Breaking News

ಪತ್ರಕರ್ತರಿಗೆ ಸೌಲಭ್ಯ, ದೆಹಲಿಗೆ ನಿಯೋಗ- ಕೆ.ಬಿ. ಪಂಡಿತ್

ಬೆಳಗಾವಿ 21- ಪತ್ರಕರ್ತರ ಅಭ್ಯುದಯ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಪತ್ರಕರ್ತರ ಎಲ್ಲ ಸಮಸ್ಯೆಗಳನ್ನು ನೀಗಿಸಲು ಶೀಘ್ರ ದೆಹಲಿಗೆ ನಿಯೋಗ ಒಯ್ಯಲಾಗುವುದು ಎಂದು ರಾಷ್ಟ್ರೀಯ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಬಿ. ಪಂಡಿತ್ ಭರವಸೆ ನೀಡಿದರು.
ರವಿವಾರ ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆದ ಕರ್ನಾಟಕ ಪತ್ರಕರ್ತರ ವಿವಿದೊದ್ದೇಶಗಳ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಪಿತ ಪತ್ರಿಕೋದ್ಯಮ ಇಂದು ಕ್ಷೇತ್ರಕ್ಕೆ ಕೆಟ್ಟ ಪಿಡುಗಾಗಿದ್ದು, ಇದನ್ನು ಹೊಗಲಾಡಿಸಲು ಯತ್ನಿಸುವ ಅಗತ್ಯ ಇದೆ. ಸಮಾಜದ ಪ್ರಮುಖ ಅಂಗಗಳಲ್ಲಿ ಒಂದಾದ ಪತ್ರಿಕೋದ್ಯಮ ತನ್ನ ಗೌರವ, ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದರತ್ತ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಇಂಡಿಯನ್ ಜರ್ನಲಿಸ್ಟ್ ಯುನಿಯನ್ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹರಿಯಾಣಾದ ಪುರುಷೊತ್ತಮ ಮತ್ತು ಐಜೆಯು ಮಹಾರಾಷ್ಟ್ರ ಘಟಕದ ಅಧ್ಯಕ್ಷ ನಾರಾಯಣ ಪಾಂಚಾಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪತ್ರಕರ್ತರ ಸಂಘದ ಸದಸ್ಯರಿಗೆ ಸೌಲಭ್ಯ ಕಲ್ಪಿಸಲು ಸರ್ವ ಪ್ರಯತ್ನ ಮಾಡಲಾಗುವದು ಎಂದರು.
ನಾಗನೂರು ರುದ್ರಾಕ್ಷಿಮಠದ ಶ್ರೀ ಶಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಪತ್ರಕರ್ತರ ಅಭ್ಯುದಯ ಕಂಡುಕೊಳ್ಳುವದರ ಜೊತೆಗೆ ಪತ್ರಕರ್ತರು ಸಮಾಜ ಸುಧಾರಣೆ ಕೆಲಸ ಮಾಡಬೇಕೆಂದು ಸಲಹೆ ಮಾಡಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *