Breaking News

KAT ಪೀಠ ಕಾರ್ಯಾರಂಭ ಆಗೋದು ಯಾವಾಗ..?

ಬೆಳಗಾವಿ- ಬೆಳಗಾವಿಯಲ್ಲಿ KAT ಪೀಠ ಆಗಬೇಕೆಂದು ಎಲ್ಲರೂ ಫುಲ್ ಜೋಶ್ ನಿಂದ ಹೋರಾಟ ಮಾಡಿದ್ದರೋ ಪೀಠ ಬೆಳಗಾವಿಗೆ ಮಂಜೂರಾದ ಬಳಿಕ ಆ ಜೋಶ್ ಉಳಿದಿಲ್ಲ ಸರ್ಕಾರದ ಉದಾಸೀನತೆ ಸ್ಥಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕೆಎಟಿ ಪೀಠ ಕಾರ್ಯಾರಂಭ ಆಗುವದು ಇನ್ನುವರೆಗೆ ನೆನೆಗುದಿಗೆ ಬಿದ್ದಿದೆ

ಬೆಳಗಾವಿಯ ಸುವರ್ಣ ಸೌಧದ ಕೆಳ ಮಹಡಿಯಲ್ಲಿ ಕೆಎಟಿ ಪೀಠ ಇನ್ನೇನು ಆರಂಭವಾಯಿತು ಎನ್ನುವಷ್ಟರಲ್ಲಿ ಈಗ ಪೀಠ ಸ್ಥಾಪನೆಗೆ ಬೆರೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ ಪೀಠ ಮಂಜೂರಾಗಿ ವರ್ಷ ಕಳೆದಿದೆ ಮಂಜೂರಾದ ಪೀಠ ಕಾರ್ಯಾರಂಭ ಆಗುವದು ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ

ಬೆಳಗಾವಿಯ ನ್ಯಾಯವಾದಿಗಳು ನಿರಂತರವಾಗಿ ಒಗ್ಗಟ್ಟಿನ ಹೋರಾಟ ಮಾಡಿ ಬೆಳಗಾವಿಗೆ ಅಡಳಿತಾತ್ಮಕ ನ್ಯಾಯ ಮಂಡಳಿಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು ಸರ್ಕಾರ ಬೆಳಗಾವಿ ವಕೀಲರ ಹೋರಾಟಕ್ಕೆ ಮಣಿದು ಬೆಳಗಾವಿಗೆ KAT ಪೀಠ ಮಂಜೂರು ಮಾಡಿತ್ತು

ಸುವರ್ಣ ವಿಧಾನ ಸೌಧದ ಕೆಳ ಮಹಡಿಯಲ್ಲಿ ಕೆಎಟಿ ಪೀಠ ಕಾರ್ಯಾರಂಭ ಮಾಡಲಿದೆ ಎನ್ನುವ ಸುದ್ಧಿ ಮಾದ್ಯಮಗಳಲ್ಲಿ ಪ್ರಕಟವಾದಾಗ ಬೆಳಗಾವಿಯ ಜನ ಖುಷಿ ಪಟ್ಟಿದ್ದರು ಆದರೆ ಈಗ ಮೊತ್ತೊಂದು ಸ್ಥಳ ಗುರುತಿಸುವ ಕಾರ್ಯ ನಡೆದಿರುವದರಿಂದ KAT ಪೀಠದ ಕುರಿತು ಸಾರ್ವಜನಿಕರಿಗೆ ಭ್ರಮನಿರಸವಾದಂತಾಗಿದೆ

ಸ್ಥಳೀಯ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗನೆ ಬೆಳಗಾವಿಯಲ್ಲಿ ಕೆಎಟಿ ಪೀಠ ಕಾರ್ಯಾರಂಭ ಆಗುವಂತೆ ನೋಡಿಕೊಳ್ಳಲಿ ಬೆಳಗಾವಿಯ ನ್ಯಾಯವಾದಿಗಳ ಸಂಘ ಸರ್ಕಾರದ ಮೇಲೆ ಒತ್ತಡ ಹೇರಲಿ ಅನ್ನೋದು ನಮ್ಮೆಲ್ಕರ ಆಶಯ

 

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *