Breaking News

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು ಹುಬ್ಬಳ್ಳಿಯಲ್ಲಿ ನೈರುತ್ಯ ವಲಯದ ರೇಲ್ವೆ ಮಹಾ ಪ್ರಬಂಧಕರೊಂದಿಗೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಆಗಬೇಕಾದ ವಿವಿಧ ರೇಲ್ವೆ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆಯಲು ಸಭೆಯನ್ನು ನಡೆಸಿದರು.

1) ಬೆಳಗಾವಿ ಮತಕ್ಷೇತ್ರದ ಸುಳೇಬಾವಿ ಗ್ರಾಮದ ಎಲ್. ಸಿ ನಂ: 79/ಎ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ರಸ್ತೆ ಕೆಳ ಸೇತುವೆ ಅವೈಜ್ಞಾನಿಕನಿಕವಾಗಿದ್ದು, ಇದರಿಂದಾಗಿ ರೈತರಿಗೆ ಅವರ ಜಮೀನುಗಳಿಗೆ ತೆರಳಲು ಕಷ್ಟಸಾಧ್ಯವಾಗುತ್ತಿದೆ, ಈ ಕೂಡಲೆ ಇಲ್ಲಿ ರೈತರಿಗೆ ಅನಕೂಲವಾಗುವಂತೆ ಸಂಪರ್ಕ ರಸ್ತೆ ನಿರ್ಮಿಸುವ ಬಗ್ಗೆ ಕ್ರಮ ಜರುಗಿಸಲು ಕೋರಿದರು. ಈ ಕುರಿತು ರೇಲ್ವೆ ಮಹಾ ಪ್ರಬಂಧಕರು ಪ್ರಸ್ತಾಪಿತ ವಿಷಯವಾಗಿ ಹಿರಿಯ ಅಭಿಯಂತರರನ್ನು ಕಳುಹಿಸಿ ವರದಿ / ಪರಿಹಾರ ಕಂಡುಕೊಳ್ಳುವ ಬಗ್ಗೆ ಪ್ರಯತ್ನಿಸಲಾಗುವ ಭರವಸೆ ನೀಡಿದರು.

2) ಇನ್ನು ಘಟಪ್ರಭಾ ರೇಲ್ವೆ ನಿಲ್ದಾಣದ ಹತ್ತಿರ ರೇಲ್ವೆ ಇಲಾಖೆಯ ಭೂಮಿ ಕಬಳಿಕೆಯಾಗಿದೆ ಎಂದು ಅಲ್ಲಿ ಕಟ್ಟಲಾದ ಮನೆಗಳ ಮಾಲಿಕರಿಗೆ ಅಥವಾ ವ್ಯಾಪಾರಸ್ಥರಿಗೆ ಪದೆ ಪದೆ ನೋಟಿಸ್ ನೀಡುತ್ತಿರುವ ಬಗ್ಗೆ ವಿಷಯ ಪ್ರಸ್ತಾಪಿಸಿ, ಇವರುಗಳು ಎಲ್ಲರೂ ಮಾಲಿಕತ್ವ ಹೊಂದಿದ ಬಗ್ಗೆ ಅಗತ್ಯ ಪುರಾವೆಗಳು ಇದ್ದು ಇವುಗಳ ಬಗ್ಗೆ ಪರಿಶೀಲನೆ ನಡೆಸಿ, ಅಲ್ಲಿರುವ ಕಟ್ಟಡದ ಮಾಲಿಕರಿಗೆ ಪದೆ ಪದೆ ನೋಟಿಸ್ ನೀಡಿ ಕಿರಕುಳ ನೀಡದೆ ಇರುವಂತೆ ನೋಡಿಕೊಳ್ಳಲು ಪ್ರಸ್ತಾಪಿಸಿದಾಗ ಈ ಕುರಿತು ವಿಷಯ ಅವಲೋಕಿಸಿ ಈ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ರೇಲ್ವೆ ಮಹಾ ಪ್ರಬಂಧಕರು ಸಂಸದರಿಗೆ ಆಶ್ವಾಸನೆಯನ್ನು ನೀಡಿದರು.

3) ಲೋಕಾಪೂರ-ರಾಮದುರ್ಗ-ಸವದತ್ತಿ-ಧಾರವಾಡ ನೂತನ ರೈಲು ಮಾರ್ಗ ನಿರ್ಮಣದ ಬಗ್ಗೆ ಪೂರ್ವಭಾವಿ ಸಮೀಕ್ಷೆ ನಡೆಸುವದು ಅವಶ್ಯಕವಾಗಿದ್ದು ಈ ಹಿನ್ನೆಯಲ್ಲಿ ಅಗತ್ಯ ಸಮೀಕ್ಷೆ ನಡೆಸುವ ಬಗ್ಗೆ ಕ್ರಮ ಜರಿಗಿಸಿ ನೂತನ ರೈಲು ಮಾರ್ಗದ ನಿರ್ಮಣಕ್ಕೆ ಅನುಕೂಲತೆ ಕಲ್ಪಿಸಲು ಪ್ರಸ್ತಾಪಿಲಾಯಿತು. ರೇಲ್ವೆ ಮಹಾ ಪ್ರಬಂಧಕರು ಈ ವಿಷಯವಾಗಿ ಅಗತ್ಯ ವಿವರಗಳನ್ನು ಪಡೆದು, ಬರುವ ದಿನಗಳಲ್ಲಿ ನೂತನ ರೈಲು ಮಾರ್ಗ ಸಮೀಕ್ಷೆ ಕೈಕೊಳ್ಳುವ ಬಗ್ಗೆ ಅವಲೋಕಿಸುವುದಾಗಿ ಸಂಸದರಿಗೆ ತಿಳಿಸದರು.

4) ಅದರಂತೆ ನೂತನ ಬೆಳಗಾವಿ-ಕಿತ್ತೂರ-ಧಾರವಾಡ ಮಾರ್ಗ ನಿರ್ಮಾಣ ಕುರಿತು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದಂತೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವ ಬಗ್ಗೆ ರೇಲ್ವೆ ಮಹಾ ಪ್ರಬಂಧಕರು ಭರವಸೆಯನ್ನು ನೀಡಿದರು.

5) ಬೆಂಗಳೂರು -ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ ರೈಲು ಸಂಚಾರ ಬೆಳಗಾವಿ ವರೆಗೆ ವಿಸ್ತರಿಸುವ ಬಗ್ಗೆ ಪ್ರಗತಿ ವಿಚಾರಿಸಿದಾಗ ಈ ವಿಷಯವಾಗಿ ಪ್ರಸ್ತಾವನೆಯನ್ನು ರೇಲ್ವೆ ಬೋರ್ಡ್ ಗೆ ಕಳುಹಿಸಲಾಗಿದ್ದು ಶೀಘ್ರದಲ್ಲಿ ಅನುಮೋದನೆ ದೊರೆಯುವ ಬಗ್ಗೆ ವಿಶ್ವಾಸವನ್ನು ರೇಲ್ವೆ ಮಹಾ ಪ್ರಬಂಧಕರು ವ್ಯಕ್ತ ಪಡಿಸಿದರು.

6) ಬೆಳಗಾವಿ ನಗರದ ಎಲ್ ಸಿ ನಂ: 381, 382, 383, ಹತ್ತಿರ ನಿರ್ಮಾಣವಾಗಲಿರುವ ರಸ್ತೆ ಮೇಲು ಸೇತುವೆ ಬಗ್ಗೆ ಪ್ರಗತಿ ವಿವರವನ್ನು ಪಡೆಯಲಾಗಿ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಸಂಸದರಲ್ಲಿ ರೇಲ್ವೆ ಮಹಾ ಪ್ರಬಂಧಕರು ಪ್ರಸ್ತಾಪಿಸದರು.

7) ಬೆಳಗಾವಿ- ಮನುಗುರ ಎಕ್ಸ್ ಪ್ರೆಸ್ ರೈಲು ರದ್ದುಗೊಂಡಿದ್ದು, ಸಾರ್ವಜನಿಕರ ಬೇಡಿಕೆಯಂತೆ ಇದನ್ನು ಪುನರ್ ಪ್ರಾರಂಭಿಸುವ ಬಗ್ಗೆ ಸಂಸದರು ಪ್ರಸ್ತಾಪಿಸಿದಾಗ ಶೀಘ್ರದಲ್ಲಿ ಪ್ರಾರಂಭಿಸಿರುವ ಬಗ್ಗೆ ರೇಲ್ವೆ ಮಹಾ ಪ್ರಬಂಧಕರು ತಿಳಿಸಿದರು.

8) ಬೆಳಗಾವಿ -ಮಿರಜ್-ಬೆಳಗಾವಿ ನಡುವೆ ಸಂಚರಿಸುವ ರೈಲನ್ನು ಮೆಮೋ ರೈಲನ್ನಾಗಿ ಪರ್ವತಿಸುವಂತೆ ಕೋರಿದ ಹಿನ್ನಲೆಯಲ್ಲಿ ಈ ಬಗ್ಗೆ ರೇಲ್ವೆ ಬೋರ್ಡ್ ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇದನ್ನು ಕೂಡಾ ಈಡೇರಿಸುವ ಭರವಸೆಯನ್ನು ರೇಲ್ವೆ ಮಹಾ ಪ್ರಬಂಧಕರು ಸಭೆಯಲ್ಲಿ ನೀಡಿದರು.

ಸಭೆಯಲ್ಲಿ ನಡೆದ ಚರ್ಚೆ ಫಲಕಾರಿಯಾಗಿದ್ದು ಪ್ರಸ್ತಾಪಿಸಿದ ಎಲ್ಲ ಅಂಶಗಳಿಗೆ ರೇಲ್ವೆ ಮಹಾ ಪ್ರಬಂಧಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬರುವ ದಿನಗಳಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಗಳು ಈಡೆರುವ ಬಗ್ಗೆ ಆಶಾಭಾವನೆ ಹೊಂದಿರುವುದಾಗಿ ಲೋಕಸಭಾ ಸದಸ್ಯರು ಶ್ರೀ ಜಗದೀಶ ಶೆಟ್ಟರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಲೋಕಸಭೆಯಲ್ಲಿ ಬೆಳಗಾವಿ ಗಡಿ ಕುರಿತು ಶಿವಸೇನೆ ಕ್ಯಾತೆ

ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನಿರಂತರವಾಗಿ ಕಾಲು ಕೆದರಿ ಜಗಳ ತೆಗೆಯುವ ಉದ್ಧವ ಠಾಕ್ರೆ ನೇತ್ರತ್ವದ ಶಿವಸೇನೆ,ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ …

Leave a Reply

Your email address will not be published. Required fields are marked *