ಬೆಳಗಾವಿ – ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಹೊಸ ತಾಲ್ಲೂಕುಗಳು ಸಿಗುವದರ ಜೊತೆಗೆ ಇನ್ನೂ ಕೆಲವು ಉಡುಗರೆಗಳು ಲಭಿಸಿವೆ
ಬೆಳಗಾವಿ ನಗರ ಲಸಿಕಾ ಸಂಸ್ಥೆಯ ಆವರಣದಲ್ಲಿ ಅಂದರೆ ವ್ಯಾಕ್ಸೀನ್ ಡಿಪೋದಲ್ಲಿ ಆಯುಷ್ ಔಷಧಿ ತಯಾರಿಕೆ ಕೇಂದ್ರ ಸ್ಥಾಪನೆ, ೫ ಕೋಟಿ ಮೀಸಲು ಇಡಲಾಗಿದೆ
-ಮಲಪ್ರಭಾ ನದಿಯಿಂದ ಕಿತ್ತೂರು ಕ್ಷೇತ್ರದ ಗದ್ದಿಕೆರೆಗೆ ನೀರು ತುಂಬಿಸುವ ಯೋಜನೆಗೆ ಹಸಿರು ನಿಶಾನೆ ದೊರೆತಿದೆ ಸರ್ಕಾರದ ಈ ನಿರ್ಧಾರ ಕಿತ್ತೂರು ಕ್ಷೇತ್ರದ ಐದು ದಶಕಗಳ ಬೇಡಿಕೆಯನ್ನು ಈಡೇರಿಸಿದೆ
ಕೆರೆಗಳಿಗೆ ನೀರು ತುಂಬಿಸುವ ಯೋಜನೆ,
-ರಾಯಬಾಗ ತಾಲೂಕಿನ ಕುಡಚಿ ಕ್ಷೇತ್ರದ ೧೦ ಗ್ರಾಮಗಳ ೧೯ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ ಮಂಜೂರಾತಿ ನೀಡಲಾಗಿದೆ
-ಬೆಳಗಾವಿ ಕಂದಾಯ ವಿಭಾಗದಲ್ಲಿ ಶೇ. ೪೦ ರಷ್ಟು ಕೇಂದ್ರ ಸರ್ಕಾರದ ನೆರವಿನೊಂದಿಗೆ ೨೫೦ ಹಾಸಿಗೆ ಸಾಮರ್ಥ್ಯ ದ ಸೂಪರ ಸ್ಪೇಶಾಲಿಟಿ ಆಸ್ಪತ್ರೆ ಕಾಮಗಾರಿಗೆ ಚಾಲನೆ ನೀಡಲಾಗುವದು ಎಂದು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ
-ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೆ ೧೦೦ ಹಾಸಿಗೆ
-ಕೇಂದ್ರ ರಕ್ಷಣಾ ಮಂತ್ರಾಲಯದ ಸಹಯೋಗದೊಂದಿಗೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಸ್ಥಾಪನೆ
-ಬೆಳಗಾವಿಯಲ್ಲಿ ಆಧುನಿಕ ಜಿಮ್ನಾಸ್ಟಿಕ್ ಸೌಲಭ್ಯ ೨ ಕೋಟಿ, ಮಹಿಳಾ ಅಥ್ಲೇಟ್‌ಗಳಿಗೆ ಸುಸಜ್ಜಿತ ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ೧ ಕೋಟಿ ಕಾಯ್ದಿರಿಸಲಾಗಿದೆ.
-ಬೆಳಗಾವಿ ಸ್ಮಾರ್ಟಸಿಟಿ ಕಾಮಗಾರಿಗೆ ಚಾಲನೆ
-ಬೆಳಗಾವಿಯಲ್ಲಿ ₹ ೧೦ ಕೋಟಿ ವೆಚ್ಚದಲ್ಲಿ ಖಾದಿ ಪ್ಲಾಜಾ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ
-ಐತಿಹಾಸಿಕ ತಾಣಗಳ ಪುನಶ್ಚೇತನಕ್ಕೆ ಬೆಳಗಾವಿಯಿಂದ ಬಳ್ಳಾರಿ ವರಗೆ ಪ್ರವಾಸಿ ಬೆಳ್ಳಿಶೃಂಗ ಸ್ಥಾಪನೆ
-ಬೆಳಗಾವಿ ಅಧಿವೇಶನದ ವೇಳೆ ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸುವರ್ಣ ಸೌಧದ ಬಳಿ
ಬಹು ಉದ್ದೇಶಿತ ಭವನ ನಿರ್ಮಾಣ ಹಾಗೂ ಬರಾಕ್ ನಿರ್ಮಾಣಕ್ಕೆ ೩ ಕೋಟಿ ಕಾಯ್ದಿರಿಸಲಾಗಿದೆ.