ಬೆಳಗಾವಿ ಆ.16: ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆ ಹಾಗೂ ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೇರಿ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ 15 ರಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 801 ಜನರು ರಕ್ತದಾನ ಮಾಡುವ ಮೂಲಕ ದಾಖಲೆ ನಿರ್ಮಿರ್ಸಿದ್ದಾರೆ. ಬೆಳಗಾವಿಯ ಮಹಾವೀರ ಭವನದಲ್ಲಿ ಸೋಮವಾರದಂದು ನಡೆದ ರಕ್ತದಾನ ಶಿಬಿರದಲ್ಲಿ ಈ ದಾಖಲೆ ದಾಖಲಿಸಲಾುತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹಕ ರಾಘವೇಂದ್ರ ಕಾಗವಾಡ ಅವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜಿತೋ ಸಂಸ್ಥೆಯು ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಸಾಮಾಜಿಕ ಸೇವೆಯನ್ನು ಮುಂದುವರೆಸಿಕೊಂಡು ಬಂದಿದೆ. ಇಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಅವರು ತಿಳಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ರಕ್ತದಾನ ಶಿಬಿರಗಳ ಮೂಲಕ ಜನರಲ್ಲಿ ಸದೃಢ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಇಂದು ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆದಂದು ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಮೂಲಕ ಎಲ್ಲರಲ್ಲಿ ದೇಶಾಭಿಮಾನ ಬೆಳೆಯಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭಕ್ಕೆ ಗೌರವ ಅತಿಥಿಯಾಗಿ ಆಗಮಿಸುದ್ದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಿತೊ ಅಧ್ಯಕ್ಷ ಪುಷ್ಪಕ ಹನಮಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಅಭಯ ಆದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿತೋ ಕಾರ್ಯದರ್ಶಿ ಅಮಿತ ದೋಷಿ ವಂದಿಸಿದರು. ವೇದಿಕೆ ಮೇಲೆ ಚನ್ನಬಸಪ್ಪ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೃಣಾಲ, ಕಾರ್ಯಕ್ರಮ ಯೋಜನಾಧಿಕಾರಿ ಹರ್ಷವರ್ಧನ ಇಂಚಲ, ದಿ ನ್ಯೂ ಇಂಡಿಯಾ ಎಶ್ಯುರನ್ಸ್ ಕಂಪನಿ ವೀಭಾಗೀಯ ವ್ಯವಸ್ಥಾಪಕ ಬಿ.ಎಸ್. ಸುರೇಶಕುಮಾರ, ಉಪ ಓಷಧ ನಿಯಂತ್ರಕರ ಪ್ರಾದೇಶಿಕ ಕಚೇರಿಯ ಬೆಳಗಾವಿಯ ಉಪ ಓಷಧ ನಿಯಂತ್ರಕ ಕೆ.ಮಲ್ಲಿಕಾರ್ಜುನ, ಮತ್ತು ಅಜಯ ಮುದಗಲ್ಲ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈ ರಕ್ತದಾನ ಶಿಬಿರದ ಯಶಸ್ವಿಗೆ ವಿವಿಧ ಸಂಘ ಸಂಸ್ಥೆಗಳು ಸಹಕರಿಸಿದ್ದವು. ಈ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ದಾಣಿಗಳಿಗೆ ದಿ. ನ್ಯೂ ಇಂಡಿಯಾ ಎಷ್ಯುರೆನ್ಸ್ ಕಂಪನಿಯ ವತಿಯಿಂದ ಜನತಾ ವ್ಯಯಕ್ತಿಕ ಅಪಘಾತ ಪಾಲಿಸಿ ಯೋಜನೆಯಡಿ ಒಂದು ವರ್ಷದ ಅವಧಿಗೆ 1 ಲಕ್ಷ ರು.ಗಳ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.