ಬೆಳಗಾವಿ,ನೋಟುಗಳ ರದ್ದತಿಯಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕುಂಟು ನೆಪ ಹೆಳುತ್ತಿದೆ ಕುಣಿಯಲಿಕ್ಕೆ ಬಾರದವರು ನೆಲ ಡೊಂಕೆಂದರು ಎನ್ನುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸು ಕೆಲಸ ಮಾಡುತ್ತಿದೆ ರಾಜ್ಯದಲ್ಲಿ ಸರಿಯಾಗಿ ಆರ್ಥಿಕ ನಿರ್ವಹಣೆ ಆಗದ ಕಾರಣ ಸಮಸ್ಯೆ ಎದುರಾಗಿದೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದರು
ಸುವರ್ಣ ವಿಧಾನ ಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ನೋಟು ನಿಷೇಧದಿಂದ ಆದಾಯ ಸಂಗ್ರಹದಲ್ಲಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಾ ರೈತರ ಸಾಲ ಮನ್ನಾ ಮಾಡುವುದರಿಂದ ನುಣುಚಿಕೊಳ್ಳುತ್ತಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 500 ಹಾಗೂ 1000 ರೂ. ಮುಖ ಬೆಲೆಯ ನೋಟು ನಿಷೇಧದಿಂದ ಕಳೆದ 15 ದಿನಗಳಿಂದ ತೊಂದರೆಯಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರ ಮೂರೂವರೆ ವರ್ಷಗಳಿದ ಆಡಳಿತದಲ್ಲಿದೆ. ಸರಿಯಾದ ಆಡಳಿತ ಮಾಡಿ ಕ್ರೂಢೀಕರಿಸಿಕೊಂಡಿದ್ದರೆ ಈಗ ಸಾಲ ಮನ್ನಾ ಮಾಡಲು ಸುಲಭವಾಗುತ್ತಿತ್ತು. ಕುಣಿಯಲಾರದವರು ನೆಲ ಡೊಂಕು ಎಂಬಂತೆ ಸರಿಯಾದ ಆಡಳಿತ ಮಾಡದೆ ಈಗ ನೋಟು ನಿಷೇಧದ ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೋಟು ನಿಷೇಧದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ನಷ್ಟವಾಗಿಲ್ಲ. ಆರ್ಥಿಕ ಸ್ಥಿತಿಗತಿ ಮತ್ತು ಕಾಗದ ಪತ್ರಗಳನ್ನು ಸಭೆ ಮುಂದಿಡಲಿ. ಸತ್ಯಾಂಶ ಏನು ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ ಎಂದು ಸವಾಲು ಹಾಕಿದರು. ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಹಿಂದೆ ಸಕ್ಕರೆಯ ಬೆಲೆ 1700ರಿಂದ 2300ರೂ. ವರೆಗೆ ಇದ್ದಾಗ ಕಡಿಮೆ ದರ ನಿಗದಿಯಾಗಿತ್ತು. ಆದರೆ, ಈಗ ಪ್ರತಿ ಕ್ವಿಂಟಾಲ್ ಸಕ್ಕರೆಯ ಬೆಲೆ 3700ರೂ. ಇದೆ. ಹೀಗಾಗಿ ಪ್ರತಿಟನ್ ಕಬ್ಬಿಗೆ ಕನಿಷ್ಠ 3ಸಾವಿರ ರೂ. ದರ ನಿಗದಿ ಮಾಡಲು ಸಾಧ್ಯವಿದೆ. ಆದರೆ ಸರ್ಕಾರ ಇಳುವರಿಯನ್ನು ಆಧರಿಸಿ 2300ರಿಂದ 3300ರೂ. ದರ ನಿಗದಿ ಮಾಡಿದೆ ಇದು ಸರಿಯಲ್ಲ. ಕನಿಷ್ಠ 3000 ರೂ. ನಿಗದಿ ಮಾಡಬೇಕು. ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದರು