Home / Breaking News / ಸಾಲ ಮನ್ನಾ ಸದನದಲ್ಲಿ ಕಾಂಗ್ರೆಸ್, ಬಿಜೆಪಿ ವಾಕ್ಸಮರ…..ಬಿಜೆಪಿಯಿಂದ ಸಭಾತ್ಯಾಗ

ಸಾಲ ಮನ್ನಾ ಸದನದಲ್ಲಿ ಕಾಂಗ್ರೆಸ್, ಬಿಜೆಪಿ ವಾಕ್ಸಮರ…..ಬಿಜೆಪಿಯಿಂದ ಸಭಾತ್ಯಾಗ

ಬೆಳಗಾವಿ-ವಿಧಾನಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ  ಬರ ನಿರ್ವಹಣೆ ಕುರಿತು ಸರ್ಕಾರದ ಪರವಾಗಿ ಉತ್ತರ ನೀಡಿದರು ಇದಕ್ಕೆ ತೃಪ್ತರಾಗದ ವಿರೋಧ ಪಕ್ಷದ ನಾಯಕ ಜಗದಿಶ ಶೆಟ್ಟರ್ ರಾಜ್ಯದಲ್ಲಿ ಒಂದೇ ಒಂದು ಗೋಶಾಲೆ ತೆರೆದಿಲ್ಲ,ಮೇವು ಬ್ಯಾಂಕ್ ಇಲ್ಲ ವಿದ್ಯತ್ತ ಸಮಸ್ಯೆ ಕುರಿತು ಸ್ಪಷ್ಠವಾದ ಉತ್ತರ ನಿಡಿಲ್ಲ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ  ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು

ಈ ಸಂಧರ್ಭದಲ್ಲಿ ಮದ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯಸರ್ಕಾರ ರಾಜ್ಯದಲ್ಲಿ ಸಮರ್ಪಕವಾಗಿ ಬರ ಪರಿಹಾರ ಕಾಮಗಾರಿಗಳನ್ನು ನಿಭಾಯಿಸಿದೆ ಸರ್ಕಾರ ರೈತರ ಪರವಾಗಿದೆ ನಿಜವಾಗಿಯೂ ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ರೈತರ  ಅರ್ಧ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಲಿ ಅರ್ಧದಷ್ಟು ಸಾಲವನ್ನು ಮನ್ನಾ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ಸಿಎಂ ಜಗದೀಶ ಶೆಟ್ಟರ್ ಅವರಿಗೆ ಸವಾಲು ಹಾಕಿದಾಗ ಇದಕ್ಕೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತ ಪಡಿಸಿದಾಗ ಸದನದಲ್ಲಿ ಗದ್ದಲ  ಆರಂಬವಾಯಿತು ಅಡಳಿತಾರೂಢ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ವಾಕ್ಸಮರ ನಡೆಯಿತು

ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ರೈತ ವಿರೋಧಿ ಸಾಮಾಜಿಕ ನ್ಯಾಯದ ವಿರೋಧಿ ಎಂದು ಆರೋಪಿಸಿದರೆ ಜಗದೀಶ ಶೆಟ್ಟರ್ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಸರ್ಕಾರಕ್ಕೆ ರೈತರ ಬಗ್ಗೆ ಕಾಲಜಿ ಇಲ್ಲ ಕಬ್ಬಿನ ಬೆಲೆ ನಿಗದಿ ಮಾಡಿಲ್ಲ,ರೈತರಿಗೆ ಸಮರ್ಪಕವಾಗಿ ವಿದ್ಯತ್ತ ಸರಬರಾಜು ಮಾಡುವಲ್ಲಿ ವಿಫಲವಾಗಿದೆ ರೈತರ ಸಾಲ ಮನ್ನಾ ಮಾಡುವ  ಇಚ್ಛಾ ಶಕ್ತಿ ಸರ್ಕಾರಕ್ಕೆ ಇಲ್ಲ ಸರಕಾರ ಬರ ನಿರ್ವಹಣೆ ಕುರಿತು ಭೋಗಸ್ ಉತ್ತರ ಕೊಟ್ಟೊದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು

ಬರ ನಿರ್ವಹಣೆ ಕುರಿತು ಜೆಡಿಎಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದಾಗ ನೀವು ಮುಂದಿನ ಸಾರಿ ಅಧಿಕಾರಕ್ಕೆ ಬರುತ್ತೇವೆ ಎಂದು ಕನಸು ಕಾಣಬೇಡಿ ನೀವು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ರೂ ಅಧಕಾರಕ್ಕೆ ಬರುವದಿಲ್ಲಿ ಗುಲ್ಬರ್ಗಾ, ಬೆಳಗಾವಿಯಲ್ಲಿ ಮನೆ ಮಾಡಿದ್ರೂ ಅಧಿಕಾರಕ್ಕೆ ಬರೋದಿಲ್ಲ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಿಎಂ ಸಿದ್ಧರಾಮಯ್ಯ ಸದನದಲ್ಲಿ ಗುಡಗಿದರು

ಸರಕಾರದ  ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸಭತ್ಯಾಗ ಮಾಡಿದರು

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *