Breaking News

ಮಹಾರಾಷ್ಟ್ರ ನಾಯಕರ ಪ್ರಚೋದನೆಗೆ ಲಗಾಮು ಹಾಕಿ – ಅಶೋಕ ಚಂದರಗಿ

 

ಮಹಾರಾಷ್ಟ್ರ ನಾಯಕರನ್ನು ಬೆಳಗಾವಿಗೆ ಆಗಮಿಸುವುದನ್ನು ನಿಷೇಧಿಸುವಂತೆ ಒತ್ತಾಯಬೆ

ಬೆಳಗಾವಿ

ಮರಾಠಿ ಸಾಹಿತ್ಯ ಸಮ್ಮೇಳನ ನೆಪದಲ್ಲಿ ಗಡಿ ವಿವಾದ ಕೆದಕಿ ಪ್ರಚೋಧಿಸುತ್ತುರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ರವಾನಿಸಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗಡಿ ವಿವಾದವನ್ನು ಕೆದುಕುವ ಮೂಲಕ ಉಭಯ ರಾಜ್ಯಗಳ ಗಡಿಯಲ್ಲಿ ಭಾಷಾ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ನಡೆಸುತ್ತಿರುವುದು ಕರ್ನಾಟಕ ಸರಕಾರಕ್ಕೆ ಗೊತ್ತಿದೆ‌. ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಆಹ್ವಾನಿಸಿ ಅವರಿಂದ ಮರಾಠಿಗರನ್ನು ಪ್ರಚೋಧಿಸುವ ಭಾಷಣಗಳನ್ನು ವ್ಯವಸ್ಥೆ ಮಾಡುವ ಕೆಲಸ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಬೆಳಗಾವಿ, ಖಾನಾಪುರ, ನಿಪ್ಪಾಣಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೂಲಕ ಗಡಿ ಭಾಗದಲ್ಲಿ ಗೊಂದಲ‌ ಗಲಾಟೆಯನ್ನು ಉಂಟು ಮಾಡಿ ತಮ್ಮ ರಾಜಕೀಯ ಬೆಳೆ ಬೆಳೆಸಿಕೊಳ್ಳುವ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.
ಜ.17ಕ್ಕೆ ಎಂಇಎಸ್ ಆಚರಿಸುವ ಹುತಾತ್ಮ ದಿನಾಚಾರಣೆಗೂ ಮಹಾರಾಷ್ಟ್ರದ ನಾಯಕರು ಆಗಮಿಸಿ ಗಡಿ ವಿಷಯವನ್ನು ಕೆದುಕಲು ಯತ್ನಿಸಲಿದ್ದಾರೆ. ನಿಪ್ಪಾಣಿಯಲ್ಲಿ ಎರಡು ದಿನ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಿ ನೆರೆಯ ಕೊಲ್ಲಾಪುರದ ಮುಖಂಡರನ್ನು ಆಹ್ವಾನಿಸಿದ್ದಾರೆ ಅದನ್ನು ತಡೆಯಬೇಕೆಂದು ಒತ್ತಾಯಿಸಿದರು.
ಗಡಿ ಭಾಗದ ಹಳ್ಳಿಗಳಲ್ಲಿ ಮರಾಠಿಗರನ್ನು ಪ್ರಚೋಧಿಸುವ ಕೆಲಸ ಅವ್ಯಾಹತವಾಗಿ ಸಾಗುತ್ತಿದೆ. ಇಂಥ ಪ್ರಯತ್ನಗಳಿಗೆ ರಾಜ್ಯ ಸರಕಾರ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಗಡಿ ಭಾಗದ ಕಾನೂನು ಸುವ್ಯವಸ್ಥೆ ಹದಗೇಡುವ ಸಾದ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಒಂದಿಲ್ಲ ಒಂದು ನೆಪದಲ್ಲಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದು ಪ್ರಚೋಧನೆ ನೀಡುತ್ತಿರುವ ಮಹಾ ನಾಯಕರನ್ನು ಬೆಳಗಾವಿ ಗೆ ಪ್ರವೇಶಿಸದಂತೆ ನಿರ್ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಅಶೋಕ ಚಂದರಗಿ, ಶಿವಪ್ಪ ಶಮರಂತ, ಎಂ.ಜಿ.ಮಕಾನದಾರ, ಸಲೀಮ ಖತೀಬ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *