ಖಾನಾಪೂರ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಲೇ ಇದೆ,ಎನ್ನುವದಕ್ಕೆ ಇತ್ತೀಚಿಗೆ ಖಾನಾಪೂರ ಅರಣ್ಯದಲ್ಲಿ ನಡೆದಿರುವ ಗುಂಡಿನ ದಾಳಿಯೇ ಅದಕ್ಕೆ ಸಾಕ್ಷಿಯಾಗಿದೆ.ನವೀಲು ಬೇಟೆಯಾಡಲು ಹಾರಿಸಿದ ಗುಂಡು ಓರ್ವನನ್ನು ಬಲಿ ಪಡೆದಿದೆ.ಬೇಟೆಗಾರರಿಗೆ ಬ್ರೇಕ್ ಹಾಕುವವರು ಯಾರು ? ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ.
ಬೆಳಗಾವಿ: ಬೆಳಗಾವಿಯಲ್ಲಿ ಮಧ್ಯರಾತ್ರಿ ಗುಂಡಿನ ದಾಳಿಗೆ ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ದೂರು ದಾಖಲಾಗಿದ್ದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಅಲ್ತಾಫ್ ಗೌಸ ಮಕಾನಂದಾರ(28) ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ.ಹಲಸಿ ಗ್ರಾಮದ ಮಕ್ತುಮ್ ತಹಶಿಲ್ದಾರರ, ಉಸ್ನಾನಸಾಬ್ ತಹಶಿಲ್ದಾರರ, ಮಲೀಕ ಶಾಹಿವಾಲೆ ವಶಕ್ಕೆ ಪಡೆಯಲಾಗಿದೆ.ಆಲ್ತಾಫ ಸೇರಿ ನಾಲ್ವರು ಕಾಡು ಹಂದಿ ಮತ್ತು ನವಿಲಿನ ಬೇಟೆಗೆ ಕಾಡಿಗೆ ಹೋಗಿದ್ದರು.ಗ್ರಾಮದಿಂದ ಎರಡು ಕಿಮೀ ದೂರ ಇರುವ ಹಲಸಿ ಬೇಕವಾಡ ರಸ್ತೆಯ ನರಸವಾಡಿ ಸೇತುವೆ ಬಳಿ ಬೇಟೆಗಾಗಿ ಹೊಂಚು ಹಾಕಿಕುಳಿತಿದ್ದರು.
ಗುಂಪಿನಲ್ಲಿದ್ದ ಒಬ್ಬಾತ ತನ್ನ ಬಳಿಯಿದ್ದ ನಾಡಾ ಬಂದೂಕಿನಿಂದ ಗುಂಡು ಹಾರಿಸಿ ನವಿಲಿನ ಹತ್ಯೆ ಮಾಡಿದ್ದಾರೆ.ಬಳಿಕ ಮತ್ತೊಂದು ನವಿಲಿಗೆ ಗುರಿಯಿಟ್ಟಾಗ ಗುರಿ ತಪ್ಪಿ ಆಲ್ತಾಫಗೆ ತಗುಲಿದೆ.ಬಳಿಕ ಅಲ್ತಾಪಗೌಸ ಶವವನ್ನು ತರಾರಿಯಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಕುಟುಂಬಸ್ಥರು ನಂದಗಡ ಪೊಲೀಸ ಠಾಣೆಯಲ್ಲಿ ಆರು ಜನರ ವಿರುದ್ಧ ದೂರು ಕೊಟ್ಟಿದ್ದಾರೆ.
ನವಿಲುಗಳು ಬೇಟೆ ವೇಳೆ ಅವಘಡ ಸಂಭವಿಸಿದೆ.ಬಂದೂಕು ನವಿಲು ಮಾಂಸ ವಶಕ್ಕೆ ಪಡೆಯಲಾಗಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆನಂದಗಡ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.