ಬೆಳಗಾವಿ-ಜಿಲಿಟೀನ್ ಇಟ್ಕೊಂಡು ಬೈಕ್ ಮೇಲೆ ಬೇಟೆಯಾಡಲು ಹೊರಟಿದ್ದ ಯುವಕ ಟ್ರ್ತಾಕ್ಟರ್ ಗೆ ಡಿಕ್ಕಿ ಹೊಡೆದು,ಜಿಲಿಟೀನ್ ಸ್ಪೋಟಗೊಂಡು ಯುವಕನ ದೇಹ ಛಿದ್ರ,ಛುದ್ರವಾದ ಘಟನೆ ಖಾನಾಪೂರ ತಾಲ್ಲೂಕಿನ ನಂದಗಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ನಂದಗಡ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಾಚಿಗಡ ಕ್ರಾಸ್ ಬಳಿ ,ಬೈಕ್ ಮತ್ತು ಟ್ರ್ತಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನ ಬಳಿ ಇದ್ದ ಜಿಲಿಟೀನ್ ಬಾಂಬ್ ಸ್ಪೋಟಗೊಂಡು ಶಿವಮೊಗ್ಗ ಮೂಲದ ಯುವಕ ಸ್ಥಳದಲ್ಲೇ ಛಿದ್ರವಾಗಿದ್ದಾನೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಯುವಕನ ಅಂಗಾಗಗಳು ಅಕ್ಕ,ಪಕ್ಕದ ಗದ್ದೆಗಳಲ್ಲಿ ಬಿದ್ದಿವೆ. ಸ್ಥಳಕ್ಕೆ ನಂದಗಡ,ಮತ್ತು ಖಾನಾಪೂರ ಪೋಲೀಸರು ದೌಡಾಯಿಸಿದ್ದಾರೆ.
ಖಾನಾಪೂರದ ಬೀಡಿ ಗ್ರಾಮದ ಹತ್ತಿರ ಶಿವಮೊಗ್ಗ ಮೂಲದ ಬೇಟೆಗಾರರು ವಾಸವಾಗಿದ್ದಾರೆ.ಅವರು ಖಾನಾಪೂರ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ನೀರು ಕುಡಿಯಲು ಬರುವ ಸ್ಪಾಟ್ ಗಳಲ್ಲಿ ಜಿಲೀಟೀನ್ ಬಾಂಬ್ ಸಿಡಿಸಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಾರೆ ಎಂದು ತಿಳಿದು ಬಂದಿದೆ,ಇಂದು ಬೆಳಿಗ್ಗೆ ಈ ಯುವಕ ಜಿಲಿಟೀನ್ ಇಡಲು ಹೊರಟಿರುವಾಗ ಮಾರ್ಗದ ಮದ್ಯದಲ್ಲಿ ಅಪಘಾತ ಸಂಭವಿಸಿ ಈ ಜಿಲೀಟಿನ್ ಯುವಕನ ಬಲಿ ಪಡೆದಿದೆ.
ಈ ಯುವಕನ ಬಳಿ ಜಿಲಿಟೀನ್ ಬಂದಿದ್ದು ಹೇಗೆ,ಆತ ಶಿವಮೊಗ್ಗದಿಂದ ಖಾನಾಪೂರ ಕ್ಕೆ ಬಂದಿದ್ದೇಕೆ,ನಿಜವಾಗಿಯೂ ಈ ಯುವಕ ಬೇಟೆಗಾರನೋ ಅಥವಾ ಕ್ವಾರಿಯಲ್ಲಿ ಕೆಲಸ ಮಾಡುವ ಹುಡುಗನೋ ಎನ್ನುವದು ಪೋಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ