ಬೆಳಗಾವಿ
ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ಚೀಲ ತುಂಬಿಕೊಂಡು ಹೊಗುತ್ತಿದ್ದ ಲಾರಿಯೊಂದು ಖಾನಾಪೂರ ಸಮೀಪ ಪಲ್ಟಿಯಾಗಿದ್ದು ಲಾರಿಯಲ್ಲಿದ್ದ ಎಲ್ಕ ಅಕ್ಜಿ ಚೀಲಗಳನ್ನು ಸಾರ್ವಜನಿಕರು ಹೊತ್ಕೊಂಡು ಹೋದ ಘಟನೆ ನಡೆದಿದೆ
ಖಾನಾಪುರ ತಾಲೂಕಿನ ಗುಂಡೊಳ್ಳಿ ಗ್ರಾಮದ ಸಮೀಪವಿರುವ ಸೇತುವೆ ಬಳಿ ನಿನ್ನೆ ತಡ ರಾತ್ರಿ ಯಲ್ಲಿ ಲಾರಿ ಪಲ್ಟೀಯಾಗಿದೆ ಇಂದು ಬೆಳಗಿನ ಜಾವ ಈ ಸುದ್ಧಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಜನ ತಂಡೋಪ ತಂಡವಾಗಿ ಬಂದು ಇಡೀ ಲಾರಿಯನ್ನು ಖಾಲಿ ಮಾಡಿದ್ದಾರೆ
ಅಕ್ಕಿ ಚೀಲ ತುಂಬಿಕೊಂಡು ಹೋಗುತ್ತಿದ್ದಾಗ ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿತ್ತು ಗಂಗಾವತಿಯಿಂದ ಖಾನಾಪುರ ಮಾರ್ಗವಾಗಿ ಗೋವಾಗೆ ಹೊರಟಿದ್ದ ಲಾರಿಯಲ್ಲಿ ಸುಮಾರು ೧೭ಟನ್ ಅಂದರೆ ೬೯೫ ಅಕ್ಕಿ ಚೀಲಗಳು ಇದ್ದವು ಎಂದು ಅಂದಾಜಿಸಲಾಗಿದೆ.
ಲಾರಿ ಪಲ್ಟಿಯಾಗಿದ್ದರಿಂದ
ಬೆಳಗಾಗುವಷ್ಟರಲ್ಲಿ ಅಕ್ಕಿ ಚೀಲ ಹೊತ್ತೊಯ್ದ ಸುತ್ತ ಮುತ್ತಲಿನ ಗ್ರಾಮಸ್ಥರು ಬೆಳಗಿನ ಜಾವ ಲಾಟರಿ ಹೊಡೆದಿದ್ದಾರೆ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ