ಅಮೀತ್ ಶಾ ಬೆಳಗಾವಿ ಬಿಜೆಪಿ ನಾಯಕರ ಜೊತೆ ಮೀಟೀಂಗ್ ಮಾಡಿದ್ದೇ ಮೇಜರ್…!!
ಬೆಳಗಾವಿ-ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ನಮ್ಮಲ್ಲಿ ಭಿನ್ನಮತವೂ ಇಲ್ಲ,ಗುಂಪುಗಾರಿಕೆಯೂ ಇಲ್ಲಾ ಅಂತಾ ಹೇಳ್ತಾರೆ,ಆದ್ರೆ ಬೆಳಗಾವಿ ಬಿಜೆಪಿಯ ಆಂತರಿಕ ಕಿತ್ತಾಟ,ಇಲ್ಲಿಯ ಗುಂಪುಗಾರಿಕೆಯ ಬಗ್ಗೆ ಬಿಜೆಪಿಯ ಚಾಣಕ್ಯ,ಅಮೀತ್ ಶಾ ಅವರಿಗೆ ಸಂಪೂರ್ಣವಾದ ಮಾಹಿತಿ ಇದೆ,ಅದಕ್ಕಾಗಿಯೇ ಅಮೀತ್ ಶಾ ಅವರು ಶನಿವಾರ ರಾತ್ರಿ ಬೆಳಗಾವಿ ನಗರದ ಹೊಟೇಲ್ UK27 ನಲ್ಲಿ ಬೆಳಗಾವಿ ಬಿಜೆಪಿ ನಾಯಕರ ಸಭೆ ನಡೆಸಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶನಿವಾರ ರಾತ್ರಿ ಅಮೀತ್ ಶಾ ಅವರ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ 50 ಕ್ಕೂ ಹೆಚ್ವು ಬಿಜೆಪಿ ನಾಯಕರು ಭಾಗವಹಿಸಿದ್ದರು.ಈ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಭಾಗವಹಿಸಿದ್ದರು.ಜಾರಕಿಹೊಳಿ ಸಹೋದರರು ಎಂ.ಕೆ ಹುಬ್ಬಳ್ಳಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ.ಆದ್ರೆ ರಾತ್ರಿ ಅಮೀತ್ ಶಾ ಅವರು ನಡೆಸಿದ ಸಭೆಯಲ್ಲಿ ಅವರು ಭಾಗವಹಿಸಿ,ಬೆಳಗಾವಿ ಬಿಜೆಪಿಯಲ್ಲಿ ನಡೆಯುತ್ತಿರುವ ಕಚ್ಚಾಟದ ಬಗ್ಗೆ ಅಮೀತ್ ಶಾ ಅವರ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದ್ದಾರೆ.
ಬೆಳಗಾವಿ ಬಿಜೆಪಿ ಬಣ ರಾಜಕೀಯಕ್ಕೆ ಅಮೀತ್ ಶಾ ಅವರು ಬ್ರೇಕ್ ಹಾಕಿದ್ದಾರೆ,ಚುನಾವಣೆ ಹೊಸ್ತಿಲಲ್ಲಿ ಎಲ್ಲ ನಾಯಕರು ಒಗ್ಗಟ್ಟಿನಿಂದ ಹೋಗುವಂತೆ ಪಾಠ ಮಾಡಿದ್ದಾರೆ.
ಅಮೀತ್ ಶಾ ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು ಸೇರಿ 54ಜನ ಭಾಗಿಯಾಗಿದ್ದರು.
ಬೆಳಗಾವಿಯ ಹೊಟೇಲ್ UK27 ನಲ್ಲಿ ನಡೆದ 3ಗಂಟೆಗಳ ಸುಧೀರ್ಘ ನಡೆದ ಸಭೆಯಲ್ಲಿ,ಅಥಣಿ, ಗೋಕಾಕ್ ಭಿನ್ನಮತ ಶಮನ ಆಗಬೇಕು ಎಂದು ಸೂಕ್ಷ್ಮವಾಗಿ ಹೇಳಿದ ಷಾ.
ಬೆಳಗಾವಿ ಜಿಲ್ಲೆಯಲ್ಲಿ ಟಾರ್ಗೆಟ್ 15 ಇಟ್ಟುಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ಮುಖ್ಯ, ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು.ಬೆಂಗಳೂರು, ಬೆಳಗಾವಿಯಲ್ಲಿ ಹೆಚ್ಚು ಸ್ಥಾನ ಹೆದ್ದರೆ ರಾಜ್ಯದಲ್ಲಿ ಅಧಿಕಾರ ಖಚಿತ.ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿ ಎಂದು ಅಮಿತ್ ಷಾ ಸಲಹೆ ನೀಡಿದ್ದಾರೆ.
ಬೆಳಗಾವಿ ಬಿಜೆಪಿ ನಾಯಕರ ಸಭೆಗೂ ಮುನ್ನ ಆಯ್ದ 6ಸಂಘದ ಪ್ರಮುಖರ ಸಭೆ ನಡೆಸಿದ ಅಮೀತ್ ಶಾ,
ಸಭೆಯಲ್ಲಿ ಕರ್ನಾಟಕದ ಬಿಜೆಪಿ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿನ ಬಣ ರಾಜಕೀಯವನ್ನ ಗಂಭೀರವಾಗಿ ಪರಿಗಣಿಸಿರುವ ಅಮೀತ್ ಶಾ ಸಭೆ ನಡೆಸಿ ಬೆಳಗಾವಿ ಭಿನ್ನಮತಕ್ಕೆ ಬ್ರೇಕ್ ಹಾಕಿದ್ದಾರೆ.
ಸಭೆಯಲ್ಲಿ ಶಾ ಪಾಠ
ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟನೆ ಮಾಡಿ, ಪಕ್ಷವನ್ನ ಅಧಿಕಾರಕ್ಕೆ ತನ್ನಿನೀವು ಪ್ರಯತ್ನ ಮಾಡಿದರೆ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರ ಗೆಲ್ಲಬಹುದು.ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವ ಹಾಗೆ ಮಾಡಬೇಡಿ, ಒಟ್ಟಾಗಿ ಕೆಲಸ ಮಾಡಿ,ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಒಳ್ಳೆಯ ವಾತಾವರಣ ಇದೆ.ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಎಂದು ಅಮೀತ್ ಶಾ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ್ದಾರೆ.