈತರೊಂದಿಗೆ ಈಗಾಗಲೇ ಚರ್ಚಿಸಿದ್ದೇವೆ. ಮಸೂದೆಗಳಲ್ಲಿ ಇರುವ ಒಳ್ಳೆಯ ಅಂಶಗಳ ಬಗ್ಗೆ ತಿಳಿವಳಿಕೆ ನೀಡಿದ್ದೇವೆ. ಯಾವುದೇ ಲೋಪದೋಷಗಳಿದ್ದರೆ ತಿದ್ದಿಕೊಳ್ಳಲು ಸಿದ್ಧ ಎಂದು ಕೇಂದ್ರದ ಗೃಹ ಸಚಿವರು, ವಿತ್ತ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಚರ್ಚೆಗೆ ಮುಕ್ತವಾಗಿದ್ದು, ರೈತರು ರಾಜಕೀಯ ಪ್ರೇರಣೆಯಿಂದ ಬಂದ್ ನಡೆಸುವುದು ಬೇಡ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಾದಾಗೌಡ ಬಿರಾದಾರ ಮತ್ತು ಮುರುಘೇಂದ್ರಗೌಡಾ ಪಾಟೀಲ ಹಾಗೂ ಬೆಳಗಾವಿ ಮಹಾನಗರ ಜಿಲ್ಲಾ ವಕ್ತಾರರಾದ ಶ್ರೀ ಹನುಮಂತ ಅ ಕೂಂಗಾಲಿ ಹಾಗೂ ಬೆಳಗಾವಿ ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಕಲ್ಲಪ್ಪಾ ಶಾಪುರಕರ ಹಾಗೂ ಬೆಳಗಾವಿ ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಶ್ರೀಕರ್ ಕುಲಕರ್ಣಿ ಅವರು ಹಾಗೂ ಬೆಳಗಾವಿ ಮಹಾನಗರ ಕೋಶಾಧ್ಯಕ್ಷರಾದ ಶೇಖರ ಹಂಡೆ ಮತ್ತು ಮಹಾನಗರ ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ ಕೇದಾರ ಜೋರಾಪೂರ ಹಾಗೂ ಮಂಜುನಾಥ ಬಜಂತ್ರಿ ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *