Breaking News

ಕಾಕತಿ ರೇಪ್ ಕೇಸ್,ದೆಹಲಿಯ ನಿರ್ಭಯ ಪ್ರಕರಣಕ್ಕಿಂತಲೂ ಭಯಾನಕ..!!!!

ಬೆಳಗಾವಿ- ಸಮೀಪದ ಕಾಕತಿ ಗ್ರಾಮದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾವಾರ ಪ್ರಕರಣಕ್ಕಿಂತಲೂ ಭಯಾನಕ ಎನ್ನುವ ಅಂಶ ಬೆಳಕಿಗೆ ಬಂದಿದೆ

ಬೆಳಗಾವಿಯ ಕಾಲೇಜ ಒಂದರಲ್ಲಿ ಓದಿತ್ತದ್ದ ಈ ಬಾಲಕಿ ತನ್ನ ಬಾಯ್ ಫ್ರೆಂಡ ಜೊತೆ ಕಾಕತಿ ಗ್ರಾಮದ ಹೊರ ವಲಯದಲ್ಲಿ ವಿಹಾರಕ್ಕೆ ಹೋಗಿದ್ದಾಳೆ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಮುತ್ಯಾನಟ್ಟಿ ,ಮತ್ತು ಮನಗುತ್ತಿಯ   ಗ್ರಾಮದ ಸುಮಾರು ಏಳು ಜನ ಕಿರಾತಕರು ಮೊದಲು ಬಾಲಕಿಯನ್ನು ರೇಗಿಸಿದ್ದಾರೆ ನಂತರ ಆಕೆಯ ಮೇಲೆ ದಾಳಿ ಮಾಡಿದ್ದಾರೆ

ಈ ಬಾಲಕಿಯ ಜೊತೆ ಇದ್ದ ಆತನ ಗೆಳೆಯನನ್ನು ಮೊದಲು ಕಟ್ಟಿ ಹಾಕಿದ ಕಿರಾತಕರು ಸರದಿಯಂತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಒಬ್ಬರು ಅತ್ಯಾಚಾರ ನಡೆಸಿದರೆ ಉಳಿದವರು ಅತ್ಯಾಚಾರ ನಡೆಸಿದ ದೃಶ್ಯಾವಳಿಗಳನ್ನು ಮೋಬೈಲ್ ನಲ್ಲಿ ಶೂಟ್ ಮಾಡಿದ್ದಾರೆ ಈ ನಾಲಾಯಕರು..

ಸರದಿಯಂತೆ ಅತ್ಯಾಚಾರ ನಡೆಸಿದ ಮುತ್ಯಾನಟ್ಟಿಯ ಈ ಕಿರಾತಕರು ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಮಾಡಿ ನಂತರ ಈ ಬಾಲಕಿಯ ಕೊಲೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಪೋಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ

ಕಾಕತಿಯಲ್ಲಿ ನಡೆದ ಗ್ಯಾಂಗ್ ರೇಪ್ ದೆಹಲಿಯಲ್ಲಿ ನಡೆದ ನಿರ್ಭಯ ಕೇಸ್ ಗಿಂತಲೂ ಭಯಾನಕವಾಗಿದೆ ಈ ದುಶ್ಕೃತ್ಯ ನಡೆಸಿದ ನಾಲ್ಕು ಜನ ನಾಲಾಯಕರನ್ನು ಪೋಲೀಸರು ಬಂಧಿಸಿದ್ದು ಮೂರು ಜನ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದು ಇವರ ಪತ್ತೆಗೆ ಪೋಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ

ಸಾಮೂಹಿಕ ಅತ್ಯಾಚಾರ ನಡೆಸಿದ ಈ ಕಿರಾತಕರು ಅತ್ಯಾಚಾರ ನಡೆಸಿದ ದೃಶ್ಯಾವಳಿಗಳನ್ನು ತಮ್ಮ ಮೋಬೈಲ್ ನಲ್ಲಿ ಶೂಟ್ ಮಾಡಿದ್ದು ಈ ದೃಶ್ಯಾವಳಿಗಳು ಪೋಲೀಸರ ಕೈ ಸೇರಿದ್ದು ಈ ಕಿರಾತಕರ ಮೇಲೆ ಪೋಲೀಸರು ರೇಪ್ ಕೇಸ್ ಡಕಾಯತಿ ಕೇಸ್ ಸೇರಿದಂತೆ ಪೋಸ್ಕೋ ಪ್ರಕರಣ ದಾಖಲಿಸಿ ನಾಲ್ಕು ಜನ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ

ಪರಾರಿಯಾಗಿರುವ ಮೂವರ ಪತ್ತೆ ಆಗಬೇಕು ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಿರಾತಕರಿಗೆ ಜಾಮೀನು ಸಿಗದಂತೆ ಬೆಳಗಾವಿಯ ನ್ಯಾಯವಾದಿಗಳು ನೋಡಿಕೊಳ್ಳಬೇಕು ಮಹಿಳಾ ಸಂಘಟನೆಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಒತ್ತಾಯಿಸಿ ಹೋರಾಟ ಆರಂಭಿಸಬೇಕು,ಅತ್ಯಾಚರಕ್ಕೊಳಗಾದ ಈ ಬಾಲಕಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಆಗಬೇಕು ಅನ್ನೋದೆ ನಮ್ಮ ಕಳಕಳಿ

ಲವರ್ಸ ಪಾರ್ಕ ಆಗಲಿ

ಬೆಳಗಾವಿಯ ಯಾವುದಾದರೊಂದು ಪಾರ್ಕಗೆ ಲವರ್ಸಗಳು ಹೋದರೆ ಸಾರ್ವಜನಿಕರ ಕಿರಿ ಕಿರಿ ಅಂತ ಈ ಲವರ್ಸಗಳು ಬೆಳಗಾವಿ ನಗರದ ಹೊರ ವಲಯದಲ್ಲಿರುವ ಕಾಕತಿ ಗ್ರಾಮದ ಹೊರ ವಲಯದಲ್ಲಿ ವಿಹರಿಸುತ್ತಾರೆ ಕಾಕತಿಯ ಕೋಟೆ ಪ್ರದೇಶ ಭೂತರಾಮಟ್ಟಿಯ ಗಾರ್ಡನ್ ಪ್ರದೇಶಕ್ಕೆ ಹೋಗುವದು ಸಾಮಾನ್ಯ

ಈ ಲವರ್ಸಗಳ ವಿಹಾರ ಕ್ಕಾಗಿ ಬೆಳಗಾವಿಯ ಯಾವುದಾದರೊಂದು ಪಾರ್ಕನ್ನು ಲವರ್ಸ ಪಾರ್ಕವನ್ನಾಗಿ ಪರಿವರ್ತಿಸಿದರೆ ಕಾಕತಿಯ ಹೊರ ವಲಯದಲ್ಲಿ ನಡೆದ ಅತ್ಯಾಚಾರ ದಂತಹ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *