ಬಂಧಿತ ಆರೋಪಿಗಳ ಪಟ್ಟಿ ಇದು
ಬೆಳಗಾವಿ- ಜಯಂತ ತಿಣೇಕರ ಯಾರಿಗೆ ಗೊತ್ತಿಲ್ಲ, ಅವರೊಬ್ಬ ದಿಟ್ಡ ಹೋರಾಟಗಾರ,ಸರ್ಕಾರಿ ಜಮೀನುಮಾರಾಟಕ್ಕೆ ಸಮಂಧಿಸಿದಂತೆ ಪ್ರಶ್ನೆ ಮಾಡಿದ ಜಯಂತ್ ತಿಣೇಕರ ಮೇಲೆ ಹಲ್ಲೆ ಮಾಡಲು ಸುಫಾರಿ ಕೊಟ್ಟ ಲಫಂಗ್ ಈಗ ಅರೆಸ್ಡ್ ಆಗಿದ್ದಾನೆ.
ಖಾನಾಪೂರದಲ್ಲಿ ಸರ್ಕಾರಿ ಜಮೀನನ್ನು ಲಕ್ಷ್ಮಣ ಶೆಟ್ಟಿ ಎಂಬಾತ ಖರೀಧಿ ಮಾಡಿದ್ದ , ಕಾನೂನು ಬಾಹಿರವಾಗಿ ಜಮೀನು ಮಾರಾಟ ಮಾಡಲಾಗಿದೆ ಎಂದು ಹೋರಾಟಗಾರ ಜಯಂತ್ ತಿಣೇಕರ ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಜಯಂತ್ ತಿಣೇಕರ್ ಅವರು ನೀಡಿದ ದೂರಿನ ಮೇರೆಗೆ ಬೆಳಗಾವಿ ಉಪವಿಭಾಗಾಧಿಕಾರಿಗಳು ಪರಶೀಲನೆ ಮಾಡಿ ಜಮೀನು ಮಾರಾಟ ಪ್ರಕ್ರಿಯೆಯನ್ನು ರದ್ದು ಮಾಡಿದ್ದರು.
ಜಯಂತ ತಿಣೇಕರ ಅವರು ದೂರು ನೀಡಿದ ಕಾರಣವೇ ನಾನು ಖರೀಧಿ ಮಾಡಿದ ಜಮೀನು ಸಿಗಲಿಲ್ಲ ಎಂದು ಸಿಟ್ಟಿಗೆದ್ದ ಲಕ್ಷ್ಮಣ ಶೆಟ್ಟಿ, ಜಯಂತ್ ತಿಣೇಕರ ಮೇಲೆ ಹಲ್ಲೆ ಮಾಡಲು ಬೆಳಗಾವಿಯ ಮರಿ ಪುಡಾರಿಗಳಿಗೆ 50 ಸಾವಿರ ರೂ ಸುಪಾರಿ ಕೊಟ್ಟಿದ್ದ ಎಂದು ತಿಳಿದು ಬಂದಿದೆ.
ಜಯಂತ್ ತಿಣೇಕರ ಅವರ ಮೇಲೆ ಹಲ್ಲೆ ಮಾಡಬೇಕು ಕೈಕಾಲುಗಳನ್ನು ಅಪಂಗ ಮಾಡುವಂತೆ ಸುಪಾರಿ ಕೊಟ್ಡ ಲಫಂಗ್ ಲಕ್ಷ್ಮಣ ಶೆಟ್ಟಿ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬೆಳಗಾವಿ ಪೋಲೀಸ್ರು ಬಂಧಿಸಿದ್ದಾರೆ.