Breaking News

9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ

‘ಓಡಿಸ್ಸಿ -17’ ಅದ್ದೂರಿ ಸಮಾರೋಪ

ಬೆಳಗಾವಿ-
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
ನಗರದ ಜೈನ ಸಮೂಹ ಸಂಸ್ಥೆ (ಜೆಜಿಐ)ಯ ಜೈನ ಎಂಜನಿಯರಿಂಗ್ ಕಾಲೇಜು ಕಳೆದ ಎರಡು ದಿನಗಳಿಂದ ಹಮ್ಮಿಕೊಂಡ ರಾಷ್ಟ್ರಮಟ್ಟದ ‘ಓಡಿಸ್ಸಿ-17’ ತಾಂತ್ರಿಕ ಹಾಗೂ ತಾಂತ್ರಿಕೇತರ ಸಾಂಸ್ಕøತಿಕ ಉತ್ಸವಕ್ಕೆ ಶನಿವಾರ ಸಂಜೆ ಸಡಗರ ಸಂಭ್ರಮದ ಮಧ್ಯ ಅದ್ದೂರಿಯಾಗಿ ಸಮಾರೋಪಗೊಂಡಿತು.
ತಾಂತ್ರಿಕತೆಯ ವಿವಿಧ ಆಯಾಮ ಹಾಗೂ ಸಾಂಸ್ಕøತಿಕವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗಳಿಗೆ ಒಟ್ಟು ಎರಡು ಲಕ್ಷ ರೂಪಾಯಿಗಳ ವರೆಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಮಧ್ಯ ಉತ್ಸವವನ್ನು ಯಶಸ್ವಿಗೊಳಿಸಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮೆರೆದ ಒಂಬತ್ತು ಜನ ವಿದ್ಯಾರ್ಥಿಗಳಿಗೆ ‘ಯುನಿವರಸಿಟಿ ಬ್ಲ್ಯೂ’ ಪಾರಿತೋಷಕ ನೀಡಿ ಗೌರವಿಸಲಾಯಿತು.
ರಜತ್ ರಾಮಗೊಂಡ (ಬ್ಯಾಡಮಿಂಟನ್), ಸೂರಜ್ ಜಾಧವ, ಶುಭಾ ಗಾಡಗಿನ್, ಶುಭಮ್ ಪಾಟೀಲ (ಶೂಟಿಂಗ್), ಬಾಲಗೌಡ (ಬಿಲ್ಲುಬಾಣ ಪ್ರಯೋಗ), ಸುನಿಲಕುಮಾರ, ಝೈನ್ ತೇರ್ಣಿಕರ್, ಪೃಥ್ವಿರಾಜ್ ಚಹ್ವಾನ್, ಆಧಿತ್ಯ ಉರಾಣಕರ್ (ಬಾಕ್ಸಿಂಗ್ ) ಯುನಿವರಸಿಟ್ ಬ್ಲ್ಯೂ ಪಾರಿತೋಷಕ ಬಹುಮಾನ ಪಡೆದ ಸಾಧಕರು. ಇದರೊಟ್ಟಿಗೆ ಏಕವ್ಯಕ್ತಿ ಗಾಯನ, ಫ್ಯಾಶನ್ ಶೋ, ಏಕವ್ಯಕ್ತಿ ನೃತ್ಯ, ಸಮೂಹ ನೃತ್ಯ ಸ್ಪರ್ಧೆಗಳು ಸಮಾರೋಪ ಸಂದರ್ಭದಲ್ಲಿ ನಡೆದ ವಿಶೇಷ ಗಮನ ಸೆಳೆದವು. ಇವುಗಳಲ್ಲಿ ವಿಜೇತರಾಗದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಜಿಐ ಸಂಸ್ಥೆಯ ಕುಲಸಚಿವ ಪ್ರೊ. ಕೆ.ಜಿ. ಮಳಲಿ ಅವರು ಬಹುಮಾನ ವಿತರಣೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಮಾಜವನ್ನು ಕಟ್ಟುವ ಸಾಮರ್ಥ ಹೊಂದಿರುವ ಎಂಜನಿಯರಿಂಗ್ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದನ್ನು ಉತ್ಸವದಲ್ಲಿ ಸಾಬೀತುಪಡಿಸಿದ್ದಿರಿ. ಪಠ್ಯದ ಅಧ್ಯಯನದ ಜೊತೆಗೆ ಇಂತಹ ಉತ್ಸವಗಳು ತಮ್ಮನ್ನು ಸಾಮಾಜೀಕರಣಗೊಳಿಸಲು ಪೂರಕವಾಗಿವೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಜೈನ್ ಎಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಹಾಗೂ ನಿರ್ದೇಶಕರಾದ ಡಾ. ಕೆ.ಜಿ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಡಿ.ಬಿ. ಪಾಟೀಲ ಸ್ವಾಗತಿಸಿದರು. ಪ್ರೊ. ಎಸ್. ಎಂ. ಕೆರೂರು ವಂದಿಸಿಸಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *