Breaking News

K ಕಲ್ಯಾಣ ಕಲಹದಲ್ಲಿ ಪ್ರತ್ಯಕ್ಷನಾದ ಸಯ್ಯದ….!

!ಬೆಳಗಾವಿ- ಪ್ರೇಮ ಕವಿ,ಕೆ.ಕಲ್ಯಾಣ ಕಲಹ ಈಗ ಹೊಸ ತಿರುವು ಪಡೆದುಕೊಂಡಿದೆ,ಈ ಕಲಹದಲ್ಲಿ ಶಿವಾನಂದ ವಾಲಿ,ಮಂತ್ರವಾದಿಯೇ ಆರೋಪಿ ಎಂದು ಮಾದ್ಯಮಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಸಯ್ಯದ,ಉರ್ಫ ದೊಡ್ಡಪ್ಪಾ,ಎಂಬಾತ ಪ್ರತ್ಯಕ್ಷವಾಗಿದ್ದಾನೆ.

ಆರೋಪಿ ಶಿವಾನಂದ ವಾಲಿಯನ್ನು ಪೋಲೀಸ್ ಕಸ್ಟಡಿಗೆ ಪಡೆದುಕೊಂಡು,ಆತನನ್ನು ವಿಚಾರಣೆಗೊಳಪಡಿಸಲಾಗಿತ್ತು,ಪೋಲೀಸರು ಹೆಚ್ಚಿನ ವಿಚಾರಣೆ ನಡೆಸುವ ಸಂಧರ್ಭದಲ್ಲಿ ಬೀಳಗಿ ಸಮೀಪದ ಗಲಗಲಿಯಲ್ಲಿ ಗಲಿಬಿಲಿಯಾದ ಮಾಹಿತಿಯನ್ನು ಅಲ್ಲಿಯ ಗ್ರಾಮಸ್ಥರೇ ಬೆಳಗಾವಿ ಸುದ್ಧಿಗೆ ಕೊಟ್ಟಿದ್ದಾರೆ

ಕೆ. ಕಲ್ಯಾಣ ಆಸ್ತಿ ಕಬಳಿಕೆಯಲ್ಲಿ ಸಯ್ಯದ,ಉರ್ಫ್ ದೊಡ್ಡಪ್ಪ,ಆತನೂ ಪತ್ರಕರ್ತ, ಕೆ,ಕಲ್ಯಾಣ ಕುಟಬದವರ ಆಸ್ತಿಗೆ ಸಮಂಧಿಸಿದ ದಾಖಲೆ ಪತ್ರಗಳು ಆತನ ಬಳಿ ಇವೆ ಎಂದು ಹೇಳಲಾಗುತ್ತಿದ್ದು,ಬೆಳಗಾವಿ ಪೋಲೀಸರು ಸಯ್ಯದ ಉರ್ಫ ದೊಡ್ಡಪ್ಪಾ,ಪತ್ರಕರ್ತ ಇವನ ಪತ್ತೆಗೆ ಜಾಲ ಬೀಸೀದ್ದಾರೆ ಎಂದು ತಿಳಿದು ಬಂದಿದೆ.

ಸಯ್ಯದ ಉರ್ಪ್ ದೊಡ್ಡಪ್ಪಾ ಗಲಗಲಿ ಗ್ರಾಮದಲ್ಲಿ ಇಲ್ಲ ,ಆದ್ರೆ ಆತ ಠಾಣೆಗೆ ಹಾಜರಾಗಲಿ ಅಂತಾ ಬೆಳಗಾವಿ ಪೋಲೀಸರು ಸಯ್ಯದನ ಮ್ಯಾಕ್ಸೀ ಕ್ಯಾಬ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಪ್ರಕರಣಕ್ಕೆ ಸಮಂಧಿಸಿದಂತೆ ಮಾಳ ಮಾರುತಿ ಠಾಣೆಯ ಸಿಪಿಐ ಗಡ್ಡೇಕರ ಅವರನ್ನು ವಿಚಾರಿಸಿದರೆ,ಪ್ರಕರಣ ತನಿಖೆಯಲ್ಲಿದೆ ಎಂದು ಹೇಳುತ್ತಿದ್ದು ಈಬಗ್ಗೆ ಹೆಚ್ವಿನ ಮಾಹಿತಿ ಕೊಡುತ್ತಿಲ್ಲ.

ಪೋಲೀಸರ ತನಿಖೆಯ ನಂತರವೇ ಪ್ರಕರಣ ಸತ್ಯಾಂಶ ಗೊತ್ತಾಗಲಿದೆ.

ಆದ್ರೆ ಇಂದು ಸಂಜೆ ಬೆಳಗಾವಿ ಮಾಳಮಾರುತಿ ಠಾಣೆಗೆ ಹೋಗಿದ್ದೆ ಠಾಣೆಯ ಎದುರು ಕೆಲವು ಮ್ಯಾಕ್ಸಿ ಕ್ಯಾಬ್ ಗಳು ನಿಂತಿವೆ,ಈ ಮ್ಯಾಕ್ಸೀ ಕ್ಯಾಬ್ ಗಳು ಯಾರಿಗೆ ಸೇರಿದ್ದು ಇಲ್ಯಾಕ ಬಂದಿವೆ ಎಂದು ವಿವಾರಿಸಿದಾಗ ನನಗೂ ಸಯ್ಯದನ ವಿಷಯ ತಿಳಿದಿದ್ದು ಅಲ್ಲೇ ನಂತರ ಸಯ್ಯದನ ಊರು ಯಾವುದು,ಆತನ ಪಾತ್ರವೇನು ಎನ್ನುವ ಮಾಹಿತಿ ಗೊತ್ತಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *