Breaking News
Home / Uncategorized / ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಬೋರ್ಡ್ ಹಾಕಿ- ಸುರೇಶ ಅಂಗಡಿ

ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿ ಬೋರ್ಡ್ ಹಾಕಿ- ಸುರೇಶ ಅಂಗಡಿ

ಬೆಳಗಾವಿ

ಸ್ಮಾಟ್೯ಸಿಟಿ ಕಾಮಗಾರಿ ಮಾಡುವ ಮುಂಚೆ ನಗರದಲ್ಲಿ ಸಾರ್ವಜನಜಕರಿಗೆ ತಿಳಿಯುವಂತೆ ನಾಮಫಲಕ ಅಳಡಿಕೆ ಮಾಡಿ ಎಂದು ಕೇಂದ್ರ ಸಚಿವ ಸುರೇಶ‌ ಅಂಗಡಿ ಹೇಳಿದರು.

ಬೆಳಗಾವಿ ಸ್ಮಾಟ್೯ಸಿಟಿ ಸಲಹಾ ಸಮಿತಿಯ ಸಭೆಯಲ್ಲಿ‌ ಮಾತನಾಡಿದರು.
ನಗರದಲ್ಲಿ ಸ್ಮಾಟ್೯ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಗುತ್ತಿಗೆ ಪಡೆದವರು ಕಾಮಗಾರಿ ಪ್ರಗತಿಯಲ್ಲಿವೆ ಎಂದು ನಾಮಫಲಕ ಅಳವಡಿಸಿದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ ಎಂದರು.

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ‌ ಕೋರೆ ಮಾತನಾಡಿ, ವೈಟ್ ಟಾಪಿಂಗ್ ಬಗ್ಗೆ ಯಾವ ರೀತಿ ಯೋಜನೆ ಮಾಡುತ್ತಿರಿ. ದಂಡುಮಂಡಳಿಯ ವ್ಯಾಪ್ತಿಯ ಪ್ರದೇಶವನ್ನು ಸ್ಮಾಟ್೯ಸಿಟಿ ಯೋಜನೆಯಲ್ಲಿ ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದರು.

ಬೆಳಗಾವಿಯ ಐತಿಹಾಸಿಕ ಸ್ಥಳಗಳ ರಕ್ಷಣೆ ಮಾಡುವ ಕೆಲಸವನ್ನು ಸ್ಮಾಟ್೯ಸಿಟಿ ಯೋಜನೆಯಲ್ಲಿ ತೆಗೆದುಕೊಂಡು ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡವ ಅಗತ್ಯವಿದೆ ಎಂದರು.

ಬೆಳಗಾವಿ ದಂಡುಮಂಡಳಿಯ ಮೀನು ‌ಮಾರುಕಟ್ಟೆಯನ್ನು ಉನ್ನತಮಟ್ಟಕ್ಕೆ ಏರಿಸುವ ಅಗತ್ಯವಿದೆ. ದಂಡುಮಂಡಳಿಯ ವ್ಯಾಪ್ತಿಯ‌ ನಗರದ ಪ್ರವೇಶಿಸುವಂತೆ ಸೌಂದರ್ಯ ಕಾಣುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ‌ ಅಭಯ ಪಾಟೀಲ ಮಾತನಾಡಿ, ಡಿಫೆನ್ಸ್ ವ್ಯಾಪ್ತಿಯಲ್ಲಿನ ಜಾಗೆಯನ್ನು ಸ್ಮಾಟ್೯ ಸಿಟಿ ಅಧಿಕಾರಿಗಳಿಗೆ ಸಹಕರಿಸದಿದ್ದರೆ ಆ ಪ್ರದೇಶದಲ್ಲಿ ಪಾಲಿಕೆಯಿಂದ ಕ್ರಮ ಕೈಗೊಳ್ಳಬಹುದೆ ನೋಡಿ ಎಂದರು.

ಸ್ಮಾಟ್೯ ಸಿಟಿ ಎಂ.ಡಿ.ಶಶಿಧರ ಕುರೇರ್ ಮಾತನಾಡಿ, ಸ್ಮಾಟ್೯ ಸಿಟಿ ಅನುದಾನ, ಪಿಪಿಪಿ, ಸ್ಮಾಟ್೯ ಸಿಟಿ ಮಷಿನಲ್ಲಿ 100 ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಪಿಪಿಪಿ ಮಾದರಿಯಲ್ಲಿ 7 ಕಾಮಗಾರಿ ಸೇರಿದಂತೆ 133.04 ಕೊಟಿ ರು. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಭೆಗೆ ತಿಳಿಸಿದರು.
ಸ್ಮಾಟ್೯ಸಿಟಿ ಯೋಜನೆಯಲ್ಲಿ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ‌‌ ಮಾಡಲಾಗಿದೆ. ಅದರಿಂದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರತಿದೆ ಎಂದರು.

ಈಗಾಗಲೇ ನಗರದಲ್ಲಿ ಬಸ್ ಸೆಲ್ಟರ್ ಗಳನ್ನು ‌ನಿರ್ಮಾಣ‌ ಮಾಡಲಾಗಿದೆ. ಬಿಡಾಡಿ ಜಾನುವಾರಿಗಳಿಗೆ ರಕ್ಷಣೆ ನೀಡುವಲ್ಲಿ 65 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ‌ ಮಾಡಲಾಗಿದೆ ಎಂದರು.

64 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದೆ. ಸ್ಮಾಟ್೯ಸಿಟಿ ಡೆಮೋ ರಸ್ತೆಗಳ‌ ಕಾಮಗಾರಿಗಳು ಒಂದು ಹಂತದಲ್ಲಿದೆ. ಎರಡು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಕಮಾಂಡೆಟ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸುಸಜ್ಜಿತವಾಗಿ ನಿರ್ಮಾಣ‌ ಮಾಡಲಾಗಿದೆ. ಜನವರಿ 29ಕ್ಕೆ ಸಿಎಂ ಅವರಿಂದ ಲೋಕಾಪರ್ಣೆ ಮಾಡಲಿದ್ದಾರೆ ಎಂದು‌ ಹೇಳಿದರು.
66. ಬಸ್ ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಸಾರ್ವಜನಿಕರಿಗೆ ಬಸ್ ಎಲ್ಲಿ ಇದೆ. ಎಂದು ಸೂಚನೆ‌ ತಿಳಿಸಲು ಈ ಬಸ್ ಸೆಲ್ಟರ್ ನಿರ್ಮಾಣ ಮಾಡಲಾಗಿದೆ ಎಂದು ಸಭೆ ತಿಳಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ , ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರರು ಇದ್ದರು

About BGAdmin

Check Also

ಡೋಂಟ್ ವರೀ….ಐ ಯಮ್ ಸ್ವಾರೀ……!

ಬೆಳಗಾವಿ- ಕೊರೋನಾ ಕಾಲಿಟ್ಟಾಗ,ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ಕೊರೋನಾ ವಾರಿಯರ್ಸ್ ಅಂತಾ ಬಿರುದು ಕೊಟ್ಟಿತು,ಕ್ಯಾಂಡಲ್ ಹಚ್ಚಿತು,ಚಪ್ಪಾಳೆ ಬಾರಿಸಿತು,ದಿನ ಕಳೆದಂತೆ ಗೌಡರ ಕುದ್ರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ