ಬೆಳಗಾವಿ-ಇಂದು ಮಹಾ ಶಿವರಾತ್ರಿ,ಶಿಸ್ಮರಣೆಯಯ ಜೊತೆಗೆ ಕುಂದಾನಗರಿ ಬೆಳಗಾವಿ ಇವತ್ತು ಸಂಪೂರ್ಣವಾಗಿ ಶಿವಮಯವಾಗಿದೆ.
ಬೆಳಗಾವಿ ನಗರದ ಶಿವಾಲಯಗಳಿಗೆ ಶಿಭಕ್ತರ ದಂಡೇ ಹರಿದು ಬರುತ್ತಿದೆ.ಇಂದು ಬೆಳಿಗ್ಗೆಯಿಂದಲೇ ಭಕ್ತರು ಶಿವಾಲಯಗಳ ಎದುರು ದರ್ಶನಕ್ಕಾಗಿ ಸರದಿಯಲ್ಲಿ ನಿಂತಿರುವ ದೃಶ್ಯ ಬೆಳಗಾವಿಯಲ್ಲಿ ಸಾಮಾನ್ಯವಾಗಿತ್ತು.
ಮಹಾ ಶಿವರಾತ್ರಿಯ ಈ ದಿನ ಭಕ್ತರು ಶಿವನ ಧ್ಯಾನದಲ್ಲಿ ಇರುವ ಜೊತೆಗೆ ಉಪವಾಸ ಆಚರಿಸಿ ಮಹಾ ಶಿವರಾತ್ರಿಯನ್ಮು ಅರ್ಥಪೂರ್ಣಗೊಳಿಸಿದರು.
ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಇಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು. ಕಪಿಲೇಶ್ವರ ಮಂದಿರದಲ್ಲಿ ಇಂದು ಶಿವಭಕ್ತಿಯ ಭಂಡಾರವೇ ಹರಿದು ಬಂದಿತ್ತು,ಗಣ್ಯಾತಿ ಗಣ್ಯರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪುಣೀತರಾದರು.
ಬೆಳಗಾವಿಯ ಡಿಸಿಪಿ ವಿಕ್ರಂ ಅಮಟೆ ಅವರು ಕಪಿಲೇಶ್ವರ ಮಂದಿರದಲ್ಲಿ ನಡೆದ ಶಿವರಾತ್ರಿ ನಿಮಿತ್ಯದ ಮಹಾಪೂಜೆಯಲ್ಲಿ ಪಾಲ್ಗೊಂಡು ಶಿವ ಸ್ಮರಣೆ ಮಾಡಿದ್ದು ವಿಶೇಷವಾಗಿತ್ತು.
ಇಂದು ಬೆಳಿಗ್ಗೆಯಿಂದಲೇ ಶಿವಭಕ್ತರು ಹಣ್ಣು ಹೂವು ಖರೀಧಿಯಲ್ಲಿ ತೊಡಗಿದ್ದರು,ಹಣ್ಣು ಹೂವು ತುಟ್ಟಿಯಾದರೂ ಭಕ್ತರ ಉತ್ಸಾಹದಲ್ಲಿ ವ್ಯತ್ಯಾಸ ಕಾಣಲಿಲ್ಲ, ಶಿವನಾಮ ಜಪಿಸಿ ಕುಂದಾನಗರಿಯ ಜನ ಇವತ್ತು ಭಕ್ತಿಯಿಂದ ಮಹಾ ಶಿವರಾತ್ರಿಯನ್ನು ಆಚರಿಸಿದರು.