Breaking News
Home / Breaking News / ಬೆಳಗಾವಿಯಲ್ಲಿ ಸಂಬ್ರಮದ ಸ್ವಾತಂತ್ರೋತ್ಸವ

ಬೆಳಗಾವಿಯಲ್ಲಿ ಸಂಬ್ರಮದ ಸ್ವಾತಂತ್ರೋತ್ಸವ

ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿದರು.

ಈ‌ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಶತ ೨೯ % ಪ್ರಮಾಣದ ಮಳೆಯ ಕೊರತೆಯಿಂದ ಬಿತ್ತನೆ ತಡವಾಗಿ ಆರಂಭವಾಗಿ ಚಿಕ್ಕೋಡಿ, ರಾಯಬಾಗ ಹಾಗೂ ಸವದತ್ತಿ ತಾಲೂಕಿಗಳಲ್ಲಿ ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಈ ಮುಂಗಾರಿನಲ್ಲಿ ಒಟ್ಟು ೬.೪೩ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ೪.೬೮ ಲಕ್ಷ‌ ಹೆಕ್ಟೇರ್ ಆಗಿದೆ ಎಂದು ಹೇಳಿದರು.

ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಒಟ್ಟು ೧ ಲಕ್ಷ ೪೩ ಸಾವಿರ ರೈತರಿಗೆ ೩೯ ಸಾವಿರ ಕ್ವಿಂಟಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದೆ. ಪ್ರಸ್ತುತ ಒಟ್ಟು ೧.೮೮ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ನಿಗದಿಯಾಗಿದ್ದು, ಇದುವರೆಗೆ ೧.೩೭ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ರಸಗೊಬ್ಬರದ ಯಾವುದೇ ಕೊರತೆಯಿಲ್ಲ ಎಂದು ಹೇಳಿದರು.

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ ೧೦ ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಸೌಲಭ್ಯಗಳನ್ನು ‌ಒದಗಿಸಲಾಗಿದೆ. ಇದಕ್ಕಾಗಿ ೯೫ ಕೋಟಿ ರೂಪಾಯಿ ‌ಸಹಾಯಧನ ಒದಗಿಸಲಾಗಿದೆ ಎಂದು‌‌ ಸಚಿವ ಒದಗಿಸಲಾಗಿದೆ ಎಂದು ಹೇಳಿದರು.

Check Also

ಕ್ರಿಕೆಟ್ ಆಟಗಾರ, ಅಶೀಶ್ ನೆಹ್ರಾ, ಬೆಳಗಾವಿಗೆ ಬಂದಿದ್ರು….!!

ಬೆಳಗಾವಿ-ದೇಶದ ಯಾವುದೇ ರಾಜ್ಯದ ಗಣ್ಯರು ಗೋವಾಕ್ಕೆ ಹೋಗಬೇಕಾದ್ರೆ ಬಹುತೇಕರು ಬೆಳಗಾವಿ ಮಾರ್ಗವಾಗಿಯೇ ಗೋವಾಕ್ಕೆ ಹೋಗ್ತಾರೆ,ಇವತ್ತು ಬೆಳಗ್ಗೆ ಟೀಂ ಇಂಡಿಯಾ ಕ್ರಿಕೆಟ್ …

Leave a Reply

Your email address will not be published. Required fields are marked *