Breaking News
Home / Breaking News / ಮಹಾದಾಯಿ ಸಮಸ್ಯೆ ಒಂದೇ ಸಭೆಯಲ್ಲಿ ಇತ್ಯರ್ಥ ಆಗಲಿ….

ಮಹಾದಾಯಿ ಸಮಸ್ಯೆ ಒಂದೇ ಸಭೆಯಲ್ಲಿ ಇತ್ಯರ್ಥ ಆಗಲಿ….

Leave a comment 629 Views

ಬೆಳಗಾವಿ: ಮಹಾದಾಯಿ ವಿವಾದ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಪರೀಕ್ಕರ್ ಬರೆದಿರುವ ಪತ್ರದ ಕುರಿತು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ

ಮಹಾದಾಯಿ ಟ್ರಿಬ್ಯೂನಲ್ ನಲ್ಲಿ ನಮ್ಮ ಬೇಡಿಕೆ ೩೬.೫೫೮ ಟಿಎಂಸಿ ನೀರು ಕೇಳಿದಿವಿ‌ ಗೋವಾ ಚುನಾವಣೆಗೂ ಮುನ್ನ ಮತ್ತು ನಂತರ ಸಿಎಂ ಸಿದ್ದರಾಮಯ್ಯ, ಗೋವಾ ಸಿಎಂ ಗೆ ಪತ್ರವನ್ನು ಬರೆದಿದ್ದರು. ಆಗ ಅಲ್ಲಿನ ನೀರಾವರಿ ಸಚಿವ ಪಾಲೇಕರ್ ಅವರು ಕೆಟ್ಟ ಶಬ್ದ ಬಳಸಿ “ಡರ್ಟಿ ಪಾಲಿಟಿಕ್ಸ್” ಅಂತ ಪತ್ರ ಬರೆದು ನಮ್ಮ ಮುಖ್ಯಮಂತ್ರಿಗಳನ್ನ ಅಪಮಾನ ಮಾಡಿದ್ದಾರೆ ಮನೊಹರ್ ಪಾರಿಕ್ಕರ್ ಸಂವಿಧಾನಾತ್ಮಕವಾಗಿ ಸರ್ಕಾರಕ್ಕೆ ಪತ್ರ ಬರಿಬೇಕಿತ್ತು. ಆದ್ರೆ ಯಡಿಯೂರಪ್ಪನವರಿಗೆ ಬರೆದಿದ್ದಾರೆ. ಇದು ಡರ್ಟಿ ಪಾಲಿಟಿಕ್ಸ್ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ

ನಮಗೆ ಪತ್ರ ಬರೆದಿಲ್ಲ ಅನ್ನೋದು ನಮ್ಮ ಪ್ರತಿಷ್ಟೆ ಅಲ್ಲ. ಜನರ ಹಾಗೂ ರೈತರ ಸಲುವಾಗಿ ಅದನ್ನೆಲವನ್ನು ಬದಿಗಿಟ್ಟು ಪ್ರತಿಷ್ಟೆ ಬಿಟ್ಟು ರಾಜ್ಯದ ಹಿತದೃಷ್ಟಿಯಿಂದ ಯಾವುದೇ ಪ್ರತಿಷ್ಟೆಗೆ ಒಳಗಾಗದೇ ರಾಜ್ಯ ಸರ್ಕಾರ ಚರ್ಚೆ ನಡೆಸಲು ಯಾವುದೇ ಸ್ಥಳ ಹಾಗೂ ಯಾವುದೇ ದಿನಾಂಕದಂದು ಚರ್ಚಿಸಲು ಸಿದ್ದವಾಗಿದೆ ಎಂದರು

ಆದ್ರೆ ಈ ವಿಚಾರವನ್ನು ಒಂದೇ ಸಭೆಯಲ್ಲಿ ಇತ್ಯರ್ಥ ಗೊಳಿಸಬೇಕು
ಹಾಗೂ ರಾಜ್ಯಕ್ಕೆ ೨೦೦೨ರಲ್ಲಿ ಕೇಂದ್ರ ಸರ್ಕಾರದ ನಿಲುವಿನಂತೆ. ಈಗಾಗಲೇ ೭.೫೬ ಟಿಎಂಸಿ ನೀರನ್ನ ತುರ್ತಾಗಿ ಬಳಸಲು ಅನುವು ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ ಅನ್ನೋದು ನಮ್ಮ ನಿಲುವು ಕೂಡಲೇ ಎರಡ್ಮೂರು ದಿನದಲ್ಲಿ ಸಭೆ ಕರೆಯಲು ನಮ್ಮ ಕೋರಿಕೆ. ಸಿಎಂ ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮ ಬಿಟ್ಟು ಮಾತುಕತೆಗೆ ಬರಲು ಸಿದ್ದರಿದ್ದಾರೆ
ಆದ್ರೆ ಹಂತ ಹಂತದ ಸಭೆಗಳ ಮೂಲಕ ವಿಳಂಬ ಮಾಡೋದು ಬೇಡ. ಇದು ಕೇವಲ ರಾಜಕೀಯ ಆಗಬಾರ್ದು. ನಾವು ಯಾವುದೇ ಪ್ರೋಟೋಕಾಲ್ ಇಲ್ಲದೇ ಮಾತುಕತೆಗೆ ಸಿದ್ದವಾಗಿದ್ದೆವೆ ಎಂದು ಎಂಬಿ ಪಾಟೀಲ ತಿಳಿಸಿದ್ದಾರೆ

ಮುಖ್ಯಮಂತ್ರಿಗಳಿಗೆ ಪತ್ರ ಬರೆಯೋದನ್ನು ಬಿಟ್ಟು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ ಅಂತ ನಾವೇನು ಕೈ ಕಟ್ಡಿ ಕುಳಿತುಕೊಳ್ಳುವದಿಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿ ಗಳ ಜೊತೆ ಮಾತನಾಡಿ ಗೋವಾ ಸರ್ಕಾರ ಮಾತುಕತೆಗೆ ಕರೆದ್ರೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಅಗತ್ಯ ಬಿದ್ದರೆ ಸರ್ವ ಪಕ್ಷಗಳ ಸಭೆ ಕರೆಯುತ್ತಿವೆ ಮಶಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಸಂಪೂರ್ಣ ನಂಬಿಕೆ ನಮಗಿದೆ ಗೋವಾ ಸರ್ಕಾರ ಮಾತುಕತೆಗೆ ಎಲ್ಲಿ ಕರೆದ್ರೂ ಅಲ್ಲಿಗೆ ಹೋಗಲು ನಮ್ಮ ಸರ್ಕಾರ ಸಿದ್ಧವಿದೆ ಪ್ರತಿಷ್ಠೆಗಿಂತಲೂ ನಮಗೆ ಉತ್ತರ ಕರ್ನಾಟಕ ಭಾಗದ ರೈತರ ಹಿತ ಮುಖ್ಯವಾಗಿದೆ ಗೋವಾ ಮುಖ್ಯಮಂತ್ರಿಗಳು ಕೂಡಲೇ ಈ ಕುರಿತು ಸಭೆ ಕರೆದು ಮಾತುಕತೆ ಮಾಡಿದ್ರೆ ಒಳ್ಞೆಯದು ಇದು ನನ್ನ ವ್ಯೆಯಕ್ತಿಕ ನಿಲುವಲ್ಲ ಮುಖ್ಯಮಂತ್ರಿಗಳ ನಿಲುವು ಕೂಡಾ ಇದೇ ಆಗಿದೆ ಎಂದು ಎಂಬಿ ಪಾಟೀಲ ತಿಳಿಸಿದರು

*ರೈತರ ಜೊತೆ ಸಿಎಂ ಸಭೆ*

ಬೆಳಗಾವಿಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ರೈತರ ಸಭೆನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆಯಿತು
ಕಳೆದ ಮೂರು ದಿನಗಳಿಂದ ಡಿಸಿ ಕಚೇರಿ ಎದುರು ಪ್ರತಿಭಟಿಸುತ್ತಿದ್ದ ರೈತರುಹತ್ತು ಜನರ ರೈತ ಮುಖಂಡರೊಂದಿಗೆ ಸಿಎಂ ಸಭೆ ನಡೆಸಿದರು

ಸಚಿವ ರಮೇಶ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಿಲ್ ಬಾಕಿ ಇದೆ
ಕಬ್ಬಿನ ಬಾಕಿ ಸೇರಿ ವಿವಿಧ ಬೇಡಿಕೆ ಸ್ಪಂದಿಸುವಂತೆ ರೈತರಿಂದ ಸಿಎಂಗೆ ಮನವಿ ಮಾಡಿಕೊಳ್ಳ ಲಾಯಿತು

*ಯೋಗಿ ಆದಿತ್ಯ ನಾಥ ವಿರುದ್ಧ ಸಿಎಂ ಕಿಡಿ*

ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿರುದ್ಧ ಕಿಡಿಕಾರಿದರು

ಇಡೀ ದೇಶದಲ್ಲಿ ಯುಪಿ, ಬಿಹಾರ ದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ನಮಗೆನೂ ಪಾಠ ಮಾಡ್ತಾರೆ ಟಿಪ್ಪು ಜಯಂತಿ ಬಗ್ಗೆ ಸಿಎಂ ಯೋಗಿ ನೀಡಿದ ಹೇಳಿಕೆ ಸಿಎಂ ಕಿಡಿಕಾರಿ
ನಾನು ಯಾರು ನನ್ನ ಹೆಸರಲ್ಲಿ ರಾಮ ಇದ್ದಾನೆ ಹೀಗಾಗಿ ನಾವು ರಾಮ, ಟಿಪ್ಪು, ಹನುಮಂತ, ಕನಕದಾಸ ಹೀಗೆ ಎಲ್ಲರ ಜಯಂತಿನೂ ಮಾಡ್ತಿವಿ ಕೋಮುವಾದದ ಜನಕರು ಬಿಜೆಪಿಯವರುಬಿಜೆಪಿಯವರಿಂದ ನಾವು ಪಾಠ ಕಲಿಬೇಕಾ..? ಎಂದು ಸಿಎಂ ಪ್ರಶ್ನಿಸಿದರು

ಮಹದಾಯಿ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದೇ ಸರ್ಕಾರದ ನಿಲುವು ಆಗಿದೆ ಎಂದು ಸಿಎಂ ಹೇಳಿದರು

 

About BGAdmin

Check Also

ಪತ್ರಿಕಾ ಛಾಯಾಗ್ರಾಹಕನ ಮನೆ ದೋಚಿದ. ಕಳ್ಳರು

ಬೆಳಗಾವಿ- ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಮನೆ ಕಳುವಾಗಿದ್ದು ಸುಮಾರು ಐದು ಲಕ್ಷ ರೂ ಬೆಲೆಬಾಳುವ ಸಾಮುಗ್ರಿಗಳು …

Leave a Reply

Your email address will not be published. Required fields are marked *