ಬೆಳಗಾವಿ-ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ,ತಮ್ಮ ಇಬ್ಬರು ಮಕ್ಕಳು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ,ಎಂದು ಹೇಳಿದ್ದಾರೆ.
ನಾನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೂ,ಹೆಚ್ಚಿನ ಸಮಯವನ್ನು ಸಮಾಜ ಸೇವೆಯಲ್ಲೇ ಕಳೆಯುತ್ತೇನೆ,ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿ ಬೇರೆ ಯಾವ ಕ್ಷೇತ್ರದಲ್ಲೂ ಸಿಗುವದಿಲ್ಲ.ನನ್ನ ಪುತ್ರ ರಾಹುಲ್,ಪುತ್ರಿ ಪ್ರಿಯಾಂಕಾ ಇಬ್ಬರೂ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ,ಮುಂದಿನ ದಿನಗಳಲ್ಲಿ ಇಬ್ಬರೂ ನಾನು ನಡೆಸುತ್ತಿರುವ ಉದ್ಯಮಗಳ ನಿರ್ವಹಣೆ ಮಾಡುವದರ ಜೊತೆಗೆ ರಾಜಕೀಯ ಕ್ಷೇತ್ರಕ್ಕೂ ಎಂಟ್ರಿ ಕೊಡ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾ ನೋಡಿಲ್ಲ,ಮೂವತ್ತು ವರ್ಷಗಳ ಹಿಂದೆ ಸಿನಿಮಾ ನೋಡಿದ್ದೆ ನನ್ನ ಅಚ್ಚುಮೆಚ್ಚಿನ ನಟ,ಡಾ. ರಾಜಕುಮಾರ್,ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಊಟದ ವಿಷಯದಲ್ಲಿ ಬೆಂಗಳೂರಿಗೆ ಹೋದ್ರೆ ರಾಗಿ ಮುದ್ದೆ ಊರಲ್ಲಿ ಇದ್ರೆ ಜೋಳದ ರೊಟ್ಟಿ ನನಗೆ ಇಷ್ಟ ,ಎಂದಿದ್ದಾರೆ ಸತೀಶ್ ಜಾರಕಿಹೊಳಿ,
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ