ಬೆಳಗಾವಿ-ಕರ್ನಾಟಕದ ಈ ಬಾರಿಯ ವಿಧಾನಸಭೆ ಚುನಾವಣೆ ರಾಜ್ಯದ ಪಾಲಿಗೆ ಹಲವಾರು ಮ್ಯಾಜಿಕ್ ಮಾಡುವ ಮುಖ್ಯ ಲಾಜಿಕ್ ಆಗಲಿದೆ ಮಹಾದಾಯಿ ನೀರಿನ ಹಂಚಿಕೆ ಕುರಿತು ಕರ್ನಾಟಕದ ವಾದ ನ್ಯಾಯ ಸಮ್ಮತ ಮತ್ತು ಯೋಗ್ಯವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಮಾಜಿ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಅವರಿಗೆ ಪ್ರೇಮ ಪತ್ರ ಬರೆಯುವ ಮೂಲಕ ಉತ್ತರ ಕರ್ನಾಟಕದ ರೈತರಲ್ಲಿ ಹೊಸ ಆಶಾ ಕಿರಣ ಮೂಡಿಸಿದ್ದಾರೆ
ಹಲವಾರು ದಶಕಗಳ ಬಳಿಕ ಗೋವಾ ಸರ್ಕಾರ ಮಹಾದಾಯಿ ವಿಚಾರ ಕುರಿತು ಸೌಹಾರ್ದದ ಮಾತುಗಳನ್ನಾಡಿದೆ ಮಹಾದಾಯಿ ನದಿ ನೀರಿನ ಹಂಚಿಕೆ ವಿವಾದ ಮಹಾದಾಯಿ ನ್ಯಾಯಾಧೀಕರಣದಲ್ಲಿದೆ ಕುಡಿಯುವ ನೀರಿಗಾಗಿ ಕರ್ನಾಟಕ 7.5 ಟಿಎಂಸಿ ನೀರು ಬೇಡುತ್ತಿರುವ ವಿಚಾರ ಸಮರ್ಪಕವಾಗಿದೆ ನ್ಯಾಯ ಸಮ್ಮತವಾಗಿದೆ ಮಾನವೀಯತೆಯ ಆಧಾರದ ಮೇಲೆ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಮಹಾದಾಯಿ ನೀರು ಹರಿಸಬೇಕು ಅನ್ನೋದು ನಮ್ಮ ಆಶಯವೂ ಆಗಿದ್ದು
ಈ ನೀರು ಕುಡಿಯಲಿಕ್ಕೆ ಮಾತ್ರ ಉಪಯೋಗಿಸುವಂತೆ ನೋಡಿಕೊಳ್ಳುವದು ಕರ್ನಾಟಕದ ಜವಾಬ್ದಾರಿ ಆಗಿದ್ದು ಮಹಾದಾಯಿ ಸಮಸ್ಯೆ ಯನ್ನು ಸೌಹಾರ್ದಯುತವಾಗಿ ಬಗೆ ಹರಿಸಲು ಅದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಲು ಗೋವಾ ಸರ್ಕಾರ ಮಾತುಕತೆಗೆ ಸಿದ್ಧ ವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ
ಗೋವಾದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದೆ ಮನೋಹರ ಪರಿಕ್ಕರ್ ಬರೆದಿರುವ ಪತ್ರಕ್ಜೆ ಗೋವಾ ಕಾಂಗ್ರೆಸ್ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎನ್ನುವದನ್ನು ಕಾಯ್ದು ನೋಡಬೇಕಾಗಿದೆ
ಗೋವಾ ಸರ್ಕಾರ ಮಹಾದಾಯಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಕರ್ನಾಟಕ ಸರ್ಕಾರ ಕಳಸಾ ಬಂಡೂರಿಗೆ ಅಡ್ಡವಾಗಿ ನಿರ್ಮಿಸಿರುವ ತಡೆಗೋಡೆಯನ್ನು ತೆರವು ಮಾಡಲು ಮುಂದಾಗುವದು ಸೂಕ್ತ