Breaking News
Home / Breaking News / ಜಗದೀಶ್ ಶೆಟ್ಟರ್ ಕಚೇರಿ ಈಗ C/O “ಲಕ್ಷ್ಮೀ” ಕಾಂಪ್ಲೆಕ್ಸ್….!!!

ಜಗದೀಶ್ ಶೆಟ್ಟರ್ ಕಚೇರಿ ಈಗ C/O “ಲಕ್ಷ್ಮೀ” ಕಾಂಪ್ಲೆಕ್ಸ್….!!!

ಬೆಳಗಾವಿ- ದಿವಂಗತ ಸುರೇಶ್ ಅಂಗಡಿ ಅವರು ತಮ್ಮ ಕಚೇರಿ ಕಟ್ಟಡಕ್ಕೆ ಲಕ್ಷ್ಮೀ ಎಂದು ಹೆಸರಿಟ್ಟಿದ್ದು ಯಾಕೆ ? ಇದೇ ಲಕ್ಷ್ಮೀ ತಮಗೆ ಚುನಾವಣೆಯಲ್ಲಿ ಎದುರಾಳಿ ಆಗಬಹುದೇ ಎನ್ನುವ ಕಲ್ಪನೆ ಅವರಿಗಿತ್ತೋ ಅಥವಾ ಇದೊಂದು ಕಾಕತಾಳೀಯೋ ಗೊತ್ತಿಲ್ಲ.ಆದ್ರೆ ಜಗದೀಶ್ ಶೆಟ್ಟರ್ ಅವರು ಈಗ ದಿವಂಗತ ಸುರೇಶ್ ಅಂಗಡಿಯವರ ಮುಖ್ಯ ಕಾರ್ಯಸ್ಥಾನವಾಗಿದ್ದ ಸದಾಶಿವನಗರದ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿಯೇ ತಮ್ಮ ಚುನಾವಣಾ ಕಚೇರಿಯನ್ನು ಇಂದು ಬೆಳಗ್ಗೆ ಕಾರ್ಯಾರಂಭ ಮಾಡಲಿದ್ದಾರೆ.

ಇಂದು ಲಕ್ಷ್ಮೀ ವಾರ,ಶುಭ ಶುಕ್ರವಾರದ ಬೆಳಗ್ಗೆ 9-30 ಕ್ಕೆ ಸದಾಶಿವನಗರದ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಜಗದೀಶ್ ಶೆಟ್ಟರ್ ಅವರ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಬೆಳಗಾವಿಯಲ್ಲಿ ಬಾಡಗಿ ಮನೆಯಲ್ಲಿ ವಾಸ ಮಾಡಿದ್ದು ಈಗ ಬೀಗರ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಕಚೇರಿ ಶುರು ಮಾಡಲಿದ್ದಾರೆ.

ಬೆಳಗಾವಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಅನೀಲ ಬೆನಕೆ,ಸಂಜಯ ಪಾಟೀಲ,ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ,ಗೀತಾ ಸುತಾರ್,ಸೇರಿದಂತೆ ಬಿಜೆಪಿಯ ನಾಯಕರು ಪದಾಧಿಕಾರಿಗಳು ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Check Also

ಶಹಾಪೂರ್ ಘರ್ಷಣೆ ಪ್ರಕರಣ ಹತ್ತು ಜನರ ಬಂಧನ

ಬೆಳಗಾವಿ-ನಿನ್ನೆ ರಾತ್ರಿ ಶಹಾಪೂರ ಪೋಲೀಸ್ ಠಾಣೆ ವ್ಯಾಪ್ತಿಯ ಅಳ್ವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಭಂಧಿಸಿದಂತೆ ಒಟ್ಟು ಹತ್ತು …

Leave a Reply

Your email address will not be published. Required fields are marked *