ಕೆ.ಕಲ್ಯಾಣ ಹೆಂಡತಿಯನ್ನು ಮಾದ್ಯಮಗಳ ಎದುರು ಹಾಜರು ಪಡಿಸಲಿ…!
ಬೆಳಗಾವಿ- ಪ್ರೇಮ ಕವಿ ಕಲ್ಯಾಣ ಕುಟುಂಬ ಕಲಹ ಮುಗಿಯಬೇಕು,ಪತಿ ಪತ್ನಿ ಒಂದಾಗಬೇಕು,ಸಂಸಾರ ಸುಖವಾಗಿ ಸಾಗಬೇಕು ಎನ್ನುವದು ನಮ್ಮೆಲ್ಲರ ಆಶಯ
ಆದರೆ ಕೆ. ಕಲ್ಯಾಣ ಪ್ರಕರಣದಲ್ಲಿ ಬೆಳಗಾವಿ ಪೋಲೀಸರು ಕೇವಲ ಕಲ್ಯಾಣ ಅವರ ಆರೋಪಕ್ಕೆ ಮಾನ್ಯತೆ ನೀಡುತ್ತಿದ್ದಾರೆ,ಕಲ್ಯಾಣ ಅವರ ಪತ್ನಿಯ ಆರೋಪಕ್ಕೆ ಮಾನ್ಯತೆ ನೀಡುತ್ತಿಲ್ಲ ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ,ಈ ಅನುಮಾನಕ್ಕೆ ಪೋಲೀಸರ ನಡೆ ಪುಷ್ಟಿ ನೀಡಿದಂತೆ ಕಾಣುತ್ತಿದೆ.
ಶಿವಾನಂದ ವಾಲಿ ನಿಜವಾಗಿಯೂ ಕಲ್ಯಾಣ ಪತ್ನಿ ,ಮಾವ ಮತ್ತು ಅತ್ತೆಯನ್ನು ವಶೀಕರಣ ಮಾಡಿದ್ದಾನೆಯೇ.ಈ ವಿಷಯದಲ್ಲಿ ಸಯ್ಯದ ,ಉರ್ಪ ದೊಡ್ಡಪ್ಪನ ಪಾತ್ರ ಏನು,ಸಯ್ಯದ ಮ್ಯಾಕ್ಸಿ ಕ್ಯಾಬ್ ಗಳನ್ನು ಬೆಳಗಾವಿ ಪೋಲೀಸರು ವಶಪಡಿಸಿಕಡಿದ್ದು ಏಕೆ..? ಈ ಪ್ರಕರಣದಲ್ಲಿ ಕಲ್ಯಾಣ ಹೆಂಡತಿಯನ್ನು ಮಾದ್ಯಮಗಳ ಎದುರು ತರುತ್ತಿಲ್ಲ ಏಕೆ..? ಈ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಮರ್ಜಿ ಕಾಯುತ್ತಿದ್ದರೆಯೇ ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಬೆಳಗಾವಿ ನಗರದಲ್ಲಿ ಡಿಸಿಪಿ ವಿಕ್ರಮ್ ಅಮಟೆ ಎಲ್ಲ ಸಣ್ಣ ಪುಟ್ಟ ಪ್ರಕರಣಗಳಲ್ಲಿಯೂ ಖುದ್ದಾಗಿ ಭಾಗಿಯಾಗುತ್ತಿದ್ದಾರೆ,ಆದರೆ ಈ ಪ್ರಕರಣದ ತನಿಖೆಯಲ್ಲಿ ಅಮಟೆ ಭಾಗವಹಿಸಬೇಕಾಗಿತ್ತು ಆದ್ರೆ ಈ ಪ್ರಕರಣದ ತನಿಖೆಯಲ್ಲಿ ಅವರು ದೂರು ಉಳಿದಿದ್ದು ಏಕೆ..? ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ಗಂಡ ಹೆಂಡತಿಯ ಜಗಳದಲ್ಲಿ ನಿನ್ನೆ ಶಿವಾನಂದ ವಾಲಿ ,ಇವತ್ತು ದೊಡ್ಡಪ್ಪ ಸಯ್ಯದ ಪ್ರತ್ಯಕ್ಷವಾಗಿದ್ದಾನೆ. ಕೆ. ಕಲ್ಯಾಣ ಹೆಂಡತಿಯ ಆರೋಪ ಏನು..? ಅದನ್ನೂ ಪೋಲೀಸರು ಬಹಿರಂಗಪಡಿಸಲು ಅವಕಾಶ ನೀಡಲಿ
ಕೆ.ಕಲ್ಯಾಣ ಹೆಂಡತಿಗೆ ನಿಜವಾಗಿಯೂ ಮೋಸ ಆಗಿದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಆದ್ರೆ,ಕೆ. ಕಲ್ಯಾಣ ಅವರಿಗೆ ಪತ್ರಿಕಾಗೋಷ್ಠಿ ನಡೆಸಿ ಅವರ ಅಭಿಪ್ರಾಯ ವ್ಯೆಕ್ತ ಪಡಿಸಲು ಅವಕಾಶ ನೀಡಿದ ಪೋಲೀಸ್ ಇಲಾಖೆ .ಕೆ ಕಲ್ಯಾಣ ಅವರ ಹೆಂಡತಿಯನ್ನು ಮಾದ್ಯಮಗಳ ಎದುರು ಬರಲು ಬಿಡುತ್ತಿಲ್ಲವೇಕೆ..? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.