ಬೆಳಗಾವಿ-ಪ್ರಾದೇಶಿಕ ಪಾಸ್ ಪೋರ್ಟ ಅಧಿಕಾರಿ ನಾಯಿಕ್ ಅವರು ಶುಕ್ರವಾರ ಬೆಳಗಾವಿಗೆ ಭೇಟಿ ನೀಡಿ ಕೇಂದ್ರ ಅಂಚೆ ಕಚೇರಿ ಕಾರ್ಯಾಲಯ ದಲ್ಲಿ ಸಭೆ ನಡೆಸಿದರು
ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು ಬೆಳಗಾವಿ ನಗರದ ಯಾವ ಪ್ರದೇಶದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ಸ್ಥಾಪಿಸುವದು ಸೂಕ್ತ ಎನ್ನುವ ಬಗ್ಗೆ ಪಾಸ್ ಪೋರ್ಟ ಪ್ರಾದೇಶಿಕ ಅಧಿಕಾರಿ ನಾಯಿಕ ಅವರು ಸಮಾಲೋಚಣೆ ನಡೆಸಿದರು
ತಿಂಗಳಲ್ಲಿ ಬೆಳಗಾವಿ ನಗರದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ಆರಂಭಿಸುವ ಭರವಸೆ ನೀಡಿದ ನಾಯಕ ಬೆಳಗಾವಿಯ ಕೇಂದ್ರ ಅಂಚೆ ಕಚೇರಿಯಲ್ಲಿಯೇ ಪಾಸ್ ಪೋರ್ಟ ಸೇವಾ ಕೇಂದ್ರ ಸ್ಥಾಪಿಸುವ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು
ಸಂಸದ ಸುರೇಶ ಅಂಗಡಿ ಮಾತನಾಡಿ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವದು ಕೇಂದ್ರ ಆರಂಭಿಸಲು ತಡ ಮಾಡದೇ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸುರೇಶ ಅಂಗಡಿ ಸೂಚನೆ ನೀಡಿದರು
ಅಂತೂ ಇಂತೂ ಬೆಳಗಾವಿ ನಗರದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ಆರಂಭವಾಗುವ ಕಾಲ ಕೂಡಿ ಬಂದಂತಾಗಿದೆ