ಬೈಲಹೊಂಗಲ- ಚಿತ್ರನಟ, ಉದ್ಯಮಿ,ಯುವ ನಾಯಕ, ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ ನಡೆದಿದೆ.
*ಅದೃಷ್ಟವಶಾತ್ ಮಿಸ್ ಫೈರ್ ಆಗಿ ಶಿವರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಘಟನೆ ನಡೆದಿದೆ.ಶಿವರಂಜನ್ ಬೋಳಣ್ಣವರ್ ಮನೆ ಎದುರು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ.ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ ಮಾಹಿತಿ ಇದೆ.
ಬೈಲಹೊಂಗಲದ ಹಳೆಯ ಹನುಮಂತ ದೇವರ ದೇವಸ್ಥಾನ ಬಳಿ ಇರುವ ಶಿವರಂಜನ್ ಮನೆ ಇದ್ದು ,ಮನೆ ಎದುರು ಗುಂಡಿನ ದಾಳಿ ನಡೆದಿದೆ. ಈ ದಾಳಿಗೆ ಆಸ್ತಿ ವಿವಾದವೇ ಕಾರಣವೆಂದು ಹೇಳಲಾಗುತ್ತಿದ್ದು, ಸೋದರ ಸಮಂಧಿಯಿಂದಲೇ ಈ ಗುಂಡಿನ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ ಪಾಟೀಲ್ ದೌಡಾಯಿಸಿದ್ದು ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಿ,ತನಿಖೆ ಶುರು ಮಾಡಿದ್ದಾರೆ.
ಚಿತ್ರನಟ ಶಿವರಂಜನ್ ಬೋಳಣ್ಣವರ,ಅಮೃತ ಸಿಂಧು ಸೇರಿ ಕೆಲ ಚಲನ ಚಿತ್ರಗಳಲ್ಲಿ ನಟನೆ ಮಾಡಿದ್ದರು.ಬೋಳಣ್ಣವರ ಕುಟುಂಬ ಬೈಲಹೊಂಗಲದ ಪ್ರತಿಷ್ಠಿತ ಕುಟುಂಬವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ