Breaking News

ಕಾಂಗ್ರೆಸ್ ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ..

ಬೆಳಗಾವಿ- ಬಹಳ ದಿನಗಳ ನಂತರ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕ್ರಿಯಾಶೀಲವಾಗಿದೆ ನೂತನ ಜೆಡಿಎಸ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತ್ರತ್ವದಲ್ಲಿ ಬೀದಿಗಿಳಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಹೈಕಮಾಂಡ್ ಗಳಿಗೆ ನೀಡಿರುವ ಕಪ್ಪು ಹಣದ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿದೆ

ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು

ಈ ಸಂಧರ್ಭದಲ್ಲಿ ಮಾತನಾಡಿದ ಶಂಕರ ಮಾಡಲಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೋಟ್ಯಾಂತರ ರೂ ಹಣವನ್ನು ಹೈಕಮಾಂಡ್ ಗಳಿಗೆ ನೀಡಿ ಈ ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸಿ ಬೀದಿ ರಂಪಾಟ ಮಾಡುತ್ತಿದ್ದು ಈ ಕುರಿತು ಕೂಡಲೇ ಸಿಬಿಐ ತನಖೆ ಮಾಡಿಸಿ ರಾಜ್ಯದಿಂದ ಹೈಕಮಾಂಡ್ ಗಳಿಗೆ ಹೋಗಿರುವ ಹಣವನ್ನು ರಾಜ್ಯಕ್ಕೆ ವಾಪಸ್ ತರಿಸಬೇಕು ಎಂದು ಒತ್ತಾಯಿಸಿದರು

ಚನ್ನಪ್ಪ ವಗ್ಗನ್ನವರ,ಪ್ರಮೋದ ಪಾಟೀಲ, ಶ್ರೀಶೈಲ ಪಡಗಲ್ಲ ಮೇಘಾ ಕುಂದರಗಿ ಫೈಜುಲ್ಲಾ ಮಾಡಿವಾಲೆ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *