ಬೆಳಗಾವಿ-
ಕಳಸಾ ಬಂಡೂರಿ ಹೋರಾಟಗಾರರಿಂದ ಮಲಪ್ರಭಾ ಉಗಮಸ್ಥಾನ ಕನಕುಂಬಿಯಲ್ಲಿ ಮದ್ಯ ರಾತ್ರಿ ೧೨ ಗಂಟೆಗೆ ಧ್ವಜಾರೋಹಣ ಮಾಡುವದರ ಮೂಲಕ ಭಾರತದ ಒಕ್ಕೂಟದ ವ್ಯೆವಸ್ಥೆಯಲ್ಲಿ ದೇಶ ಒಂದೇ ಜಲ ಒಂದೇ ಸಮ ಬಾಳು ಸಮ ಪಾಲು ಎನ್ನುವ ಸಂದೇಶವನ್ನು ಕಳಸಾ ಬಂಡೂರಿ ಹೋರಾಟಗಾರರು ನೀಡಿದರು
ಬೆಳಗಾವಿ ಜಿಲ್ಲೆ ಖಾನಾಪೂರ್ ತಾಲೂಕಿನ ಕನಕುಂಬಿ ಗ್ರಾಮದಲ್ಲಿ ಉಗಮವಾದ ಮಲಪ್ರಭೆ ನದಿಯ ದಡದಲ್ಲಿ ವಿನೂತನವಾಗಿ ಸ್ವಾತಂತ್ಯೋತ್ಸವನ್ನು ಆಚರಿಸಲಾಯಿತು
ಕಳೆದ ಮೂರುವರುಷದಿಂದ ಕಳಸಾ ಬಂಡೂರಿ ಹೋರಾಟ ಮಾಡಿದರೂ ಯೋಜನೆಯನ್ನು ಜಾರಗೆ ತರಲು ಹಿಂದಟು ಹಾಕಿದ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ದ ಆಕ್ರೋಶ್ ವ್ಯೇಕ್ತಪಡಿಸಿ ಧ್ವಜಾರೋಹಣ ನೆರವೇರಿಸಿದ ಹೋರಾಟಗಾರರು ಮತ್ತು ಜನ ಪ್ರತಿನಿದಿಗಳು ಕೂಡಲೇ ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲು ಒತ್ತಾಯ ಮಾಡಿದರು
ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಮತ್ತು ಹೋರಾಟಗಾರ ವಿಕಾಸ್ ಸೋಪ್ಪಿನ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆಯನ್ನು ಮರೆತು ರಾಜಕೀಯ ಮಾಡುತ್ತಿವೆ ನಮಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲಾ ಇನ್ನಾದ್ರೂ ಎರಡು ಸರ್ಕಾಗಳು ಮಹದಾಹಿ ಯೋಜನೆಯನ್ನು ಜಾರಗಿ ತಂದು ಕುಡಿಯುವ ನೀರನ್ನು ಕೊಡಲಿ ಎಂದು ಹೋರಾಟಗಾರರು ಆಗ್ರಿಸಿದರು.