ಬೆಳಗಾವಿ- ರಾಜ್ಯಾದ್ಯಂತ ಯುಥ್ ಕಾಂಗ್ರೆಸ್ ಇಲೆಕ್ಷನ್ ನಡೆಯುತ್ತಿದೆ.ಬೆಳಗಾವಿ ಜಿಲ್ಲೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಯುಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬೈಲಹೊಂಗಲದ ಕಾರ್ತಿಕ್ ಪಾಟೀಲ ಯರಗಟ್ಟಿಯ ಅಲ್ತಾಫ್ ಮುಲ್ಲಾ ನಡುವೆ ಬಿಗ್ ಪೈಟ್ ನಡೆಯುತ್ತಿದೆ.
ಬೈಲಹೊಂಗಲದ ಕಾರ್ತಿಕ್ ಪಾಟೀಲ ಎರಡು ಬಾರಿ ಬೆಳಗಾವಿ ಜಿಲ್ಲಾ ಯುಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಈಗ ಮೂರನೇಯ ಬಾರಿಗೆ ಆಯ್ಕೆ ಬಯಸಿ ಸ್ಪರ್ದೆ ಮಾಡಿದ್ದಾರೆ ಯರಗಟ್ಟಿಯ ಅಲ್ತಾಫ್ ಮುಲ್ಲಾ ಕಾರ್ತಿಕ್ ಪಾಟೀಲರ ಪ್ರತಿಸ್ಪರ್ದಿಯಾಗಿದ್ದು ಇನ್ನೂ ಹಕವಾರು ಜನ ಬೆಳಗಾವಿ ಜಿಲ್ಲಾ ಯುಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದೆ ಮಾಡಿದ್ದಾರೆ. ಆದ್ರೆ ಕಾರ್ತಿಕ್ ಮತ್ತು ಅಲ್ತಾಫ್ ನಡುವ ನೇರಾ ನೇರ ಸ್ಪರ್ದೆ ನಡೆಯುತ್ತಿದೆ.
ಕಾರ್ತಿಕ್ ಪಾಟೀಲ ಗೆ ಹಲವಾರು ಘಟಾನುಘಟಿ ಕಾಂಗ್ರೆಸ್ ನಾಯಕರ ಬೆಂಬಲ ಇರುವದರಿಂದ ಕಾರ್ತಿಕ್ ಮೂರನೇಯ ಬಾರಿಗೆ ಸ್ಪರ್ದೆ ಮಾಡಿದ್ದು ಯರಗಟ್ಟಿಯ ಅಲ್ತಾಫ್ ಮುಲ್ಲಾ ಗಟ್ಟಿಯಾಗಿ ಓಡಾಡುತ್ತಿದ್ದಾರೆ.ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಯುಥ್ ಕಾಂಗ್ರೆಸ್ ಅಧ್ಯಕ್ಷನಾಗಲು ನನಗೊಂದು ಅವಕಾಶ ಕೊಡಿ ಎಂದು ಯುವ ಕಾರ್ಯಕರ್ತರಲ್ಲಿ ಮನವಿ ಮಾಡುತ್ತಾ ಹಳ್ಳಿ ಹಳ್ಳಿಗೆ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ.
ಯುಥ್ ಕಾಂಗ್ರೆಸ್ ಕಾರ್ಯಕರ್ತರು ಆನ್ ಲೈನ್ ಮೂಲಕ ಮತ ಚಲಾಯಿಸಿ ಅಧ್ಯಕ್ಷನನ್ನು ಆಯ್ಕೆ ಮಾಡುವ ಚುನಾವಣೆ ಇದಾಗಿದೆ.ಮತ ಚಲಾಯಿಸುವ ದಿನಾಂಕವನ್ನು ಸೆಪ್ಟೆಂಬರ್ 22 ರವರೆಗೆ ವಿಸ್ತರಿಸಲಾಗಿದೆ.
ಮತ ಚಲಾಯಿಸಲು ಮತ್ತೆ ಎರಡು ದಿನ ಅವಕಾಶ ದೊರೆತಿದ್ದು ಸ್ಪರ್ದಾಳುಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿ ಮತಯಾಚನೆ ಮಾಡುತ್ತಿದ್ದು ಎರಡು ದಿನ ಹೆಚ್ವುವರಿ ಅವಕಾಶ ದೊರೆತ್ತಿದ್ದು ಈ ಎರಡು ದಿನದಲ್ಲಿ ಮತಗಳ ಸಂಖ್ಯೆಯನ್ನು ಹೆಚ್ವಿಸಿಕೊಳ್ಳಲು ಅಲ್ತಾಫ್ ಮುಲ್ಲಾ ಮತ್ತು ಕಾರ್ತಿಕ್ ಪಾಟೀಲ ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ.