ಬೆಳಗಾವಿ-ಗೋಕಾಕ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಜಾ ಪ್ರಭುತ್ವದ ಗೆಲವು ಆದಂತೆ ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಸೋಲಾಗಿ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ ಎಂದು ವೇಣುಗೋಪಾಲ ವಿಶ್ವಾಸ ವ್ಯೆಕ್ತ ಪಡಿಸಿದರು.
ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ ಕುದುರೆ ವ್ಯಾಪಾರದ ಒಂದು ಭಾಗವಾಗಿದ್ದಾರೆ ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಎಂದು ವೇಣುಗೋಪಾಲ ಪ್ರಶ್ನಿಸಿದರು.
ಕಳೆದ ಬಾರಿ ಗುಜರಾತ್, ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಲ್ಲಿಯ ಜನ ಪಾಠ ಕಲಿಸಿದ್ದಾರೆ ಅದೇ ರೀತಿ ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆ
ಕುದುರೆ ವ್ಯಾಪಾರ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಪ್ರವಾಹದಿಂದ ಬೆಳಗಾವಿ ಜಿಲ್ಲೆ ಅದರಲ್ಲೂ ಗೋಕಾಕ್ ನಲ್ಲಿ ಜನ ಕಷ್ಟದಲ್ಲಿದ್ದಾರೆ
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸರಿಯಾಗಿ ನೆರೆಸಂತ್ರಸ್ತರ ಸಹಾಯಕ್ಕೆ ಧಾವಿಸಿಲ್ಲ
ಸತೀಶ್ ಜಾರಕಿಹೊಳಿ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ರು
ಗೋಕಾಕ್ ಬಿಜೆಪಿ ಅಭ್ಯರ್ಥಿ ಪ್ರವಾಹ ವೇಳೆ ಎಲ್ಲಿ ಇದ್ರು ಎಂದು ವೇಣುಗೋಪಾಲ ರಮೇಶ್ ಜಾರಕಿಹೊಳಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಎಂಎಲ್‌ಎಗಳ ಕುದುರೆ ವ್ಯಾಪಾರ ಅಮಿತ್ ಷಾ ನೇತೃತ್ವದಲ್ಲಿ ನಡೆದಿದೆ ಎಂದು
ಗೋಕಾಕ್‌ನಲ್ಲಿ ಕೆ.ಸಿ.ವೇಣುಗೋಪಾಲ್ ಆರೋಪ ಮಾಡಿದರು
ಮಹಾರಾಷ್ಟ್ರದಲ್ಲಿ ಕೊನೆಗೂ ಪ್ರಜಾಪ್ರಭುತ್ವದ ಗೆಲುವಾಗಿದೆ ಅದೇ ರೀತಿ ಕರ್ನಾಟಕದಲ್ಲೂ ಆಗುತ್ತೆ
ನಮ್ಮ ನಿಲುವು ಸ್ಪಷ್ಟ, ನಾವು ಬಿಜೆಪಿ ವಿರುದ್ಧ ಇದ್ದೇವೆ
ಅಧಿಕಾರದಿಂದ ಬಿಜೆಪಿ ದೂರವಿಡಲು ಎಲ್ಲ ರೀತಿ ದಾರಿಗಳು ತೆರೆದಿವೆ ಮತ್ತೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಆದ್ರೆ ಸಿದ್ದರಾಮಯ್ಯ ಹೊರಗಿಬೇಕು ಅಂತಾ ಜೆಡಿಎಸ್ ಪ್ರಸ್ತಾಪ ಇಟ್ಟಿದೆಯಾ ಅಂತಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು
ಇಲ್ಲ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಕೆಸಿವಿ ಸ್ಪಷ್ಠ ಪಡಿಸಿದರು
ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಜಾರಕಿಹೊಳಿ ಐಜಿ ಸನದಿ,ವಿನಯ ನಾವಲಗಟ್ಟಿ ಚಿಂಗಳೆ,ಸುನೀಲ ಹನಮಣ್ಣವರ,ಬಸವರಾಜ ಶೇಗಾವಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು