ಬೆಳಗಾವಿ- ಬೆಳಗಾವಿಯ ಕನ್ನಡದ ಕಸ್ತೂರಿ ಎಂದೇ ಕರೆಯಲ್ಪಡುವ ಕಸ್ತೂರಿ ಭಾವಿ ನೇತ್ರತ್ವದಲ್ಲಿ ಕನ್ನಡದ ಯುವಕರು ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜಾರೋಹಣ,ಮಾಡಿದ ಘಟನೆ ಮದ್ಯರಾತ್ರಿ ನಡೆದಿದೆ.
ಕನ್ನಡ ಪರ ಹೋರಾಗಾರರಿಂದ ಧ್ವಜಾರೋಹಣ ನಡೆದಿದ್ದು ಇದೇ ಮೊದಲ ಬಾರಿಗೆ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಾಡಿದೆ. ಯುವಕ ರವಿ ಬೋವಿ ಸೇರಿ ಅನೇಕರಿಂದ ಧ್ವಜಾರೋಹಣ ನಡೆದಿದೆ.
ಪಾಲಿಕೆ ಮೇಲೆ ಕನ್ನಡ ಧ್ವಜಕ್ಕಾಗಿ ಶಪಥ ಮಾಡಿದ್ದ ತಾಯಿ. ಕಸ್ತೂರಿ ಭಾವಿ ಎಂಬ ಮಹಿಳೆ ಅನೇಕ ವರ್ಷಗಳಿಂದ ಶಪಥ ಮಾಡಿದ್ದರು, ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರುವವರೆಗೆ ಚಪ್ಪಲಿ ತೊಡುವದಿಲ್ಲ ಎಂದು ಶಪಥ ಮಾಡಿದ್ದರು.
ಕನ್ನಡ ಬಾವುಟ ಹಾರಿಸೋ ವರೆಗೆ ಚಪ್ಪಲಿ ಹಾಕಲ್ಲ ಎಂದು ಶಪಥ ಕಸ್ತೂರಿ ಭಾವಿ ಅವರೇ,ನಿನ್ನೆ ಮದ್ಯರಾತ್ರಿ ಧ್ವಜಾರೋಹನ ಮಾಡಿದ್ದಾರೆ.ಎಂ ಇಎಸ್ ಪ್ರಭಾವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಕನ್ನಡ ಧ್ವಜ ಇರಲಿಲ್ಲ,
ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜಾರೋಹಣ ಮಾಡಿದ ಬಳಿಕ ಪೋಲೀಸರು
ಕನ್ನಡ ಧ್ವಜ ತೆರವುಗೊಳಿಸಿದ ಘಟನೆಯೂ ನಡೆದಿದೆ. ಈ ಸಂಧರ್ಭದಲ್ಲಿ ಪೊಲೀಸರು. ಕನ್ನಡ ಪರ ಹೋರಾಟಗಾರರ ನಡುವೆ ವಾಗ್ದಾದ ಆಗಿದೆ.
ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಹಿಳೆ.ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ