ಈತ ಫಾರೇನರ್….ಆದ್ರೂ.. ಪರದೇಶಿ…!!
ಬೆಳಗಾವಿ-ಕಳೆದ ಎರಡು ವಾರಗಳಿಂದ,ಬೆಳಗಾವಿ ಪಕ್ಕದ ಕಣಬರ್ಗಿ ಗ್ರಾಮದ ಬಸ್ ನಿಲ್ಧಾಣದಲ್ಲಿ ಪರದೇಶಿಯೊಬ್ಬ ವಾಸ ಮಾಡಿದ್ದಾನೆ.ಈತ ನೋಡಲು ಮ್ಯಾಡ್ ಅನಿಸಿದ್ರೂ ಹು..ಆರ್ ಯೂ ಎಂದಾಗ ಐ ಯಮ್ ಗಾಡ್ ಅಂತೀದ್ದಾನೆ.
ಈತ ಮೂಲತಹ ಜರ್ಮನ್ ದೇಶದವ,ಗೋವಾದಿಂದ ಅಲೆದಾಡುತ್ತ ಕೊನೆಗೆ ಕಣಬರ್ಗಿ ಗ್ರಾಮಕ್ಕೆ ತಲುಪಿದ್ದಾನೆ. ಕಳೆದ ಎರಡು ವಾರಗಳಿಂದ ಇಲ್ಲಿಯ ಬಸ್ ನಿಲ್ಧಾಣದಲ್ಲೇ ಠಿಖಾನಿ ಹೂಡಿದ್ದಾನೆ ಗ್ರಾಮಸ್ಥರು ಈತ ಫಾರೇನರ್ ಅಂತಾ ರೊಟ್ಟಿಯ ಬದಲು ಆ್ಯಪಲ್ ಕೊಡುತ್ತಿದ್ದಾರೆ.ಸ್ಥಳೀಯರ ಆ್ಯಪಲ್ ತಿಂದು ಈ ಫಾರೇನರ್ ದಿನ ಕಳೆಯುತ್ತಿದ್ದಾನೆ.
ಯಾರೋ ಅಸಹಾಯಕರು ಕಂಡ್ರೆ ಹಳ್ಳಿಯಲ್ಲಿ ಪಾಪ ಪರದೇಶಿ ಅಂತಾರೆ..ಆದ್ರೆ ಈತ ನಿಜವಾಗಿಯೂ ಪರದೇಶಿ ಅಂದ್ರೆ ವಿದೇಶಿ ಆಗಿರುವದರಿಂದ ಇಲ್ಲಿಯ ಜನ ಅವನ ಲೇವಲ್ ಗೆ ತಕ್ಕಂತೆ ತಿಂಡಿ ತಿನಿಸುಗಳನ್ನು ಕೊಡುತ್ತಿದ್ದಾರೆ.
ಇವತ್ತು ಶಾಸಕ ಅನೀಲ ಬೆನಕೆ ಅವರೂ ಈ ಫಾರೇನರ್ ನನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ಅಲ್ಲಿಂದ ನ್ಯುಜಿಲ್ಯಾಂಡ್ ಗೆ ಹೋಗಬೇಕು ಅಂತೀದ್ದಾನೆ….
ಯಾರೇ ಇವನನ್ನು ಮಾತನಾಡಿಸಿದ್ರೆ ಸಾಕು ಪ್ಲೀಸ್ ವ್ಯಾಟ್ಸಪ್ ಕಾಲ್ ಟು ಮೈ ವೈಫ್ ಅಂತಾನೆ…ಫೋನ್ ಹಚ್ವಿ ಕೊಟ್ಟರೆ ತನ್ನ ಹೆಂಡತಿಯ ಜೊತೆಗೂ ಮಾತನಾಡುತ್ತಾನೆ.
ಕಣಬರ್ಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಅಸಹಾಯಕ ನಾಗಿರುವ ಈ ಪರದೇಶಿಗೆ ಸಹಾಯ ಮಾಡಿ,ಈತನಿಗೆ ಆತನ ದೇಶಕ್ಕೆ ಕಳುಹಿಸಿ ಅನ್ನೋದು ಕಣಬರ್ಗಿ ಗ್ರಾಮಸ್ಥರ ಒತ್ತಾಯವಾಗಿದೆ.