ಖಾನಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಮಾಣ ಮಾಡಿಸುವ ಅಸ್ತ್ರ ಪ್ರಯೋಗಿಸಿ ಭಿನ್ನಮತ ಶಮನ ಮಾಡುವ ಪ್ರಯತ್ನ ಮಾಡಿದ್ದಾರೆ.
ನಿನ್ನೆ ಖಾನಾಪೂರದಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆ ನಡೆಯಿತು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ , ಖಾನಾಪೂರದಲ್ಲಿ ಜೇಣು ಉತ್ಪಾದನಾ ಕೇಂದ್ರ,ಹಾಸ್ಟೇಲ್ ಗಳ ನಿರ್ಮಾಣ, ಮಹಾದಾಯಿ,ಕಳಸಾ ಬಂಡೂರಿಗೆ ಗ್ರೀನ್ ಸಿಗ್ನಲ್ ಸಿಕ್ಕ ಮೇಲೆ ಬಾಂಧಾರಗಳ ನಿರ್ಮಾಣಕ್ಕೆ ಅನುದಾನ,ಖಾನಾಪೂರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿದಂತೆ ಹತ್ತು ಹಲವು ಭಂಪರ್ ಕೊಡುಗೆಗಳನ್ನು ಕೊಡುವದಾಗಿ ಘೋಷಣೆ ಮಾಡಿದ ಬಳಿಕ ಈ ಕ್ಷೇತ್ರದಲ್ಲಿ ಹಲವಾರು ಜನ ಆಕಾಂಕ್ಷಿಗಳು ಇದ್ದಾರೆ ಅವರೆಲ್ಲೂ ಒಂದಾಗ ಬೇಕು ಆಕಾಂಕ್ಷಗಳು ಯಾರು ಮುಂದೆ ಬನ್ನಿ ಎಂದಾಗ ಬರೊಬ್ಬರಿ ಹತ್ತು ಜನ ಆಕಾಂಕ್ಷಿಗಳು ನಿಂತುಕೊಂಡಾಗ,ಶಾಲೆಯ ಮಕ್ಕಳು ನಿಲ್ಲುವ ಹಾಗೆ ಒಂದೇ ಸಾಲಿನಲ್ಲಿ ನಿಲ್ಲಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.
10 ಜನ ಆಕಾಂಕ್ಷಿಗಳನ್ನು ನೋಡಿ ಬೆರಗಾದ ಸಿಎಂ ಬೊಮ್ಮಾಯಿ ವೇದಿಕೆ ಮೇಲೆ ಭಿನ್ನಮತ ಶಮನಕ್ಕೆ ಒಂದು ಹೊಸ ಪ್ರಯೋಗ ಮಾಡಿದ್ರು.ಖಾನಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಆಕಾಂಕ್ಷಿಗಳು ಒಂದಾಗಿ ಕಮಲ ಅರಳಿಸಬೇಕು.ನಮ್ಮಲ್ಲಿಯ ಒಡಕಿನಿಂದ ಬೇರೆ ಪಕ್ಷ ಇಲ್ಲಿ ಗೆದ್ದಿದೆ, ಇದಕ್ಕೆ ಮುಂದಿನ ಸಲ ಅವಕಾಶ ನೀಡಬಾರದು.ಪಕ್ಷದ ನಾಯಕರು ಯಾರಿಗೆ ಟಿಕೆಟ್ ಕೊಟ್ಟರೂ ಬೆಂಬಲ ನೀಡಬೇಕು.ಆಕಾಂಕ್ಷಿಗಳು ಎಲ್ಲರೂ ಪಕ್ಷದ ನಿರ್ಧಾರಕ್ಕೆ ಬದ್ದವಾಗಿ ಇರಬೇಕು. ಎಂದು ಹೇಳಿ,ಎಲ್ಲಾ ಆಕಾಂಕ್ಷಿಗಳನ್ನು ಸಾಲಾಗಿ ನಿಲ್ಲಿಸಿ ಜನರ ಮುಂದೆ ಸಿಎಂ ಬಸವರಾಜ್ ಬಿಮ್ಮಾಯಿ ಪ್ರಮಾಣ ವಚನ ಬೋಧಿಸಿದರು. ಸ
ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತೇನೆ.ಕ್ಷೇತ್ರದ ಹಲವಾರು ಆಂಕಾಕ್ಷಿಗಳಲ್ಲಿ ನಾನು ಒಬ್ಬ.ಪಕ್ಷ ಯಾರಿಗೆ ಬಿ ಫಾರಂ ಕೊಟ್ಟರೂ, ಪ್ರಾಮಾಣಿಕವಾಗಿ ದುಡಿದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಒಗ್ಗೂಡಿ ಕೆಲಸ ಮಾಡುತ್ತೇವೆ.ಖಾನಾಪುರ ಕ್ಷೇತ್ರದ ಮತದಾರರೇ ನನ್ನ ದೇವರು, ಅವರ ಸೇವೆ ಮಾಡುತ್ತೇವೆ.ಎಂದು ಖಾನಾಪೂರ ಕ್ಷೇತ್ರದ ಜನರ ಮುಂದೆ ಪ್ರಮಾಣ ಮಾಡುತ್ತೇವೆ.ಎಂದು 10 ಜನ ಟಿಕೆಟ್ ಆಕಾಂಕ್ಷಿಗಳ ಕೈ ಮುಂದೆ ಮಾಡಿಸಿ ಪ್ರಮಾಣ ಬೋಧಿಸಿದ ಸಿಎಂ ಬಸವರಾಜ ಬೊಮ್ಮಾಯಿ ಖಾನಾಪೂರ ಕ್ಷೇತ್ರದಲ್ಲಿ ಇರುವ ಹತ್ತು ಜನ ಆಕಾಂಕ್ಷಿಗಳ ನಡುವೆ ಒಮ್ಮತ ಮೂಡಿಸಿದ್ರು.
ಅರವಿಂದ ಪಾಟೀಲ್, ವಿಠ್ಠಲ್ ಹಲಗೇಕರ್, ಪ್ರಮೋದ್ ಕೋಚೇರಿ, ಡಾ.ಸೋನಾಲಿ ಸೋರ್ನಬತ್.ಮಂಜುಳಾ ಕಾಪ್ಸೆ, ಸಂಜಯ ಕೋಬಲ್, ವಿಠ್ಠಲ್ ಹಲಗೇಕರ್, ಧನಶ್ರೀ ಸರದೇಸಾಯಿ, ಜ್ಯೋತಿಬಾ ರೇಮಾಣಿ.ಈ ಎಲ್ಲರಿಗೂ ವೇದಿಕೆ ಮೇಲೆಯೇ ಪ್ರಮಾಣ ಮಾಡಿದ್ರು.